ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದ್ದ ಈ ಶಿಯೋಮಿ ಫೋನ್‌ಗೆ 29% ಡಿಸ್ಕೌಂಟ್!
ಶಿಯೋಮಿ (Xiaomi) ಫೋನ್‌ಗಳಿಗೆ ಭಾರತದಲ್ಲಿ ವಿಶೇಷ ಸ್ಥಾನಮಾನ ಇದೆ. ಈ ಫೋನ್‌ಗಳು ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಲಭ್ಯವಾಗಿಸುವ ಮೂಲಕ ಬಳಕೆದಾರರಿಗೆ ಭಿನ್ನ ಅನುಭವ ನೀಡುತ್ತವೆ. ಈ ನಡುವೆ ಶಿಯೋಮಿಯ ಈ ಜನಪ್ರಿಯ ಫೋನ್‌ಗೆ 29% ಡಿಸ್ಕೌಂಟ್ ನೀಡಲಾಗಿದೆ.
ಹೌದು, ಶಿಯೋಮಿ ಸಂಸ್ಥೆಯ ಯಾವುದೇ ಫೋನ್‌ಗಳು ಸಹ ಬಳಕೆದಾರರಿಗೆ ಅಚ್ಚು ಮೆಚ್ಚು. ಈ ಕಾರಣಕ್ಕಾಗಿಯೇ ಭಾರತದ ಗ್ರಾಹಕರು ಈ ಫೋನ್‌ಗಳೊಂದಿಗೆ ಒಂದು ರೀತಿಯ ಭಾವನಾತ್ಮಕ ಸಂಬಂಧ ಇರಿಸಿಕೊಂಡಿರುತ್ತಾರೆ. ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್ ಶಿಯೋಮಿ 11i 5G (Xiaomi 11i 5G) ಫೋನ್‌ಗೆ ಈ ರಿಯಾಯಿತಿ ನೀಡಿದೆ. ಹಾಗಿದ್ರೆ, ಈ ಫೋನ್‌ನ ಫೀಚರ್ಸ್ ಏನು?, ಇದರ ಆಫರ್ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ಶಿಯೋಮಿ 11i 5G ಡಿಸ್‌ಪ್ಲೇ ವಿವರ: ಈ ಫೋನ್ ಅನ್ನು ಆಫರ್ ಬೆಲೆಗೆ ಖರೀದಿ ಮಾಡುವ ಮುನ್ನ ಈ ಬೆಲೆಗೆ ಇದು ಯೋಗ್ಯವೇ ಎಂದು ತಿಳಿದುಕೊಳ್ಳುವುದು ಮುಖ್ಯವಾದ ಕೆಲಸ. ಅದರಂತೆ ಈ ಫೋನ್ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಸನ್ ಹೊಂದಿದೆ. ಜೊತೆಗೆ ಬೆಜೆಲ್-ಮುಕ್ತ ಸ್ಕ್ರೀನ್ ಆಯ್ಕೆ ಆಕರ್ಷಕ ನೋಟ ನೀಡಲಿದೆ.
ಇನ್ನು ಮುಂಭಾಗದ ಕ್ಯಾಮರಾ ಉದ್ದೇಶಕ್ಕೆ ಪಂಚ್ ಹೋಲ್ ಆಯ್ಕೆ ನೀಡಲಾಗಿದ್ದು, ಅತ್ಯುತ್ತಮ ದರ್ಜೆಯ 395ppi ಪಿಕ್ಸೆಲ್ ಸಾಂದ್ರತೆಯ ಪ್ರದರ್ಶನದೊಂದಿಗೆ, ಶಿಯೋಮಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ಲೇಯರ್ ಆಯ್ಕೆ ನೀಡಲಾಗಿದೆ. ಜೊತೆಗೆ 120Hz ರಿಫ್ರೆಶ್ ರೇಟ್ ಹಾಗೂ 20:9 ಆಕಾರ ಅನುಪಾತವನ್ನ ಈ ಫೋನ್ ಡಿಸ್‌ಪ್ಲೇ ಪಡೆದುಕೊಂಡಿದೆ.
