ಎಂಟ್ರಿ ಕೊಡಲಿದೆ ಶಿಯೋಮಿ 13 ಪ್ರೊ ಫೋನ್!..ಫೀಚರ್ಸ್ ತಿಳಿದ್ರೆ, OMG ಅಂತೀರಾ!
ಶಿಯೋಮಿ ಮೊಬೈಲ್ ಸಂಸ್ಥೆಯು ನೂತನವಾಗಿ ಶಿಯೋಮಿ 13 ಪ್ರೊ (Xiaomi 13 Pro) ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಈಗಾಗಲೇ ಶಿಯೋಮಿ 12 ಸರಣಿಯ ಫೋನ್‌ಗಳು ಹೈ ಎಂಡ್ ಮಾದರಿಯ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿವೆ. ಸದ್ಯ ಮುಂಬರಲಿರುವ ಶಿಯೋಮಿ 13 ಪ್ರೊ ಈ ಹಿಂದಿನ ಸರಣಿಯ ಉತ್ತರಾಧಿಕಾರಿ ಆಗಿರಲಿದೆ.

ಶಿಯೋಮಿ ಸಂಸ್ಥೆಯ ಹೊಸ ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ ಇದೇ ಫೆಬ್ರುವರಿ 26 ರಂದು ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ. ಇದೊಂದು ಫ್ಲ್ಯಾಗ್‌ಶಿಪ್ ಮಾದರಿಯ ಸ್ಮಾರ್ಟ್‌ಫೋನ್ ಆಗಿದ್ದು, 5G ಸಪೋರ್ಟ್ ಪಡೆದಿದೆ. ಇನ್ನು ಆಸಕ್ತರು ಅಧಿಕೃತ ಲಾಂಚ್ ಈವೆಂಟ್ ಅನ್ನು ಸಂಸ್ಥೆಯ mi.com ವೆಬ್‌ಸೈಟ್‌ನಲ್ಲಿ ಮತ್ತು ಕಂಪನಿಯ ಅಧಿಕೃತ ಸೋಶಿಯಲ್ ಮೀಡಿಯಾ ಚಾನೆಲ್‌ಗಳಲ್ಲಿ ವೀಕ್ಷಿಸಬಹುದಾಗಿದೆ.
ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಪವರ್ ಅನ್ನು ಒಳಗೊಂಡಿದ್ದು, 4,820mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯ ಪಡೆದಿರಲಿದ್ದು, Leica ಕ್ಯಾಮೆರಾ ಸಿಸ್ಟಮ್ ಒಳಗೊಂಡಿದೆ. ಇನ್ನುಳಿದಂತೆ ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ? ಈ ಫೋನಿನ ನಿರೀಕ್ಷಿತ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿ 13 ಪ್ರೊ : ಡಿಸ್‌ಪ್ಲೇ ರಚನೆ ಮಾಹಿತಿ
ಬಹುನಿರೀಕ್ಷಿತ ಶಿಯೋಮಿ 13 ಪ್ರೊ ಬಿಡುಗಡೆಯ ದಿನಾಂಕ ಖಚಿತವಾಗಿದೆ. ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ 6.7 ಇಂಚಿನ OLED ಡಿಸ್‌ಪ್ಲೇಯನ್ನು ಒಳಗೊಂಡಿರಲಿದ್ದು, ಸ್ಕ್ರೀನ್ 120Hz ರಿಫ್ರೆಶ್ ದರ ಪಡೆದಿರಲಿದೆ. ಜೊತೆಗೆ ಡಿಸ್‌ಪ್ಲೇಯು ಡಾಲ್ಬಿ ವಿಷನ್ ಮತ್ತು HDR10 ಗೆ ಬೆಂಬಲವನ್ನು ಸಹ ಒಳಗೊಂಡಿರಲಿದೆ. ಇದರೊಂದಿಗೆ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಣೆ ಪಡೆದಿರಲಿದ್ದು, QHD+ ರೆಸಲ್ಯೂಶನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಶಿಯೋಮಿ 13 ಪ್ರೊ : LTPO ತಂತ್ರಜ್ಞಾನ
ಹಾಗೆಯೇ ಡಿಸ್‌ಪ್ಲೇಯು HDR10 ಸಕ್ರಿಯವಾಗಿದ್ದಾಗ, ಸ್ಕ್ರೀನ್ 1900 nits ಸಾಮರ್ಥ್ಯದಲ್ಲಿರಲಿದೆ. ಇದರೊಂದಿಗೆ ಈ ಫೋನಿನ ಡಿಸ್‌ಪ್ಲೇಯು LTPO ತಂತ್ರಜ್ಞಾನವನ್ನು ಒಳಗೊಂಡಿದೆ. ಬೆಳಕಿನ ಸ್ಥಿತಿಗೆ ಅನುಗುಣವಾಗಿ ಡಿಸ್‌ಪ್ಲೇಯು ಆಟೋಮ್ಯಾಟಿಕ್ ಆಗಿ ಕಲರ್ ಟೆಂಪ್ರೆಚರ್‌ಗೆ ಹೊಂದಿಕೊಳ್ಳುತ್ತದೆ.

