WPA2 ಸೆಕ್ಯೂರಿಟಿ ಕ್ರಾಕ್: ಫೋನ್‌ನಲ್ಲಿ ವೈ-ಫೈ ಬಳಸುತ್ತಿದ್ದರೇ ತಕ್ಷಣ ನಿಲ್ಲಿಸಿ..!!
ವೈ-ಫೈ ಸೆಕ್ಯೂರಿಟಿಯನ್ನು ಓದಗಿಸುತ್ತಿರುವ WPA2(ವೈರ್'ಲೆಸ್ ಅಕ್ಸೆಸ್ ಪಾಯಿಂಟ್) ವೈಫೈ ಸೆಕ್ಯೂರಿಟಿ ಪ್ರೋಟೋಕಾಲ್ ಅನ್ನು KRACK ಎಂಬ ಕೋಡ್ ಮೂಲಕ ಆಟ್ಯಾಕ್ ನಡೆದಿದೆ ಎನ್ನಲಾಗಿದೆ. ಈಗಾಗಲೇ ಇದನ್ನು ಸರಿ ಮಾಡಲು ಮೈಕ್ರೋಸಾಫ್ಟ್, ಆಪಲ್ ಮತ್ತು ಗೂ
ವೈ-ಫೈ ಮೂಲಕ ಇಂಟರ್‌ನೆಟ್ ಬಳಕೆ ಮಾಡುತ್ತಿರುವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಹ್ಯಾಕರ್‌ಗಳು ವೈ-ಫೈ ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಕಾರಣ ವೈ-ಫೈ ಸೆಕ್ಯೂರಿಟಿ ಫೇಲ್ ಆಗಿದ್ದು, WPA2 ಹ್ಯಾಕ್ ಆಗಿದೆ ಎನ್ನಲಾಗಿದೆ.

ಓದಿರಿ: ದೀಪಾವಳಿ ನಂತರದಲ್ಲಿ ಮತ್ತೊಮ್ಮೆ ಜಿಯೋ ಫೋನ್ ಬುಕ್ ಮಾಡಿ..!!
ವೈ-ಫೈ ಸೆಕ್ಯೂರಿಟಿಯನ್ನು ಓದಗಿಸುತ್ತಿರುವ WPA2(ವೈರ್'ಲೆಸ್ ಅಕ್ಸೆಸ್ ಪಾಯಿಂಟ್) ವೈಫೈ ಸೆಕ್ಯೂರಿಟಿ ಪ್ರೋಟೋಕಾಲ್ ಅನ್ನು KRACK ಎಂಬ ಕೋಡ್ ಮೂಲಕ ಆಟ್ಯಾಕ್ ನಡೆದಿದೆ ಎನ್ನಲಾಗಿದೆ. ಈಗಾಗಲೇ ಇದನ್ನು ಸರಿ ಮಾಡಲು ಮೈಕ್ರೋಸಾಫ್ಟ್, ಆಪಲ್ ಮತ್ತು ಗೂಗಲ್ ಕಾರ್ಯನಿರ್ವಹಿಸುತ್ತಿವೆ.

ಉಚಿತ ವೈ-ಫೈಗಳನ್ನು ಬಳಕೆ ಮಾಡಿಕೊಳ್ಳಬೇಡಿ:
ಈಗಾಗಲೇ ಜಾಗತಿಕವಾಗಿ ಸುಮಾರು ಶೇ.41ರಷ್ಟು ಸ್ಮಾರ್ಟ್‌ಫೋನ್‌ಗಳು ವೈ-ಫೈ ಮೂಲಕ ಹ್ಯಾಕ್ ಆಗಿದೆ ಎನ್ನಲಾಗಿದ್ದು, ಈ ಸಮಸ್ಯೆ ಪರಿಹಾರವಾಗುವ ವರೆಗೂ ನಿಮ್ಮ ಫೋನ್ ನಲ್ಲಿ ಸಿಕ್ಕ-ಸಿಕ್ಕ ಉಚಿತ ವೈ-ಫೈಗಳನ್ನು ಬಳಕೆ ಮಾಡಿಕೊಳ್ಳುವುದು ಸೂಕ್ತವಲ್ಲ ಎನ್ನಲಾಗಿದೆ.

ಕೇವಲ ಆಂಡ್ರಾಯ್ಡ್ ಮಾತ್ರವಲ್ಲ;
ಕೇವಲ ಆಂಡ್ರಾಯ್ಡ್ ಮಾತ್ರವಲ್ಲ ಆಪಲ್, ವಿಂಡೋಸ್ ಫೋನ್‌ಗಳು ಸಹ ಈ ದಾಳಿಗೆ ಸಿಲುಕಿದೆ ಎನ್ನಲಾಗಿದ್ದು, KRACK WPA2 ಅನ್ನೇ ಗುರಿಯಾಗಿಟ್ಟುಕೊಂಡು ದಾಳಿ ಮಾಡುತ್ತಿದ್ದು, ವೈ-ಫೈ ಬಳಸುವು ಎಲ್ಲಾ ಡಿವೈಸ್‌ಗಳು ತೊಂದರೆಗೆ ಸಿಕ್ಕಿಹಾಕಿಕೊಳ್ಳಲಿವೆ.

ಎಚ್ಚರ ವಹಿಸಿ:
WPA2 ಸೆಕ್ಯೂರಿಟಿಯನ್ನು ಬಲ ಪಡಿಸುವ ಕಾರ್ಯವೂ ನಡೆಯುತ್ತಿದ್ದು, ಹೊಸ ಆಪ್‌ಡೇಟ್ ನೀಡುವ ವರೆಗೂ ವೈ-ಫೈ ಮೂಲಕ ಎಲ್ಲಿಯೂ ಇಂಟರ್‌ನೆಟ್ ಬಳಕೆ ಮಾಡಿಕೊಳ್ಳಬೇಡಿ. ಬಳಕೆ ಮಾಡಿದರೆ ಹ್ಯಾಕರ್ಸ್ ನಿಮ್ಮ ಫೋನ್‌ನಲ್ಲಿರುವ ಸಂಪೂರ್ಣ ಮಾಹಿತಿಯನ್ನು ಕದಿಯುವು ಸಾಧ್ಯತೆ ಇದೆ.


Click it and Unblock the Notifications








