ಶಿಯೋಮಿಯ ಈ ದೈತ್ಯ ಫೋನಿಗೆ ಸಿಕ್ಕ ಆಫರ್ ತಿಳಿದ್ರೆ..ವಾರೆವ್ಹಾ ಅಂತೀರಾ!
ದೇಶದ ಪ್ರಮುಖ ಮೊಬೈಲ್ ಸಂಸ್ಥೆಗಳಲ್ಲಿ ಶಿಯೋಮಿ ಕಂಪನಿಯು ಕೂಡಾ ಒಂದಾಗಿದೆ. ಶಿಯೋಮಿ ಕಂಪನಿಯು ಭಿನ್ನ ಶ್ರೇಣಿಯ ಬೆಲೆಯಲ್ಲಿ ಫೋನ್‌ಗಳನ್ನು ಬಿಡುಗಡೆ ಮಾಡಿ, ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಅವುಗಳ ಪೈಕಿ ಕಂಪನಿಯ ಇತ್ತೀಚಿನ ಶಿಯೋಮಿ 13 ಪ್ರೊ ಫೋನ್ ಆಕರ್ಷಕ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆದ್ರೆ ಇದೀಗ ಈ ಫೋನ್ ಸಖತ್ ಡಿಸ್ಕೌಂಟ್ ಪಡೆದಿದ್ದು, ಮತ್ತೊಮ್ಮೆ ಗಮನ ಸೆಳೆದಿದೆ.
ಹೌದು, ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಶಿಯೋಮಿ 13 ಪ್ರೊ ಫೋನ್ ಶೇ. 11% ರಷ್ಟು ಡಿಸ್ಕೌಂಟ್ ಪಡೆದಿದೆ. 12GB RAM + 256GB ವೇರಿಯಂಟ್ ಬೆಲೆ 89,999ರೂ. ಇದ್ದು, ಈಗ 79,999ರೂ. ಗಳ ಆಫರ್ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ ನೋ ಕಾಸ್ಟ್ ಇಎಮ್‌ಐ ಸೌಲಭ್ಯದ ಆಯ್ಕೆಗಳು ಹಾಗೂ ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿ ಸಹ ಸಿಗುತ್ತವೆ. ಹಾಗಾದರೇ ಶಿಯೋಮಿ 13 ಪ್ರೊ ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿ 13 ಪ್ರೊ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸದ ಮಾಹಿತಿ : ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ 6.7 ಇಂಚಿನ OLED ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಸ್ಕ್ರೀನ್ 120 Hz ರಿಫ್ರೆಶ್ ದರ ಹೊಂದಿದೆ. ಇದರ ಜೊತೆಗೆ ಡಿಸ್‌ಪ್ಲೇಯು ಡಾಲ್ಬಿ ವಿಷನ್ ಮತ್ತು HDR10 ಗೆ ಸಪೋರ್ಟ್ ಸಹ ಒಳಗೊಂಡಿದೆ. ಇದರೊಂದಿಗೆ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಣೆ ಪಡೆದಿದ್ದು, QHD+ ರೆಸಲ್ಯೂಶನ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.
ಶಿಯೋಮಿ 13 ಪ್ರೊ LTPO ತಂತ್ರಜ್ಞಾನದ ಸೌಲಭ್ಯ : ಶಿಯೋಮಿ 13 ಪ್ರೊ ಡಿಸ್‌ಪ್ಲೇಯು HDR10 ಸಕ್ರಿಯವಾಗಿದ್ದಾಗ, ಸ್ಕ್ರೀನ್ 1900 nits ಸಾಮರ್ಥ್ಯದಲ್ಲಿರಲಿದೆ. ಇದರ ಜೊತೆಗೆ ಈ ಫೋನಿನ ಡಿಸ್‌ಪ್ಲೇಯು LTPO ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಬೆಳಕಿನ ಸ್ಥಿತಿಗೆ ಅನುಗುಣವಾಗಿ ಡಿಸ್‌ಪ್ಲೇಯು ಆಟೋಮ್ಯಾಟಿಕ್ ಆಗಿ ಕಲರ್ ಟೆಂಪ್ರೆಚರ್‌ಗೆ ಹೊಂದಿಕೊಳ್ಳುತ್ತದೆ.
ಶಿಯೋಮಿ 13 ಪ್ರೊ ಪ್ರೊಸೆಸರ್ ಕಾರ್ಯವೈಖರಿ : ಶಿಯೋಮಿ 13 ಪ್ರೊ ಇತ್ತೀಚಿನ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದುಕೊಂಡಿದೆ. ಇದರೊಂದಿಗೆ 8GB + 128 GB, 8GB + 256 GB, 12GB + 256 GB ಮತ್ತು 12GB + 512 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳು ಲಭ್ಯ.
ಶಿಯೋಮಿ 13 ಪ್ರೊ ಕ್ಯಾಮೆರಾ ಸೆನ್ಸಾರ್ ಮಾಹಿತಿ : ಶಿಯೋಮಿ 13 ಪ್ರೊ ಅಪ್‌ಗ್ರೇಡ್ ಕ್ಯಾಮೆರಾ ವ್ಯವಸ್ಥೆಯನ್ನು ಪಡೆದಿದ್ದು, Leica ಕ್ಯಾಮೆರಾ ಸಿಸ್ಟಮ್ ಪಡೆದುಕೊಂಡಿದೆ. ಈ ಮೊಬೈಲ್ ಟ್ರಿಪಲ್ ಕ್ಯಾಮೆರಾ ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಉಳಿದೆರಡು ಕ್ಯಾಮೆರಾಗಳು ಅಲ್ಟ್ರಾ ವೈಡ್ ಹಾಗೂ ಟೆಲಿಫೋಟೊ ಲೆನ್ಸ್ ಅನ್ನು ಪಡೆದಿವೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಪಡೆದಿದೆ.
ಶಿಯೋಮಿ 13 ಪ್ರೊ ಬ್ಯಾಟರಿ ಬ್ಯಾಕ್‌ಅಪ್ ಎಷ್ಟಿದೆ : ಶಿಯೋಮಿ 13 ಪ್ರೊ ಮೊಬೈಲ್ ಫೋನ್ 4,820 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿದ್ದು, ಇದಕ್ಕೆ ಅನುಗುಣವಾಗಿ 120W ಫಾಸ್ಟ್ ಚಾರ್ಜಿಂಗ್ ಪಡೆದುಕೊಂಡಿದೆ. ಇದರ ಜೊತೆಗೆ 50W ಸಾಮರ್ಥ್ಯದ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದ್ದು, ಅಂಡರ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೌಲಭ್ಯ ಸಹ ಹೊಂದಿದೆ.


Click it and Unblock the Notifications








