Home
ಸುದ್ದಿಜಾಲ

256 GB ಸ್ಟೋರೇಜ್‌ ಆಯ್ಕೆ ಇರುವ ಈ ದೈತ್ಯ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ! ಬೊಂಬಾಟ್‌ ಕ್ಯಾಮೆರಾ ಫೀಚರ್ಸ್‌

ಶಿಯೋಮಿ ಸ್ಮಾರ್ಟ್‌ಫೋನ್‌ಗಳು (Xiaomi smartphone) ಈಗಾಗಲೇ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸೇಲ್‌ ಆಗುತ್ತಿವೆ. ಅದರಲ್ಲೂ ಭಾರತದ ಮಾರುಕಟ್ಟೆಯಲ್ಲಿ ಈ ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇದೆ. ಈ ಬೆಳವಣಿಗೆ ನಡುವೆ ಶಿಯೋಮಿಯ ದೈತ್ಯ ಫೋನ್‌ವೊಂದಕ್ಕೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ.

ಹೌದು, ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್‌ (Xiaomi 12 Pro 5G smartphone) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಈ ಫೋನ್‌ ಬೆಲೆಗೆ ತಕ್ಕ ಫೀಚರ್ಸ್‌ ಅನ್ನು ಹೊಂದಿರುವ ಮೂಲಕ ಬಳಕೆದಾರರಿಗೆ ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಅದರಲ್ಲೂ ಇದು 50MP + 50MP + 50MP ನ ಟ್ರಿಪಲ್‌ ಕ್ಯಾಮೆರಾ ಆಯ್ಕೆ ಪಡೆದಿದ್ದು, ಕ್ಯಾಮೆರಾ ಪ್ರಿಯರಿಗೆ ನೆಚ್ಚಿನ ಫೋನ್‌ ಆಗಿದೆ. ಹಾಗಿದ್ರೆ, ಈ ಫೋನ್‌ಗೆ ಇರುವ ಆಫರ್ ಬೆಲೆ ಹಾಗೂ ಇದರ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

256 GB ಸ್ಟೋರೇಜ್‌ ಆಯ್ಕೆ ಇರುವ ಈ ದೈತ್ಯ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್‌ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 79,999 ರೂ.ಗಳ ದುಬಾರಿ ಬೆಲೆಹೊಂದಿದ್ದು, ನೀವೀಗ ಇದನ್ನು ಆಫರ್ ಬೆಲೆ 47,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಎಂದಿನಂತೆ ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಫ್ಲಿಪ್‌ಕಾರ್ಟ್‌ (Flipkart) ಈ ಫೋನ್‌ಗೆ 40% ರಿಯಾಯಿತಿ ಘೋಷಣೆ ಮಾಡಿದೆ. ಇದರೊಂದಿಗೆ ನೀವು ಇನ್ನೂ ಕಡಿಮೆ ಬೆಲೆಗೆ ಖರೀದಿ ಮಾಡಲು ಬ್ಯಾಂಕ್‌ ಕೊಡುಗೆಯನ್ನೂ ಸಹ ನೀಡಲಾಗಿದೆ .

ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಮಾಹಿತಿ: ಇನ್ನು ದುಬಾರಿ ಬೆಲೆ ಹೊಂದಿರುವ ಈ ಫೋನ್‌ ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಿರುವುದೇನೋ ಸತ್ಯ. ಆದರೆ, ಈ ಫೋನ್‌ ಖರೀದಿ ಮಾಡುವ ಮುನ್ನ ಇದರ ಪ್ರಮುಖ ಫೀಚರ್ಸ್‌ ಬಗ್ಗೆಯೂ ತಿಳಿಯುವುದು ಅಗತ್ಯವಾಗಿದೆ. ಅದರಂತೆ ಈ ಸ್ಮಾರ್ಟ್‌ಫೋನ್ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಪಂಚ್ ಹೋಲ್ ಶೈಲಿಯಲ್ಲಿ ಕಾಣಿಸಿಕೊಂಡಿದೆ.

