ಇಂದಿನಿಂದ ಶಿಯೋಮಿ 13 ಪ್ರೊ ಖರೀದಿಗೆ ಲಭ್ಯ; 10,000ರೂ. ರಿಯಾಯಿತಿ ಪಡೆಯೋದೇಗೆ?
ಸ್ಮಾರ್ಟ್‌ಫೋನ್ ವಲಯದಲ್ಲಿ ಶಿಯೋಮಿಯ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ಇದರ ನಡುವೆ ಈಗಾಗಲೇ ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಾಗಿದ್ದು, ಈ ಫೋನ್ ಇಂದಿನಿಂದ ಮಾರಾಟಕ್ಕೆ ಲಭ್ಯವಾಗಿದೆ. ಈ ವೇಳೆ ನೀವು ಬರೋಬ್ಬರಿ 10,000 ರೂ. ರಿಯಾಯಿತಿ ಪಡೆಯಬಹುದು.
ಹೌದು, ಶೀಯೋಮಿಯ ಪ್ರೀಮಿಯಂ ಸ್ಮಾರ್ಟ್‌ಫೋನ್ ಶೀಯೋಮಿ 13 ಪ್ರೊ ಮಾರಾಟವು ಇಂದಿನಿಂದ ಆರಂಭ ಆಗಿದ್ದು, ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, 50 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆಯೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ಗೆ ಹೆಚ್ಚಿನ ಡಿಸ್ಕೌಂಟ್ ಪಡೆದುಕೊಳ್ಳುವುದು ಹೇಗೆ?, ಪ್ರಮುಖ ಫೀಚರ್ಸ್ ಏನು ಎಂಬ ಮಾಹಿತಿಗಾಗಿ ಈ ಲೇಖನ ಓದಿ.

ಶಿಯೋಮಿ 13 ಪ್ರೊ ಗೆ ಆಫರ್ ಏನು?
ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ 12GB RAM ಹಾಗೂ 256GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಕಾಣಿಸಿಕೊಂಡಿದ್ದು, ಇದಕ್ಕೆ 79,999 ರೂ. ಗಳ ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ. ಈ 79,999 ರೂ. ಗಳ ಬೆಲೆಯ ಫೋನ್ ಅನ್ನು ನೀವು ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಂಡು 69,999 ರೂ.ಗಳಿಗೆ ಖರೀದಿ ಮಾಡಬಹುದು. ಈ ಮೂಲಕ ನಿಮಗೆ 10,000 ರೂ. ಗಳನ್ನು ಉಳಿತಾಯ ಮಾಡಬಹುದು. ಅದಾಗ್ಯೂ ಇನ್ನೂ ಹೆಚ್ಚಿನ ಡಿಸ್ಕೌಂಟ್ ಸಹ ಲಭ್ಯ.
ವಿನಿಮಯ ಆಫರ್
ಐಸಿಐಸಿಐ ಬ್ಯಾಂಕ್ ನೀಡುವ ತ್ವರಿತ ರಿಯಾಯಿತಿಯ ಹೊರತಾಗಿಯೂ ಗ್ರಾಹಕರು ಶಿಯೋಮಿ ಮತ್ತು ರೆಡ್ಮಿ ಅಲ್ಲದ ಸ್ಮಾರ್ಟ್‌ಫೋನ್‌ಗಳ ಮೇಲೆ ಅಂದರೆ ಇತರೆ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳ ಮೇಲೆ 8,000 ರೂ. ಗಳ ವಿನಿಮಯ ಬೋನಸ್ ಲಭ್ಯವಾಗಲಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಉತ್ತಮವಾಗಿದ್ದರೆ ಈ ಬೆಲೆ ಲಭ್ಯವಾಗಲಿದೆ, ಇಲ್ಲವಾದರೆ ಇದಕ್ಕಿಂತ ಕಡಿಮೆ ಬೆಲೆ ಲಭ್ಯವಾಗುತ್ತದೆ.