ಶಿಯೋಮಿ 11i 5G ಪ್ರೊಸೆಸರ್ ಮಾಹಿತಿ: ಇದರ ಪ್ರೊಸೆಸರ್ ವಿಚಾರಕ್ಕೆ ಬರುವುದಾದರೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 MT6877T ಬಲ ಪಡೆದುಕೊಂಡಿದ್ದು, 8GB RAM ಮೂಲ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಉಳಿದಂತೆ ಮಾಲಿ G68 MC4 GPU ಮತ್ತು ಆಕ್ಟಾ-ಕೋರ್ (ಡ್ಯುಯಲ್-ಕೋರ್, 2.5GHz, ಕಾರ್ಟೆಕ್ಸ್ A78 + ಹೆಕ್ಸಾ-ಕೋರ್, 2GHz, ಕಾರ್ಟೆಕ್ಸ್ A55) CPU ಫೋನ್ ಅನ್ನು ಎಂತಹುದೇ ಸಂದರ್ಭದಲ್ಲಿಯೂ ನಿಧಾನ ಮಾಡುವುದಿಲ್ಲ.
ಶಿಯೋಮಿ 11i 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದ್ದು, ಅದರಲ್ಲಿ 108 ಮೆಗಾಪಿಕ್ಸೆಲ್‌ನ f/1.89 ವೈಡ್-ಆಂಗಲ್ ಪ್ರೈಮರಿ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ನ f/2.2 ವೈಡ್-ಆಂಗಲ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ನ f/2.4 ಮ್ಯಾಕ್ರೋ ಕ್ಯಾಮೆರಾ ಆಯ್ಕೆ ಹೊಂದಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್‌ನ f/2.45 ವೈಡ್-ಆಂಗಲ್ ಮುಖ್ಯ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.
ಶಿಯೋಮಿ 11i 5G ಬ್ಯಾಟರಿ ಸಾಮರ್ಥ್ಯ: ಇನ್ನು ಈ ಫೋನ್ 5160mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 67W ಟರ್ಬೊ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರೊಂದಿಗೆ ಹೊಸ ಆವೃತ್ತಿಯ ವೈ ಫೈ, ಬ್ಲೂಟೂತ್ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಸೌಲಭ್ಯ ಪಡೆಯುವ ಮೂಲಕ ಬಳಕೆದಾರರ ಎಲ್ಲಾ ಅಗತ್ಯಗಳನ್ನು ಪೂರೈಕೆ ಮಾಡುತ್ತದೆ.

ಶಿಯೋಮಿ 11i 5G ಬೆಲೆ ಹಾಗೂ ಆಫರ್ ವಿವರ: ಇನ್ನು ಪ್ರಮುಖ ವಿಚಾರಕ್ಕೆ ಬರೋಣ. ಈ ಫೋನ್‌ನ ಸಾಮಾನ್ಯ ದರ 33,999ರೂ.ಗಳಾಗಿದ್ದು, ಆದರೆ ನೀವು ಇದನ್ನು 23,990ರೂ.ಗಳಿಕೆ ಖರೀದಿ ಮಾಡಬಹುದು. ಯಾಕೆಂದರೆ ಅಮೆಜಾನ್ ಈ ಫೋನ್‌ಗೆ 29% ರಿಯಾಯಿತಿ ಘೋಷಣೆ ಮಾಡಿದೆ. ಇಷ್ಟು ಮಾತ್ರವಲ್ಲದೆ ವಿನಿಮಯ ಆಫರ್ ಹಾಗೂ ಬ್ಯಾಂಕ್ ಕೊಡುಗೆಗಳ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಲಭ್ಯ ಇದೆ.


Click it and Unblock the Notifications