ಶಿಯೋಮಿ 13 ಪ್ರೊ : ಯಾವ ಪ್ರೊಸೆಸರ್ ಕಾರ್ಯನಿರ್ವಹಿಸಲಿದೆ
ಶಿಯೋಮಿ 13 ಪ್ರೊ ಇತ್ತೀಚಿನ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಒಳಗೊಂಡಿರಲಿದೆ. ಇದರೊಂದಿಗೆ 8GB + 128GB, 8GB + 256GB, 12GB + 256GB ಮತ್ತು 12GB + 512GB ಸಾಮರ್ಥ್ಯದ ಆಯ್ಕೆಗಳನ್ನು ಗ್ರಾಹಕರಿಗೆ ಲಭ್ಯವಾಗಲಿವೆ.
ಶಿಯೋಮಿ 13 ಪ್ರೊ : ಕ್ಯಾಮೆರಾ ಸೆನ್ಸಾರ್ ಮಾಹಿತಿ
ಶಿಯೋಮಿ 13 ಪ್ರೊ ಹಿಂದಿನ ಸರಣಿಯ ಕ್ಯಾಮೆರಾ ವ್ಯವಸ್ಥೆಗಿಂತ ಅಪ್‌ಗ್ರೇಡ್ ಆಗಿದ್ದು, ಇದು Leica ಕ್ಯಾಮೆರಾ ಸಿಸ್ಟಮ್ ಒಳಗೊಂಡಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಒಳಗೊಂಡಿರಲಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ. ಇನ್ನೆರಡು ಕ್ಯಾಮೆರಾಗಳು ಅಲ್ಟ್ರಾ ವೈಡ್ ಹಾಗೂ ಟೆಲಿಫೋಟೊ ಲೆನ್ಸ್ ಅನ್ನು ಹೊಂದಿರಲಿವೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ.
ಶಿಯೋಮಿ 13 ಪ್ರೊ : ಬ್ಯಾಟರಿ ಬ್ಯಾಕ್‌ಅಪ್ ಹಾಗೂ ಇತರೆ ಸೌಲಭ್ಯಗಳು
ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ 4,820mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 120W ಫಾಸ್ಟ್ ಚಾರ್ಜಿಂಗ್ ಹೊಂದಿರಲಿದೆ. ಇದಲ್ಲದೇ 50W ಸಾಮರ್ಥ್ಯದ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿರಲಿದ್ದು, ಅಂಡರ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೌಲಭ್ಯ ಪಡೆದಿರಲಿದೆ.
ಶಿಯೋಮಿ 13 ಪ್ರೊ : ನಿರೀಕ್ಷಿತ ಬೆಲೆ ಮಾಹಿತಿ
ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನಿನ ಆರಂಭಿಕ ವೇರಿಯಂಟ್ ಬೆಲೆ ಚೀನಾದಲ್ಲಿ CNY 4,999 ಆಗಿರಲಿದೆ. ಭಾರತದಲ್ಲಿ ಆರಂಭಿಕ ವೇರಿಯಂಟ್ ಬೆಲೆ ಸುಮಾರು 59,200ರೂ. ಆಗಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಫೋನ್ ಸೆರಾಮಿಕ್ ವೈಟ್, ಸೆರಾಮಿಕ್ ಬ್ಲ್ಯಾಕ್, ಫ್ಲೋರಾ ಗ್ರೀನ್ ಹಾಗೂ ಮೌಂಟೆನ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.


Click it and Unblock the Notifications








