ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಶಿಯೋಮಿ 13 ಅಲ್ಟ್ರಾ; ಅಚ್ಚರಿಯ ಫೀಚರ್ಸ್!
ಶಿಯೋಮಿ ಮೊಬೈಲ್ ಸಂಸ್ಥೆಯು ಇತ್ತೀಚಿಗೆ ನೂತನವಾಗಿ ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ಶಿಯೋಮಿ 13 ಅಲ್ಟ್ರಾ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಬರಲಿರುವ ಈ ಫೋನ್ ಹೈ ಎಂಡ್ ಫೀಚರ್ಸ್‌ಗಳನ್ನು ಒಳಗೊಂಡಿರುವುದು ಬಹುತೇಕ ಖಚಿತ ಆಗಿದೆ.
ಹೌದು, ಶಿಯೋಮಿ ಸಂಸ್ಥೆಯು ಹೊಸದಾಗಿ ಶಿಯೋಮಿ 13 ಅಲ್ಟ್ರಾ ಫೋನ್ ಅನ್ನು ಲಾಂಚ್ ಮಾಡಲಿದೆ. ಅಂದಹಾಗೆಯೇ ಈ ಫೋನ್ ಪ್ರಸಕ್ತ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅನಾವರಣ ಮಾಡುವ ನಿರೀಕ್ಷೆಗಳಿವೆ. ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ.

ಹಾಗೆಯೇ ಈ ಫೋನ್ 12GB RAM ಆಯ್ಕೆ ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಪಡೆದಿರುವ ಸಾಧ್ಯತೆಗಳಿವೆ. ಇದಲ್ಲದೇ ಈ ಫೋನ್ ಅಮೊಲೆಡ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿರುವ ಬಗ್ಗೆ ಕೆಲವು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಹಾಗಾದರೆ ಇನ್ನುಳಿದಂತೆ ಇತರ ಯಾವೆಲ್ಲಾ ಫೀಚರ್ಸ್ ಇರಲಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ಶಿಯೋಮಿ 13 ಅಲ್ಟ್ರಾ : ಡಿಸ್‌ಪ್ಲೇ ರಚನೆ ಮತ್ತು ಪ್ರೊಸೆಸರ್
ಶಿಯೋಮಿ 13 ಅಲ್ಟ್ರಾ ಸ್ಮಾರ್ಟ್‌ಫೋನ್ 6.7 ಇಂಚಿನ WQHD+ ಅಮೊಲೆಡ್ ಸ್ಕ್ರೀನ್ ಹೊಂದಿರಲಿದ್ದು, ಇದಕ್ಕೆ ಪೂರಕವಾಗಿ 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿರಲಿದೆ. ಹಾಗೆಯೇ ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್ ಸಫೋರ್ಟ್ ಸಹ ಪಡೆದಿರಲಿದೆ.

ಶಿಯೋಮಿ 13 ಅಲ್ಟ್ರಾ : ಕ್ಯಾಮೆರಾ ಸೆಟ್‌ಅಪ್
ಶಿಯೋಮಿ 13 ಅಲ್ಟ್ರಾ ಫೋನ್ ಕ್ವಾಡ್ ಕ್ಯಾಮೆರಾ ರಚನೆ ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾ ಹಾಗೂ ಸೆಕೆಂಡರಿ ಕ್ಯಾಮೆರಾಗಳು ಕ್ರಮವಾಗಿ 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇರಲಿವೆ. ಉಳಿದ ಎರಡು ಕ್ಯಾಮೆರಾಗಳು 12 ಮೆಗಾ ಪಿಕ್ಸಲ್‌ನಲ್ಲಿ ಇರಲಿವೆ. ಹಾಗೆಯೇ 32 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಸೌಲಭ್ಯ ಪಡೆದಿರಲಿದೆ.

ಶಿಯೋಮಿ 13 ಅಲ್ಟ್ರಾ : ಬ್ಯಾಟರಿ ಬ್ಯಾಕ್‌ಅಪ್ ಹಾಗೂ ಇತರೆ ಸೌಲಭ್ಯಗಳು
ಶಿಯೋಮಿ 13 ಅಲ್ಟ್ರಾ ಸ್ಮಾರ್ಟ್‌ಫೋನ್ 5500 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 120W ಫಾಸ್ಟ್ ಚಾರ್ಜಿಂಗ್ ಹೊಂದಿರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ವೈ-ಫೈ, ಜಿಪಿಎಸ್, ಬ್ಲೂಟೂತ್ ಮತ್ತು ಯುಎಸ್‌ಬಿ ಟೈಪ್-ಸಿ ಆಯ್ಕೆಗಳನ್ನು ಪಡೆದಿರಲಿದೆ.
ಶಿಯೋಮಿ 13 ಅಲ್ಟ್ರಾ : ನಿರೀಕ್ಷಿತ ಬೆಲೆ ಮಾಹಿತಿ
ಶಿಯೋಮಿ 13 ಅಲ್ಟ್ರಾ ಸ್ಮಾರ್ಟ್‌ಫೋನ 12GB ವೇರಿಯಂಟ್ ಆಯ್ಕೆಯಲ್ಲಿ ಎಂಟ್ರಿ ಕೊಡಲಿದೆ. ಈ ಫೋನ್ 80,000ರೂ. ಗಳ ಆಸುಪಾಸಿನ ಪ್ರೈಸ್ ಟ್ಯಾಗ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಫೋನ್ ಸೆರಾಮಿಕ್ ಬ್ಲ್ಯಾಕ್ ಬಣ್ಣದ ಆಯ್ಕೆ ಪಡೆದಿರುವ ಸಾಧ್ಯತೆಗಳಿವೆ.
ಶಿಯೋಮಿ 13 ಪ್ರೊ ಫೋನ್ ಫೀಚರ್ಸ್
ಶಿಯೋಮಿ 13 ಪ್ರೊ ಫೋನ್ 6.73 ಇಂಚಿನ WQHD+ ಡಿಸ್‌ಪ್ಲೇ ಹೊಂದಿದ್ದು, ಇದರ ಜೊತೆಗೆ 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಾಗೆಯೇ 4,820 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದೆ. ಈ ಫೋನ್ 120W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಒಳಗೊಂಡಿದೆ.


Click it and Unblock the Notifications








