Xiaomi: 128 GB ಸ್ಟೋರೇಜ್, 108MP ಕ್ಯಾಮೆರಾ ಆಯ್ಕೆಯ ಈ ಫೋನ್‌ಗೆ ಭಾರೀ ಕೊಡುಗೆ! ಎಲ್ಲಿ ಈ ಆಫರ್?
ಶಿಯೋಮಿ (Xiaomi) ಉತ್ತಮ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಫೋನ್‌ಗಳನ್ನು ಭಾರತದಲ್ಲಿ ಹೆಚ್ಚಾಗಿ ಖರೀದಿ ಮಾಡಲಾಗುತ್ತಿದೆ. ಅದರಂತೆ ಈಗ ಬಹಳ ಬೇಡಿಕೆ ಇರುವ ಉತ್ತಮ ಕ್ಯಾಮೆರಾ ಹಾಗೂ ಸ್ಟೋರೇಜ್ ಆಯ್ಕೆ ಇರುವ ಮಿಡ್‌ರೇಂಜ್ ಬೆಲೆಯ ಫೋನ್‌ಗೆ ಭಾರೀ ಆಫರ್ ನೀಡಲಾಗಿದೆ.
ಹೌದು, ವಿವಿಧ ಸ್ಮಾರ್ಟ್‌ಫೋನ್‌ಗಳಿಗೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಆಫರ್ ನೀಡಲಾಗುತ್ತಿದ್ದು, ಅದರಂತೆ ಈಗ ಶಿಯೋಮಿ 11i 5G ಸ್ಮಾರ್ಟ್‌ಫೋನ್ ಉತ್ತಮ ಆಫರ್‌ನೊಂದಿಗೆ ಕಾಣಿಸಿಕೊಂಡಿದೆ. ಈ ಫೋನ್ 108 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಹಾಗೂ 128 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಶಿಯೋಮಿ 11i 5G ಆಫರ್ ಮಾಹಿತಿ: ಈ ಫೋನ್ 31,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ನೀವೀಗ ಇದನ್ನು 22,999 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ (Flipkart) ಈ ಫೋನ್‌ಗೆ 9000 ರೂ.ಗಳಷ್ಟು ರಿಯಾಯಿತಿ ನೀಡಿದೆ. ಅಲ್ಲದೆ ಕೆಲವು ಬ್ಯಾಂಕ್ ಆಫರ್ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ನಿಮ್ಮದಾಗಿಸಿಕೊಳ್ಳಬಹುದು.
ಬ್ಯಾಂಕ್ ವಿಚಾರಕ್ಕೆ ಬಂದರೆ ಈ ಫೋನ್ ಅನ್ನು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್ ಸಿಗಲಿದ್ದು, ತಿಂಗಳಿಗೆ ನೀವು 3,834 ರೂ.ಗಳ ನೋ ಕಾಸ್ಟ್ ಇಎಮ್‌ಐ ಆಯ್ಕೆ ಮೂಲಕವೂ ಇದನ್ನು ಖರೀದಿ ಮಾಡಬಹುದಾಗಿದೆ. ಅಲ್ಲದೆ 699 ರೂ.ಗಳ ಮೌಲ್ಯದ FreebieSpotify ಪ್ರೀಮಿಯಂ ಸೌಲಭ್ಯ ಸಹ ಸಿಗಲಿದೆ. ಈ ಮೂಲಕ ಈ ಫೋನ್ ಮೇಲೆ ಭಾರೀ ಹಣ ಉಳಿತಾಯ ಮಾಡಿದಂತೆ ಆಗಲಿದೆ.

ಶಿಯೋಮಿ 11i 5G ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.67 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್, HDR10, 700 ನಿಟ್ಸ್ ನಿಂದ 1200 ನಿಟ್ಸ್ ವರೆಗೆ ಗರಿಷ್ಠ ಬ್ರೈಟ್ ನೆಸ್ ಆಯ್ಕೆ ಹಾಗೂ 20:9 ಅನುಪಾತದೊಂದಿಗೆ ಕಾಣಿಸಿಕೊಂಡಿದೆ. ಅಲ್ಲದೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಣೆ ಪಡೆದಿದೆ.
ಶಿಯೋಮಿ 11i 5G ಪ್ರೊಸೆಸರ್ ವಿವರ: ಈ ಫೋನ್ ಓಎಸ್ ಆಂಡ್ರಾಯ್ಡ್ 11 ನಲ್ಲಿ ಕಾಣಿಸಿಕೊಂಡಿದ್ದು, ಆಂಡ್ರಾಯ್ಡ್ 12, ಎಂಐಯುಐ 13 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಅಲ್ಲದೆ ಮೀಡಿಯಾಟೆಕ್ ಡೈಮೆನ್ಸಿಟಿ 920 (6 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಲಿ-G68 MC4 ಗ್ರಾಫಿಕ್ಸ್ ಕಾರ್ಡ್ ಬಲದೊಂದಿಗೆ ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಜೊತೆಗೆ ಆಫರ್ ಬೆಲೆಗೆ ಲಭ್ಯ ಇರುವ ಫೋನ್ 128 GB ಹಾಗೂ 8 GB RAM ಸ್ಟೋರೇಜ್ ಆಯ್ಕೆ ಪಡೆದಿದೆ.
ಶಿಯೋಮಿ 11i 5G ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಎಲ್‌ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್ ಲಭ್ಯ ಇದೆ. ಮತ್ತು ಈ ಫೋನ್ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

ಶಿಯೋಮಿ 11i 5G ಬ್ಯಾಟರಿ ಸಾಮರ್ಥ್ಯ: ಈ ಫೋನ್ 5160 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 67W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ವೈ-ಫೈ 802.11 a/b/g/n/ac/6, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.2, A2DP, LE, ಯುಎಸ್‌ಬಿ ಟೈಪ್-ಸಿ 2.0, OTG ಕನೆಕ್ಟಿವಿಟಿ ಬೆಂಬಲ ಪಡೆದುಕೊಂಡಿದೆ. ಹಾಗಿದ್ರೆ ಈ ಫೋನ್ ಖರೀದಿ ಮಾಡಲು ಮುಂದಾಗಿದ್ರೆ ಅಥವಾ ಈ ಬೆಲೆಗೆ ಈ ಫೋನ್ ಉತ್ತಮ ಎನಿಸಿದ್ರೆ ಕಮೆಂಟ್ ಮಾಡಿ ತಿಳಿಸಿ.


Click it and Unblock the Notifications








