ಶಿಯೋಮಿ 13 ಲೈಟ್ ಎಂಟ್ರಿ ಕೊಡಲು ಹೆಚ್ಚು ದಿನ ಉಳಿದಿಲ್ಲ!..ಅಚ್ಚರಿಯ ಫೀಚರ್ಸ್!
ಶಿಯೋಮಿ ಮೊಬೈಲ್ ಸಂಸ್ಥೆಯು ನೂತನವಾಗಿ ಶಿಯೋಮಿ 13 ಪ್ರೊ ಲಾಂಚ್ ಮಾಡಲು ಸಜ್ಜಾಗಿದೆ. ಅದರ ಜೊತೆಗೆ ಸದ್ದಿಲ್ಲದೆ ಶಿಯೋಮಿ 13 ಲೈಟ್ ಸ್ಮಾರ್ಟ್‌ಫೋನ್ ಅನ್ನು (Xiaomi 13 Lite) ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸುವುದು ಈಗ ಬಹುತೇಕ ಪಕ್ಕಾ ಆಗಿದೆ. ಈ ನೂತನ ಶಿಯೋಮಿ 13 ಸರಣಿಯು, ಈ ಹಿಂದಿನ ಶಿಯೋಮಿ 12 ಸರಣಿಯ ಉತ್ತರಾಧಿಕಾರಿ ಆಗಿರಲಿದೆ.

ಹೌದು, ಶಿಯೋಮಿ ಸಂಸ್ಥೆಯ ಹೊಸ ಶಿಯೋಮಿ 13 ಸರಣಿಯನ್ನು ಇದೇ ಫೆಬ್ರುವರಿ 26 ರಂದು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಈ ಸರಣಿಯು ಶಿಯೋಮಿ 13, ಶಿಯೋಮಿ 13 ಲೈಟ್ ಹಾಗೂ ಶಿಯೋಮಿ 13 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಆ ಪೈಕಿ ಶಿಯೋಮಿ 13 ಲೈಟ್ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 7 ಜೆನ್ 1 ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿರಲಿದೆ.

ಹಾಗೆಯೇ ಬರಲಿರುವ ಶಿಯೋಮಿ 13 ಲೈಟ್ ಫೋನ್ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿರಲಿದ್ದು, ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿರಲಿದೆ. ಇದರೊಂದಿಗೆ ಜಬರ್ದಸ್ತ್ 4500mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿರಲಿದೆ. ಹಾಗಾದರೇ ಶಿಯೋಮಿ 13 ಲೈಟ್ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಶಿಯೋಮಿ 13 ಲೈಟ್ : ಡಿಸ್‌ಪ್ಲೇ ರಚನೆ ಮಾಹಿತಿ
ಶಿಯೋಮಿ 13 ಲೈಟ್ ಸ್ಮಾರ್ಟ್‌ಫೋನ್ 6.55 ಇಂಚಿನ AMOLED ಡಿಸ್‌ಪ್ಲೇಯನ್ನು ಒಳಗೊಂಡಿರಲಿದ್ದು, 1080 × 2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದೆ. ಜೊತೆಗೆ ಡಿಸ್‌ಪ್ಲೇಯು 120Hz ರಿಫ್ರೆಶ್ ದರ ಪಡೆದಿರಲಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 402ppi ಆಗಿದೆ. ಇದರೊಂದಿಗೆ ಡಾಲ್ಬಿ ವಿಷನ್ ಸೌಲಭ್ಯವನ್ನು ಪಡೆದಿರಲಿದೆ.

ಶಿಯೋಮಿ 13 ಲೈಟ್ : ಯಾವ ಪ್ರೊಸೆಸರ್ ಕಾರ್ಯನಿರ್ವಹಿಸಲಿದೆ
ಶಿಯೋಮಿ 13 ಲೈಟ್ ಇತ್ತೀಚಿನ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 7 ಜೆನ್ 1 ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಸಪೋರ್ಟ್ ಒಳಗೊಂಡಿರಲಿದೆ. ಇದರೊಂದಿಗೆ 8GB + 128GB ಸಾಮರ್ಥ್ಯದ ಆಯ್ಕೆಗಳನ್ನು ಗ್ರಾಹಕರಿಗೆ ಲಭ್ಯವಾಗಲಿವೆ.
ಶಿಯೋಮಿ 13 ಲೈಟ್ : ಕ್ಯಾಮೆರಾ ಸೆನ್ಸಾರ್ ಮಾಹಿತಿ
ಶಿಯೋಮಿ 13 ಲೈಟ್ ಹಿಂದಿನ ಸರಣಿಯ ಕ್ಯಾಮೆರಾ ವ್ಯವಸ್ಥೆಗಿಂತ ಅಪ್‌ಗ್ರೇಡ್ ಆಗಿರಲಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಒಳಗೊಂಡಿರಲಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಇನ್ನೆರಡು ಕ್ಯಾಮೆರಾಗಳು ಕ್ರಮವಾಗಿ 8 ಮೆಗಾ ಪಿಕ್ಸಲ್ ಹಾಗೂ 2 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಹೊಂದಿರಲಿವೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ.

ಶಿಯೋಮಿ 13 ಲೈಟ್ : ಬ್ಯಾಟರಿ ಬ್ಯಾಕ್‌ಅಪ್ ಹಾಗೂ ಇತರೆ ಸೌಲಭ್ಯಗಳು
ಶಿಯೋಮಿ 13 ಲೈಟ್ ಸ್ಮಾರ್ಟ್‌ಫೋನ್ 4500mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 67W ಫಾಸ್ಟ್ ಚಾರ್ಜಿಂಗ್ ಹೊಂದಿರಲಿದೆ. ಇದಲ್ಲದೇ Qi ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಒಳಗೊಂಡಿರುವ ನಿರೀಕ್ಷೆಗಳಿವೆ. ಸುರಕ್ಷತೆಗಾಗಿ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೌಲಭ್ಯ ಪಡೆದಿರಲಿದೆ.
ಶಿಯೋಮಿ 13 ಲೈಟ್ : ನಿರೀಕ್ಷಿತ ಬೆಲೆ ಮಾಹಿತಿ
ಶಿಯೋಮಿ 13 ಲೈಟ್ ಸ್ಮಾರ್ಟ್‌ಫೋನಿನ 8GB + 128GB ವೇರಿಯಂಟ್ ಬೆಲೆ ಯುರೋಪ್‌ನಲ್ಲಿ € 499.90 ಆಗಿರಲಿದೆ. ಭಾರತದಲ್ಲಿ ಬೆಲೆ ಸುಮಾರು 44,100ರೂ. ಆಗಿರಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








