Home
ಸುದ್ದಿಜಾಲ

X ಒಡೆಯನ ಈ ನಡೆ ಸಾಮಾಜಿಕ ಜಾಲತಾಣ ವಲಯದಲ್ಲಿ ಅಚ್ಚರಿ ಮೂಡಿಸಿದೆ!

ಟ್ವಿಟರ್‌ ಎಲಾನ್‌ ಮಸ್ಕ್‌ ಕೈ ಸೇರಿದ ಬಳಿಕ ಹಲವು ಮಹತ್ತರ ಬದಲಾವಣೆಗಳು ನಡೆದಿರುವುದು ನಿಮಗೆ ತಿಳಿದೆ ಇದೆ. ಇತ್ತೀಚಿಗಷ್ಟೆ ಟ್ವಿಟರ್‌ ಅನ್ನು X (ಎಕ್ಸ್‌) ಹೆಸರಿನಿಂದ ಮರು ನಾಮಕರಣ ಮಾಡಿದ್ದು, ದೊಡ್ಡ ಅಚ್ಚರಿಯೇ ಸರಿ. ಅದರ ಬೆನ್ನಲ್ಲೇ ಎಲಾನ್‌ ಮಸ್ಕ್‌ ಇದೀಗ ಮತ್ತೊಂದು ಕ್ರಾಂತಿಕಾರಕ ಬದಲಾವಣೆಯ ಹೆಜ್ಜೆ ನೀಡುವ ಸೂಚನೆ ನೀಡಿದ್ದಾರೆ.

ಹೌದು, ಎಲಾನ್‌ ಮಸ್ಕ್‌ ಮಾಲೀಕತ್ವದ X ಸಾಮಾಜಿಕ ಜಾಲತಾಣದಲ್ಲಿ ಅತೀ ಶೀಘ್ರದಲ್ಲೇ ಹೊಸ ಬದಲಾವಣೆ ಸೇರ್ಪಡೆ ಆಗಲಿದೆ. ಅದುವೇ X ಎಕ್ಸ್‌ (ಟ್ವಿಟರ್‌) ಪ್ಲಾಟ್‌ಫಾರ್ಮ್ ನಲ್ಲಿ ಇನ್ನು ವಿಡಿಯೋ ಕರೆ ಹಾಗೂ ವಾಯಿಸ್‌ ಕರೆ ಫೀಚರ್‌ಗಳು ಸೇರಲಿವೆ ಎಂದು ಎಲಾನ್‌ ಮಸ್ಕ್‌ ಅವರು ತಮ್ಮ ಎಕ್ಸ್‌ (ಟ್ವಿಟ್‌ ಮೂಲಕ) ತಾಣದಲ್ಲಿ ಮಾಹಿತಿ ಶೇರ್ ಮಾಡಿದ್ದಾರೆ.

X ಒಡೆಯನ ಈ ನಡೆ ಸಾಮಾಜಿಕ ಜಾಲತಾಣ ವಲಯದಲ್ಲಿ ಅಚ್ಚರಿ ಮೂಡಿಸಿದೆ!

ಎಕ್ಸ್‌/ ಟ್ವಿಟರ್‌ ಸಂಸ್ಥೆಯು ಪ್ಲಾಟ್‌ಫಾರ್ಮ್ ನಲ್ಲಿ ವೀಡಿಯೊ ಮತ್ತು ಆಡಿಯೊ ಕರೆಗಳನ್ನು ಸೌಲಭ್ಯ ಪ್ರಾರಂಭಿಸಲಿದೆ. ಈ ಬಗ್ಗೆ ಎಲಾನ್‌ ಮಸ್ಕ್ ಕೆಲವು ಫೀಚರ್‌ ಗುಣಲಕ್ಷಣಗಳನ್ನು ಪಟ್ಟಿ ಶೇರ್‌ ಮಾಡಿದ್ದಾರೆ. ಅಂದಹಾಗೆ ಈ ಸೇವೆಯು ಐಓಎಸ್‌, ಆಂಡ್ರಾಯ್ಡ್‌, ಮ್ಯಾಕ್‌ ಮತ್ತು ಪಿಸಿ ಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.

ಹಾಗೆಯೇ ಪ್ಲಾಟ್‌ಫಾರ್ಮ್ ನಲ್ಲಿ ವೀಡಿಯೊ ಮತ್ತು ಆಡಿಯೊ ಕರೆಗಳ ಮಾಡಲು ಯಾವುದೇ ಫೋನ್ ಸಂಖ್ಯೆ ಅಗತ್ಯವಿಲ್ಲ ಎಂದಿದ್ದಾರೆ. ಅಲ್ಲದೇ ಈ ಫೀಚರ್‌ ಎಕ್ಸ್‌ ನಲ್ಲಿ ಯಾವಾಗ ಪ್ರಾರಂಭಿಸಬಹುದು ಎಂಬುದರ ಕುರಿತು ಎಲಾನ್‌ ಮಸ್ಕ್ ಹೆಚ್ಚಿನ ಮಾಹಿತಿ ಹೊರಹಾಕಿಲ್ಲ. ವೀಡಿಯೊ ಮತ್ತು ಆಡಿಯೊ ಕರೆ ಎಕ್ಸ್‌ಗೆ ಬರುತ್ತಿದೆ ಎಂದು ಮಾತ್ರ ಹೇಳಿದ್ದಾರೆ.