ಅದರಂತೆ ಶಿಯೋಮಿ ಹಾಗೂ ರೆಡ್ಮಿ ಫೋನ್‌ಗಳನ್ನು ಈ ವಿನಿಮಯ ಆಫರ್‌ಗೆ ಬಳಕೆ ಮಾಡಿಕೊಂಡರೆ ಗ್ರಾಹಕರು 12,000 ರೂ. ಗಳ ವಿನಿಮಯ ಬೋನಸ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಮೊದಲ 1,000 ಶಿಯೋಮಿ ಅಭಿಮಾನಿಗಳು ವಿಶೇಷ ಶಿಯೋಮಿ 13 ಪ್ರೊ ಮರ್ಚಂಡೈಸ್ ಬಾಕ್ಸ್ ಅನ್ನು ಸಹ ಪಡೆದುಕೊಳ್ಳಲಿದ್ದಾರೆ ಹೀಗಾಗಿ ಬೇಗ ಖರೀದಿ ಮಾಡುವ ಗ್ರಾಹಕರಿಗೆ ಹಲವು ಆಫರ್‌ಗಳು ಲಭ್ಯವಾಗಲಿವೆ.
ಶಿಯೋಮಿ 13 ಪ್ರೊ ಫೀಚರ್ಸ್
ಶಿಯೋಮಿ 13 ಪ್ರೊ ಫೋನ್ 6.73 ಇಂಚಿನ WQHD+ ಡಿಸ್‌ಪ್ಲೇ ಹೊಂದಿದ್ದು, ಜೊತೆಗೆ 120Hz ರಿಫ್ರೆಶ್ ರೇಟ್ ಇದರಲ್ಲಿದೆ. ಇದರೊಂದಿಗೆ 1440 x 3200 ಪಿಕ್ಸಲ್ ರೆಸಲ್ಯೂಶನ್ ಅನ್ನು ಪಡೆದಿದ್ದು. ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಇನ್ನಷ್ಟು ವಿಶೇಷವಾಗಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ಸೆಟ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು,12GB RAM + 256GB ಸ್ಟೋರೇಜ್ ವೇರಿಯಂಟ್ ನಲ್ಲಿ ಲಭ್ಯ.
ಶಿಯೋಮಿ 13 ಪ್ರೊ ಫೋನ್ ನ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 50 ಮೆಗಾ ಪಿಕ್ಸೆಲ್ ಸೆನ್ಸಾರ್ ಮುಖ್ಯ ಕ್ಯಾಮೆರಾ ಜೊತೆಗೆ ಸೆಕೆಂಡರಿ ಹಾಗೂ ತೃತೀಯ ಕ್ಯಾಮೆರಾಗಳು ಸಹ 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿವೆ. ಇದರೊಂದಿಗೆ ಸೆಲ್ಫಿಗಾಗಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಜೊತೆಗೆ 4,820 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಹಾಗೂ 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಒಳಗೊಂಡಿದೆ. ಇದರೊಂದಿಗೆ 10W ಸಾಮರ್ಥ್ಯದ ವಾಯರ್‌ಲೆಸ್ ರಿವರ್ಸ್ ಚಾರ್ಜಿಂಗ್ ಸೌಲಭ್ಯ ಸಹ ಇದೆ. ಇದರೊಂದಿಗೆ ಸಿರಾಮಿಕ್ ಬ್ಲ್ಯಾಕ್, ಸಿರಾಮಿಕ್ ಬೈಟ್ ಎಂಬ ಎರಡು ಬಣ್ಣದಲ್ಲಿ ಕಾಣಿಸಿಕೊಂಡಿದೆ. ಈ ಫೋನ್‌ಗಳನ್ನು ನೀವು ಶಿಯೋಮಿಯ ಅಧಿಕೃತ ಸೈಟ್ ಹಾಗೂ ಆಫ್‌ಲೈನ್ ಸ್ಟೋರ್‌ನಲ್ಲಿ ಲಭ್ಯವಾಗಲಿದೆ.


Click it and Unblock the Notifications