256 GB ಸ್ಟೋರೇಜ್‌ ಆಯ್ಕೆ ಇರುವ ಈ ದೈತ್ಯ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಇದರೊಂದಿಗೆ ಈ ಡಿಸ್‌ಪ್ಲೇ 1440 x 3200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 522 ppi ಸಾಂಧ್ರತೆ, ಅಸಾಧಾರಣ ದೃಶ್ಯಗಳಿಗಾಗಿ ಡಾಲ್ಬಿ ವಿಷನ್ ಮತ್ತು ಹೆಚ್‌ಡಿಆರ್‌ 10+ ಸೌಲಭ್ಯ ಪಡೆದಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಈ ಸ್ಮಾರ್ಟ್‌ಫೋನ್ ದೀರ್ಘ ಬಾಳಿಕೆ ಖಾತರಿಪಡಿಸುವ ಉದ್ದೇಶದಿಂದ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಪಡೆದಿದೆ.

ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್ ವಿವರ: ಈ ವಿಶೇಷ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 1 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಅಡ್ರಿನೋ 730 ಗ್ರಾಫಿಕ್ಸ್‌ ಕಾರ್ಡ್‌ ಬಲದೊಂದಿಗೆ ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಇದರೊಂದಿಗೆ 8GB RAM ಹಾಗೂ 256 GB ಇಂಟರ್‌ ಸ್ಟೋರೇಜ್‌ ಆಯ್ಕೆ ಈ ಫೋನ್‌ನಲ್ಲಿದ್ದು, ಈ ಮೂಲಕ ಯಾವುದೇ ಕೆಲಸಗಳು ಸರಳವಾಗಿ ಈ ಫೋನ್‌ನಲ್ಲಿ ಜರುಗಲಿವೆ.

256 GB ಸ್ಟೋರೇಜ್‌ ಆಯ್ಕೆ ಇರುವ ಈ ದೈತ್ಯ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್‌ನ ಮುಖ್ಯ ಆಕರ್ಷಣೆ ಎಂದರೆ ಕ್ಯಾಮೆರಾ. ಡ್ಯುಯಲ್-ಎಲ್ಇಡಿ, ಡ್ಯುಯಲ್-ಟೋನ್ ಫ್ಲ್ಯಾಶ್‌ ಮತ್ತು ವಿಶಿಷ್ಟವಾದ ಕ್ಯಾಮೆರಾ ಹಂಪ್ ನೊಂದಿಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾವನ್ನು ಈ ಫೋನ್‌ ಹೊಂದಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ‌ಅಲ್ಟ್ರಾವೈಡ್ ಕ್ಯಾಮೆರಾ, ಡ್ಯುಯಲ್ PDAF ಮತ್ತು OIS ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು ಡ್ಯುಯಲ್ ಆಪ್ಟಿಕಲ್ ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್‌ ಅನ್ನು ಪಡೆದಿದೆ. ಸೆಲ್ಫಿ ಉದ್ದೇಶಕ್ಕೆ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆಯನ್ನು ಈ ಫೋನ್ ಪಡೆದಿದೆ.

ಶಿಯೋಮಿ 12 ಪ್ರೊ 5G ಸ್ಮಾರ್ಟ್‌ಫೋನ್‌ ಬ್ಯಾಟರಿ ಹಾಗೂ ಇತರೆ: ಈ ಫೋನ್ 4600mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 5G, 4G VOLTE, 4G, 3G, 2G ನೆಟ್‌ವರ್ಕ್ ಬೆಂಬಲ, ಮೈಕ್ರೋ ಯುಎಸ್‌ಬಿ ಪೋರ್ಟ್, ಬ್ಲೂಟೂತ್ ಆವೃತ್ತಿ v5.2, ವೈ-ಫೈ ಆವೃತ್ತಿ 2.4 GHz ಮತ್ತು 5 GHz ಡ್ಯುಯಲ್ ಬ್ಯಾಂಡ್, ಮಿನಿ ಹೆಚ್‌ಡಿಎಮ್‌ಐ ಪೋರ್ಟ್, ಯುಎಸ್‌ಬಿ ಟೆಥರಿಂಗ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಬೆಂಬಲ ಪಡೆದಿಕೊಂಡಿದೆ.

Best Mobiles in India

English summary
Xiaomi 12 Pro 5G smartphone has become more popular. This phone offers a premium experience to the user by having features that are worth the price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+