ದೈತ್ಯ ಶಿಯೋಮಿ 13 ಪ್ರೊ ಫೋನ್ ಬೆಲೆಯಲ್ಲಿ ಇಳಿಕೆ.. ಇದರ ಕ್ಯಾಮೆರಾಗೆ ಗ್ರಾಹಕರು ಫಿದಾ!
ಅಮೆಜಾನ್ ಆಯೋಜಿಸಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಈಗ ಲೈವ್ ನಡೆಯುತ್ತಿದೆ. ಈ ಹಬ್ಬದ ವಿಶೇಷ ಮಾರಾಟದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿದಂತೆ ಇತರೆ ಎಲ್ಲ ಉತ್ಪನ್ನಗಳಿಗೂ ಡಿಸ್ಕೌಂಟ್ ನೀಡಲಾಗಿದೆ. ಆದರೆ ಫೋನ್‌ಗಳು ಆಕರ್ಷಕ ರಿಯಾಯಿತಿಯಲ್ಲಿ ಕಾಣಿಸಿಕೊಂಡಿದ್ದು, ಶಿಯೋಮಿ 13 ಪ್ರೊ ಫೋನ್ ಸಖತ್ ರಿಯಾಯಿತಿ ಪಡೆದಿದೆ.
ಹೌದು, ಅಮೆಜಾನ್ ತಾಣದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಶಿಯೋಮಿ 13 ಪ್ರೊ ಫೋನ್ ಶೇ. 17% ರಷ್ಟು ಡಿಸ್ಕೌಂಟ್ ಪಡೆದಿದ್ದು, 74,998ರೂ. ಗಳ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ 12GB RAM + 256GB ವೇರಿಯಂಟ್ ಫೋನ್ ಅನ್ನು ಗ್ರಾಹಕರು ಬ್ಯಾಂಕ್, ಎಕ್ಸ್‌ಚೇಂಜ್ ಹಾಗೂ ಇತರೆ ಆಫರ್ ಸೇರಿ 69,999ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಸಬಹುದಾಗಿದೆ.

ಇನ್ನು ಈ ದೈತ್ಯ ಫೋನ್ 8GB + 128 GB, 8GB + 256 GB, 12GB + 256 GB ಮತ್ತು 12GB + 512 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದ್ದು, ಇದರ ಜೊತೆಗೆ , Leica ಕ್ಯಾಮೆರಾ ಸಿಸ್ಟಮ್ ಸೌಲಭ್ಯ ಸಹ ಪಡೆದಿದೆ. ಹಾಗಾದರೇ ಶಿಯೋಮಿ 13 ಪ್ರೊ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸದ ಮಾಹಿತಿ
ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ 6.7 ಇಂಚಿನ OLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಸ್ಕ್ರೀನ್ 120 Hz ರಿಫ್ರೆಶ್ ದರ ಪಡೆದಿದೆ. ಇದರ ಜೊತೆಗೆ ಡಿಸ್‌ಪ್ಲೇಯು ಡಾಲ್ಬಿ ವಿಷನ್ ಮತ್ತು HDR10 ಗೆ ಸಪೋರ್ಟ್ ಸಹ ಪಡೆದುಕೊಂಡಿದೆ. ಇದರೊಂದಿಗೆ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಣೆ ಪಡೆದಿದ್ದು, QHD+ ರೆಸಲ್ಯೂಶನ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ.
LTPO ತಂತ್ರಜ್ಞಾನ ಪಡೆದಿದೆ
ಶಿಯೋಮಿ 13 ಪ್ರೊ ಡಿಸ್‌ಪ್ಲೇಯು HDR10 ಸಕ್ರಿಯವಾಗಿದ್ದಾಗ, ಸ್ಕ್ರೀನ್ 1900 nits ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಇದರ ಜೊತೆಗೆ ಈ ಫೋನಿನ ಡಿಸ್‌ಪ್ಲೇಯು LTPO ತಂತ್ರಜ್ಞಾನವನ್ನು ಒಳಗೊಂಡಿದೆ. ಬೆಳಕಿನ ಸ್ಥಿತಿಗೆ ಅನುಗುಣವಾಗಿ ಡಿಸ್‌ಪ್ಲೇಯು ಆಟೋಮ್ಯಾಟಿಕ್ ಆಗಿ ಕಲರ್ ಟೆಂಪ್ರೆಚರ್‌ಗೆ ಸೆಟ್ ಆಗುತ್ತದೆ.

ಯಾವ ಪ್ರೊಸೆಸರ್ ಕಾರ್ಯವೈಖರಿ
ಶಿಯೋಮಿ 13 ಪ್ರೊ ಇತ್ತೀಚಿನ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದುಕೊಂಡಿದೆ. ಇದರೊಂದಿಗೆ 8GB + 128 GB, 8GB + 256 GB, 12GB + 256 GB ಮತ್ತು 12GB + 512 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳು ಲಭ್ಯ.
ಕ್ಯಾಮೆರಾ ಸೆನ್ಸಾರ್ ವಿಶೇಷ ಏನು
ಶಿಯೋಮಿ 13 ಪ್ರೊ ಅಪ್‌ಗ್ರೇಡ್ ಕ್ಯಾಮೆರಾ ರಚನೆ ಪಡೆದಿದ್ದು, Leica ಕ್ಯಾಮೆರಾ ಸಿಸ್ಟಮ್ ಒಳಗೊಂಡಿದೆ. ಇನ್ನು ಇದು ಟ್ರಿಪಲ್ ಕ್ಯಾಮೆರಾ ಒಳಗೊಂಡಿದ್ದು, ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಉಳಿದ ಎರಡು ಕ್ಯಾಮೆರಾಗಳು ಅಲ್ಟ್ರಾ ವೈಡ್ ಹಾಗೂ ಟೆಲಿಫೋಟೊ ಲೆನ್ಸ್ ಅನ್ನು ಪಡೆದಿವೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಪಡೆದಿದೆ.
ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಎಷ್ಟು
ಶಿಯೋಮಿ 13 ಪ್ರೊ ಮೊಬೈಲ್ ಫೋನ್ 4,820 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 120W ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ. ಇದರ ಜೊತೆಗೆ 50W ಸಾಮರ್ಥ್ಯದ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದ್ದು, ಅಂಡರ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೌಲಭ್ಯ ಸಹ ಹೊಂದಿದೆ.


Click it and Unblock the Notifications








