ಶಿಯೋಮಿ 13 ಪ್ರೊ ಫಸ್ಟ್ ಲುಕ್: ಜಬರ್ದಸ್ತ್ ಕ್ಯಾಮೆರಾ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್!
ಶಿಯೋಮಿ ಕಂಪನಿಯು ಹೊಸದಾಗಿ ಲಾಂಚ್ ಮಾಡಿರುವ ಶಿಯೋಮಿ 13 ಪ್ರೊ ಫೋನ್ ಹೈ ಎಂಡ್ ಫೀಚರ್ಸ್‌ಗಳಿಂದ ಗ್ರಾಹಕರನ್ನು ತಿರುಗಿ ನೋಡುವಂತೆ ಮಾಡಿದೆ. ಈ ಫೋನ್ ವೇಗದ ಚಾರ್ಜಿಂಗ್ ಆಯ್ಕೆಯಿಂದ ಸಿಕ್ಕಾಪಟ್ಟೆ ಗಮನ ಸೆಳೆದಿದ್ದು, ಹಾಗೆಯೇ ಇದು ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ಸೆಟ್ ಪ್ರೊಸೆಸರ್ ಆಯ್ಕೆಯನ್ನು ಹೊಂದಿದೆ.
ಶಿಯೋಮಿ 12 ಪ್ರೊ ಫೋನಿನ ಉತ್ತರಾಧಿಕಾರಿ ಆಗಿರುವ ಶಿಯೋಮಿ 13 ಪ್ರೊ ಹಲವು ಅಪ್‌ಡೇಟ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಮುಖ್ಯವಾಗಿ ಕ್ಯಾಮೆರಾ ರಚನೆಯಲ್ಲಿ Leica ಲೆನ್ಸ್ ಬಳಕೆ ಮಾಡಿರುವುದು ಪ್ಲಸ್ ಪಾಯಿಂಟ್ ಎನಿಸಿದೆ. ಇದರೊಂದಿಗೆ ವೈರ್‌ಲೆಸ್ ರಿವರ್ಸ್ ಚಾರ್ಜಿಂಗ್ ಸಹ ಗಮನ ಸೆಳೆದಿದೆ.

ಶಿಯೋಮಿ 13 ಪ್ರೊ ಫೋನಿನ ಬೆಲೆ?
ಭಾರತದಲ್ಲಿ ಶಿಯೋಮಿ 13 ಪ್ರೊ 5G ಸ್ಮಾರ್ಟ್‌ಫೋನ್ 12GB RAM + 256GB ವೇರಿಯಂಟ್ ಬೆಲೆಯು 79,999ರೂ. ಆಗಿದೆ. ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಇದೇ ಮಾರ್ಚ್ 6 ರಿಂದ ಮಾರಾಟ ಶುರು ಮಾಡಲಿದೆ. ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಸಿಗಲಿದ್ದು, ಇದರೊಂದಿಗೆ ಅತ್ಯುತ್ತಮ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯ.
ಶಿಯೋಮಿ 13 ಪ್ರೊ : ಕಲರ್ ಮತ್ತು ಲಭ್ಯತೆ
ಶಿಯೋಮಿ 13 ಪ್ರೊ ಫೋನ್ ಎರಡು ಬಣ್ಣದ ಆಯ್ಕೆಗಳ ಖರೀದಿಗೆ ಲಭ್ಯವಾಗಲಿದೆ. ಅವುಗಳು ಕ್ರಮವಾಗಿ ಸಿರಾಮಿಕ್ ಬ್ಲ್ಯಾಕ್ (Ceramic Black) ಸಿರಾಮಿಕ್ ಬೈಟ್ (Ceramic White) ಆಗಿವೆ. ಹಾಗೆಯೇ ಈ ಫೋನ್ ಅಮೆಜಾನ್ ತಾಣ, ಮಿ ಸ್ಟೋರ್ ಹಾಗೂ ಮಿ ಹೋಮ್ ಶಾಪ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಶಿಯೋಮಿ 13 ಪ್ರೊ ಬ್ಯಾಟರಿ ಬ್ಯಾಕ್‌ಅಪ್
ಶಿಯೋಮಿ 13 ಪ್ರೊ ಫೋನ್ 4,820 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಈ ಫೋನ್ 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಒಳಗೊಂಡಿದೆ. ಇದರೊಂದಿಗೆ 10W ಸಾಮರ್ಥ್ಯದ ವೈರ್‌ಲೆಸ್ ರಿವರ್ಸ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರುವುದು ಆಕರ್ಷಕ ಅಂಶಗಳಲ್ಲಿ ಒಂದಾಗಿದೆ.
ಶಿಯೋಮಿ 13 ಪ್ರೊ ಡಿಸ್‌ಪ್ಲೇ ವಿನ್ಯಾಸ
ಶಿಯೋಮಿ 13 ಪ್ರೊ ಫೋನ್ 6.73 ಇಂಚಿನ WQHD+ ಡಿಸ್‌ಪ್ಲೇ ಹೊಂದಿದ್ದು, ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಹಾಗೆಯೇ ಈ ಡಿಸ್‌ಪ್ಲೇಯು 1440 x 3200 ಪಿಕ್ಸಲ್ ರೆಸಲ್ಯೂಶನ್ ಅನ್ನು ಪಡೆದಿದೆ. ಇದರೊಂದಿಗೆ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ.
ಶಿಯೋಮಿ 13 ಪ್ರೊ ಕ್ಯಾಮೆರಾ ಧಮಾಕಾ
ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ (Leica lenses) ಹೊಂದಿದೆ. ಹಾಗೆಯೇ ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು ಕ್ರಮವಾಗಿ 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32 ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಶಿಯೋಮಿ 13 ಪ್ರೊ : ಕೊನೆಯ ಮಾತು
ಮಾರುಕಟ್ಟೆಗೆ ನೂತನವಾಗಿ ಲಗ್ಗೆ ಇಟ್ಟಿರುವ ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ ಕೆಲವು ಅತ್ಯುತ್ತಮ ಫೀಚರ್ಸ್‌ಗಳ ಮೂಲಕ ಫ್ಲ್ಯಾಗ್‌ಶಿಪ್ ಫೋನ್ ಎನಿಸಿಕೊಂಡಿದೆ. ಈ ಫೋನ್ ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಫೋನ್ ಅನ್ನು ಎದುರಿಸಬೇಕಿದೆ. ಅಲ್ಲದೇ ವಿವೋ X90 ಸರಣಿಯ ಫೋನ್‌ಗಳು ಪ್ರತಿಸ್ಪರ್ಧಿ ಆಗಿ ಕಾಣಿಸಿಕೊಂಡಿವೆ.


Click it and Unblock the Notifications