ಶಿಯೋಮಿಯ ಈ ದೈತ್ಯ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ಈ ಚಾನ್ಸ್ ಕಳ್ಕೋಬೇಡಿ!
ಪ್ರಮುಖ ಮೊಬೈಲ್ ಬ್ರ್ಯಾಂಡ್‌ಗಳಲ್ಲಿ ಶಿಯೋಮಿ ಸಂಸ್ಥೆಯು ಸಹ ಒಂದಾಗಿದೆ. ಶಿಯೋಮಿ ಸಂಸ್ಥೆಯ ಭಿನ್ನ ಶ್ರೇಣಿಯ ಬೆಲೆಯಲ್ಲಿ ಫೋನ್‌ಗಳನ್ನು ಪರಿಚಯಿಸಿ, ಅಧಿಕ ಗ್ರಾಹಕ ಬಳಗವನ್ನು ಸೆಳೆದಿವೆ. ಆ ಪೈಕಿ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಶಿಯೋಮಿ 13 ಪ್ರೊ ಫೋನ್ ಬೊಂಬಾಟ್ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆದ್ರೆ ಇದೀಗ ಈ ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್ ಆಗಿದ್ದು, ಮತ್ತೆ ಗಮನ ಸೆಳೆದಿದೆ.
ಹೌದು, ಅಮೆಜಾನ್ ತಾಣದಲ್ಲಿ ಶಿಯೋಮಿ 13 ಪ್ರೊ ಫೋನ್ 11% ರಿಯಾಯಿತಿ ಪಡೆದಿದೆ. 12GB RAM + 256GB ವೇರಿಯಂಟ್ ಬೆಲೆ 89,999ರೂ. ಇದ್ದು, ಈಗ 79,999ರೂ. ಗಳ ಆಫರ್ ದರದಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ನೋ ಕಾಸ್ಟ್ ಇಎಮ್‌ಐ ಸೌಲಭ್ಯದ ಆಯ್ಕೆಗಳು ಹಾಗೂ ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿ ಸಹ ಲಭ್ಯವಾಗಲಿದೆ. ಹಾಗಾದರೇ ಶಿಯೋಮಿ 13 ಪ್ರೊ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿ 13 ಪ್ರೊ ಡಿಸ್‌ಪ್ಲೇ ರಚನೆ ಮಾಹಿತಿ : ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ 6.7 ಇಂಚಿನ OLED ಡಿಸ್‌ಪ್ಲೇಯನ್ನು ಒಳಗೊಂಡಿರಲಿದ್ದು, ಸ್ಕ್ರೀನ್ 120 Hz ರಿಫ್ರೆಶ್ ದರ ಪಡೆದಿರಲಿದೆ. ಜೊತೆಗೆ ಡಿಸ್‌ಪ್ಲೇಯು ಡಾಲ್ಬಿ ವಿಷನ್ ಮತ್ತು HDR10 ಗೆ ಬೆಂಬಲವನ್ನು ಸಹ ಒಳಗೊಂಡಿದೆ. ಇದರೊಂದಿಗೆ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಣೆ ಪಡೆದಿದ್ದು, QHD+ ರೆಸಲ್ಯೂಶನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಶಿಯೋಮಿ 13 ಪ್ರೊ LTPO ತಂತ್ರಜ್ಞಾನ : ಡಿಸ್‌ಪ್ಲೇಯು HDR10 ಸಕ್ರಿಯವಾಗಿದ್ದಾಗ, ಸ್ಕ್ರೀನ್ 1900 nits ಸಾಮರ್ಥ್ಯದಲ್ಲಿರಲಿದೆ. ಇದರೊಂದಿಗೆ ಈ ಫೋನಿನ ಡಿಸ್‌ಪ್ಲೇಯು LTPO ತಂತ್ರಜ್ಞಾನವನ್ನು ಒಳಗೊಂಡಿದೆ. ಬೆಳಕಿನ ಸ್ಥಿತಿಗೆ ಅನುಗುಣವಾಗಿ ಡಿಸ್‌ಪ್ಲೇಯು ಆಟೋಮ್ಯಾಟಿಕ್ ಆಗಿ ಕಲರ್ ಟೆಂಪ್ರೆಚರ್‌ಗೆ ಹೊಂದಿಕೊಳ್ಳುತ್ತದೆ.
ಶಿಯೋಮಿ 13 ಪ್ರೊ ಪ್ರೊಸೆಸರ್ : ಶಿಯೋಮಿ 13 ಪ್ರೊ ಇತ್ತೀಚಿನ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಒಳಗೊಂಡಿದೆ. ಇದರೊಂದಿಗೆ 8GB + 128 GB, 8GB + 256 GB, 12GB + 256 GB ಮತ್ತು 12GB + 512 GB ಸಾಮರ್ಥ್ಯದ ಆಯ್ಕೆಗಳನ್ನು ಗ್ರಾಹಕರಿಗೆ ಲಭ್ಯವಾಗಲಿವೆ.

ಶಿಯೋಮಿ 13 ಪ್ರೊ ಕ್ಯಾಮೆರಾ ಸೆನ್ಸಾರ್ ಮಾಹಿತಿ : ಶಿಯೋಮಿ 13 ಪ್ರೊ ಹಿಂದಿನ ಸರಣಿಯ ಕ್ಯಾಮೆರಾ ವ್ಯವಸ್ಥೆಗಿಂತ ಅಪ್‌ಗ್ರೇಡ್ ಆಗಿದ್ದು, ಇದು Leica ಕ್ಯಾಮೆರಾ ಸಿಸ್ಟಮ್ ಒಳಗೊಂಡಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಒಳಗೊಂಡಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಇನ್ನೆರಡು ಕ್ಯಾಮೆರಾಗಳು ಅಲ್ಟ್ರಾ ವೈಡ್ ಹಾಗೂ ಟೆಲಿಫೋಟೊ ಲೆನ್ಸ್ ಅನ್ನು ಹೊಂದಿವೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ.
ಶಿಯೋಮಿ 13 ಪ್ರೊ ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ : ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ 4,820 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 120W ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಇದಲ್ಲದೇ 50W ಸಾಮರ್ಥ್ಯದ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದ್ದು, ಅಂಡರ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೌಲಭ್ಯ ಸಹ ಪಡೆದಿದೆ.


Click it and Unblock the Notifications








