ಶಿಯೋಮಿ 11i ಹೈಪರ್‌ಚಾರ್ಜ್ 5G ಈಗ ಡಿಸ್ಕೌಂಟ್ ಬೆಲೆಗೆ ಲಭ್ಯ!..ಇದು ಸಖತ್ ಸ್ಟೈಲಿಶ್!
ಪ್ರಮುಖ ಮೊಬೈಲ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಶಿಯೋಮಿ ಅಗ್ಗದ ಫೋನ್‌ಗಳ ಜೊತೆಗೆ ಕೆಲವು ದೈತ್ಯ ಫೋನ್‌ಗಳ ಮೂಲಕ ಸಹ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆ ಲಿಸ್ಟ್‌ನಲ್ಲಿ ಶಿಯೋಮಿ 11i ಹೈಪರ್‌ಚಾರ್ಜ್ 5G (Xiaomi 11i 5G Hypercharge) ಸಹ ಕಾಣಿಸಿಕೊಂಡಿದೆ. ಆದರೆ ಈ ಫೋನ್ ಈಗ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಬೊಂಬಾಟ್ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ.
ಹೌದು, ಇ ಕಾಮರ್ಸ್ ತಾಣದ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಶಿಯೋಮಿ 11i ಹೈಪರ್‌ಚಾರ್ಜ್ 5G ಸ್ಮಾರ್ಟ್‌ಫೋನ್ 35% ರಷ್ಟು ರಿಯಾಯಿತಿ ಪಡೆದಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆಯು 33,999ರೂ. ಆಗಿದ್ದು, ಆದರೆ ಗ್ರಾಹಕರು ಆಫರ್‌ನಲ್ಲಿ ಈ ಫೋನ್ ಅನ್ನು 21,990ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಇನ್ನು ಶಿಯೋಮಿ 11i ಹೈಪರ್‌ಚಾರ್ಜ್ 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್ ಬಲವನ್ನು ಪಡೆದಿದ್ದು, ಜೊತೆಗೆ 4,500 mAh ಸಾಮರ್ಥ್ಯದ ಬ್ಯಾಟರಿ ಸಪೋರ್ಟ್ ಪಡೆದಿದೆ. ಹಾಗೆಯೇ ಇದರ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗಾದರೆ ಶಿಯೋಮಿ 11i ಹೈಪರ್‌ಚಾರ್ಜ್ 5G ಫೋನ್ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಶಿಯೋಮಿ 11i ಹೈಪರ್‌ಚಾರ್ಜ್ 5G ಫೀಚರ್ಸ್ ಹೀಗಿವೆ :
ಶಿಯೋಮಿ 11i ಹೈಪರ್‌ಚಾರ್ಜ್ 5G ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್‌ಪ್ಲೇ ಪಡೆದಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್ 11 ನಲ್ಲಿ MIUI 12.5 ಆವೃತ್ತಿಯ ಸಪೋರ್ಟ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಇದರೊಂದಿಗೆ 8 GB RAM ಮತ್ತು 128 GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಇನ್ನು ಈ ಫೋನ್ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತಾರ ಮಾಡಬಹುದಾಗಿದೆ. ಹಾಗೆಯೇ ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿದೆ. ಇನ್ನು ಈ ಮೊಬೈಲ್ 4,500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ.

ಇದರೊಂದಿಗೆ ಶಿಯೋಮಿ 11i ಹೈಪರ್‌ಚಾರ್ಜ್ 5G ಮೊಬೈಲ್ 120W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, USB ಟೈಪ್-C ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೌಲಭ್ಯಗಳ ಸಪೋರ್ಟ್ ಪಡೆದಿದೆ.
ಶಿಯೋಮಿ 11i 5G ಸ್ಮಾರ್ಟ್‌ಫೋನ್ ಫೀಚರ್ಸ್ :
ಶಿಯೋಮಿ 11i 5G ಸ್ಮಾರ್ಟ್‌ಫೋನ್ ಸಹ ಬಹುತೇಕ ಶಿಯೋಮಿ 11i ಹೈಪರ್‌ಚಾರ್ಜ್ 5G ಫೋನಿನ ಫೀಚರ್ಸ್ ಒಳಗೊಂಡಿದೆ. ಈ ಫೋನ್ ಸಹ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, ಜೊತೆಗೆ 6.67 ಇಂಚಿನ ಫುಲ್ ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್‌ಪ್ಲೇ ಅನ್ನು ಒಳಗೊಂಡಿದೆ.
ಇದರೊಂದಿಗೆ ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಹಾಗೂ 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಪಡೆದುಕೊಂಡಿದೆ. ಅಲ್ಲದೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದೆ. ಹಾಗೆಯೇ 8 GB RAM ಮತ್ತು 128 GB ಆಂತರೀಕ ಸ್ಟೋರೇಜ್ ಸಾಮರ್ಥ್ಯದ ಆಯ್ಕೆ ಒಳಗೊಂಡಿದೆ.
ಇದರ ಜೊತೆಗೆ ಇ ಫೋನ್ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಹಾಗೆಯೇ ಈ ಮೊಬೈಲ್ 5,160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, 67W ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.


Click it and Unblock the Notifications








