Home
ಸುದ್ದಿಜಾಲ

ಶಿಯೋಮಿಯ ಈ ವೇಗದ ಸ್ಮಾರ್ಟ್‌ಫೋನ್‌ಗೆ ಈಗ ಭರ್ಜರಿ ಡಿಸ್ಕೌಂಟ್‌!

ಅಮೆಜಾನ್‌ ಆಯೋಜಿಸಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಈಗ ಲೈವ್‌ ನಡೆಯುತ್ತಿದೆ. ಈ ಹಬ್ಬದ ಮಾರಾಟದಲ್ಲಿ ಪ್ರಮುಖ ಬ್ರ್ಯಾಂಡ್‌ ಮೊಬೈಲ್‌ಗಳು ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೂ ಬೊಂಬಾಟ್‌ ರಿಯಾಯಿತಿ ಒದಗಿಸಲಾಗಿದೆ. ಮುಖ್ಯವಾಗಿ ಮೊಬೈಲ್‌ ಅಧಿಕ ಆಕರ್ಷಕ ರಿಯಾಯಿತಿಯಲ್ಲಿ ಕಾಣಿಸಿಕೊಂಡಿದ್ದು, ಶಿಯೋಮಿ 12 ಪ್ರೊ 5G ಮೊಬೈಲ್‌ ಭರ್ಜರಿ ರಿಯಾಯಿತಿ ಪಡೆದಿದೆ.

ಹೌದು, ಅಮೆಜಾನ್‌ ತಾಣದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ಶಿಯೋಮಿ 12 ಪ್ರೊ 5G ಫೋನ್ ಶೇ. 51% ರಷ್ಟು ಡಿಸ್ಕೌಂಟ್‌ ಪಡೆದಿದ್ದು, 41,999ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ 12GB RAM + 256GB ವೇರಿಯಂಟ್‌ ಫೋನ್‌ ಅನ್ನು ಗ್ರಾಹಕರು ಬ್ಯಾಂಕ್‌, ಎಕ್ಸ್‌ಚೇಂಜ್ ಹಾಗೂ ಇತರೆ ಆಫರ್‌ ಸೇರಿ 37,999ರೂ. ಗಳ ವಿಶೇಷ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಶಿಯೋಮಿಯ ಈ ವೇಗದ ಸ್ಮಾರ್ಟ್‌ಫೋನ್‌ಗೆ ಈಗ ಭರ್ಜರಿ ಡಿಸ್ಕೌಂಟ್‌!

ಇನ್ನು ಈ ದೈತ್ಯ ಮೊಬೈಲ್‌ 8 GB RAM + 256 GB ಹಾಗೂ 12 GB RAM + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಇದರ ಜೊತೆಗೆ, ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಹಾಗಾದರೇ ಶಿಯೋಮಿ 12 ಪ್ರೊ 5G ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸದ ವಿಶೇಷತೆ ಏನಿದೆ

ಶಿಯೋಮಿ 12 ಪ್ರೊ 5G ಮೊಬೈಲ್‌ 1,440 x 3,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.73 ಇಂಚಿನ WQHD+ Samsung E5 ಅಮೋಲೆಡ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ಡೈನಾಮಿಕ್ ರಿಫ್ರೆಶ್ ರೇಟ್‌ ಅನ್ನು ಪಡೆದಿದೆ.

ವೇಗದ ಪ್ರೊಸೆಸರ್‌ ಕಾರ್ಯವೈಖರಿ

ಶಿಯೋಮಿ 12 ಪ್ರೊ 5G ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಹೊಂದಿದ್ದು, ಇತ್ತೀಚಿನ ಆಂಡ್ರಾಯ್ಡ್‌ ಓಎಸ್ ಬೆಂಬಲ ದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8 GB RAM + 256 GB ಹಾಗೂ 12 GB RAM + 256 GB ಆಂತರೀಕ ಸ್ಟೋರೇಜ್‌ ಆಯ್ಕೆ ಪಡೆದಿದೆ.

ತ್ರಿವಳಿ ಕ್ಯಾಮೆರಾ ರಚನೆ ಮಾಹಿತಿ

ಶಿಯೋಮಿ 12 ಪ್ರೊ 5G ಮೊಬೈಲ್‌ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಡಪಡೆದಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX707 ಸೆನ್ಸಾರ್‌, ದ್ವಿತೀಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಪೋರ್ಟ್ರೇಟ್ ಲೆನ್ಸ್‌ ಮತ್ತು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ ವೈಡ್ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ ಜೊತೆಗೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಬಿಗ್ ಬ್ಯಾಟರಿ ಮತ್ತು ಇತರೆ ಫೀಚರ್ಸ್‌

ಶಿಯೋಮಿ 12 ಪ್ರೊ 5G ಮೊಬೈಲ್‌ 4,600 mAh ಸಾಮರ್ಥ್ಯದ ಬ್ಯಾಟರಿ ಅನ್ನು ಪಡೆದಿದ್ದು, ಇದು 120W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೇ ಇದು 50W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಕೂಡ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 6E, ಬ್ಲೂಟೂತ್ v5.2, NFC ಮತ್ತು USB ಟೈಪ್-C ಪೋರ್ಟ್ ಅನ್ನು ಸಪೋರ್ಟ ಇದೆ. ಇನ್ನು ಈ ಫೋನ್ ಬ್ಲೂ, ಬ್ಲ್ಯಾಕ್‌ ಹಾಗೂ ಓಪೆರಾ ಮಾವೆ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Best Mobiles in India

English summary
Xiaomi 12 Pro 5G available on exciting price drop on amazon. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+