ಎಕ್ಸ್‌ ತಾಣದಲ್ಲಿ ಎಲಾನ್‌ ಮಸ್ಕ್‌ನ ಪೋಸ್ಟ್‌ನ ಮಾಹಿತಿಯಂತೆ, ಈ ಸೋಶೀಯಲ್‌ ಪ್ಲಾಟ್‌ಫಾರ್ಮ್‌ಗೆ ವೀಡಿಯೊ ಮತ್ತು ಆಡಿಯೊ ಕರೆಗಳು ಫೀಚರ್‌ ಸೇರಿತ್ತಿರುವುದು, ಎಕ್ಸ್ 'ಪರಿಣಾಮಕಾರಿ ಜಾಗತಿಕ ವಿಳಾಸ ಪುಸ್ತಕ' ಆಗಿ ಕೆಲಸ ನಿರ್ವಹಿಸುತ್ತಿದೆ. ಇದರರ್ಥ ಬಳಕೆದಾರರು ಫೋನ್ ಸಂಖ್ಯೆಗಳನ್ನು ಸೇವ್‌ ಮಾಡಬೇಕಿಲ್ಲ. ಅವರ ಬಳಕೆದಾರ ಹೆಸರನ್ನು ಸರ್ಚ್‌ ಮಾಡುವ ಮೂಲಕ ಕರೆ ಮಾಡಲು ಸಾಧ್ಯವಾಗುತ್ತದೆ.

ಅಂದಹಾಗೆ ಟ್ವಿಟರ್‌/ ಎಕ್ಸ್‌ ತಾಣದಲ್ಲಿ ಆಡಿಯೋ ಮತ್ತು ವೀಡಿಯೊ ಕರೆಗಳ ಕುರಿತು ಚರ್ಚೆ ಇದೇ ಮೊದಲಲ್ಲ. ಸಂಸ್ಥೆಯ ವಿನ್ಯಾಸಕ ಆಂಡ್ರ್ಯೂ ಕಾನ್ವೇ ಜುಲೈನಲ್ಲಿ ಇದರ ಫೀಚರ್ಸ್‌ ಬಗ್ಗೆ ಸ್ಕ್ರೀನ್‌ಶಾಟ್‌ಗಳನ್ನು ಶೇರ್‌ ಮಾಡಿದ್ದರು. ಸ್ಕ್ರೀನ್‌ಶಾಟ್‌ನಲ್ಲಿ, ಆಡಿಯೋ ಮತ್ತು ವೀಡಿಯೊ ಕರೆ ಆಯ್ಕೆಗಳನ್ನು ಡಿಎಮ್‌ ಸ್ಕ್ರೀನ್‌ ಮೇಲಿನ ಎಡಭಾಗದಲ್ಲಿ ಸೇರಿಸಲಾಗಿದೆ. ಈ ನೂತನ ಫೀಚರ್‌ ಬ್ಲೂ ಟಿಕ್ ಚಂದಾದಾರರಿಗೆ ಮಾತ್ರ ಲಭ್ಯವಿರುತ್ತದೆಯೇ ಅಥವಾ ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲ.

ಈ ತಿಂಗಳ ಆರಂಭದಲ್ಲಿ, ಸಂದರ್ಶನವೊಂದರಲ್ಲಿ ಎಕ್ಸ್ ಸಿಇಓ ಲಿಂಡಾ ಯಾಕರಿನೊ ಆಡಿಯೋ ಮತ್ತು ವೀಡಿಯೊ ಕರೆ ಫೀಚರ್‌ ಪರಿಚಯಿಸಲು ಎಕ್ಸ್ ಪ್ಲಾಟ್‌ಫಾರ್ಮ್ ಕಾರ್ಯನಿರ್ವಹಿಸುತ್ತಿದೆ ಎಂದು ಖಚಿತಪಡಿಸಿದ್ದರು. ಎಕ್ಸ್‌ ತಾಣದಲ್ಲಿನ ವಿನ್ಯಾಸಕರಾದ ಆಂಡ್ರಿಯಾ ಕಾನ್ವೇ, ಎಕ್ಸ್‌ ನ DM ಮೆನುವಿನ ಮೇಲಿನ ಬಲ ಮೂಲೆಯಲ್ಲಿ ಕಂಡುಬರುವ ಹೊಸ ವೀಡಿಯೊ ಕರೆ ಆಯ್ಕೆಯ ಫೋಟೋಗಳನ್ನು ಸಹ ಹಂಚಿಕೊಂಡಿದ್ದು, ಇದು ಬಹುತೇಕ ಇನ್‌ಸ್ಟಾಗ್ರಾಮ್‌ ನ ಫೀಚರ್‌ ಹೋಲುವಂತಿದೆ.

ಎಕ್ಸ್‌ ನಲ್ಲಿ ಕರೆಗಳನ್ನು ಮಾಡುವ ಸೌಲಭ್ಯವು ಥ್ರೆಡ್‌ಗಳಂತಹ ಪ್ರತಿಸ್ಪರ್ಧಿಗಳಿಂದ ಪ್ಲಾಟ್‌ಫಾರ್ಮ್ ಅನ್ನು ಭಿನ್ನವಾಗಿಸಲು ಸಹಾಯ ಮಾಡುತ್ತದೆ. ಈ ಕ್ರಮವು ಎಕ್ಸ್‌ ಅನ್ನು ವಿಚಾಟ್‌ ನಂತಹ ಎಲ್ಲವನ್ನೂ ಒಳಗೊಳ್ಳುವ ಆಪ್‌ಗೆ ಪರಿವರ್ತಿಸುವ ಎಲಾನ್‌ ಮಸ್ಕ್‌ನ ದೃಷ್ಟಿಗೆ ಅನುಗುಣ ಆಗಿರುತ್ತದೆ.

Best Mobiles in India

English summary
X introduce video and audio calling features said Elon Musk. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+