ಶಿಯೋಮಿ 13 ಅಲ್ಟ್ರಾ ಸ್ಮಾರ್ಟ್‌ಫೋನ್ ಲಾಂಚ್: ಬೆಲೆ ಎಷ್ಟು, ಫೀಚರ್ಸ್ ಏನಿದೆ?
ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇದೆ. ಈ ಫೋನ್‌ಗಳ ಕಾರ್ಯಕ್ಷಮತೆ ಹಾಗೂ ಕ್ಯಾಮೆರಾ ಫೀಚರ್ಸ್ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಹಲವಾರು ಗ್ರಾಹಕರು ಈ ಕಂಪೆನಿಯ ಫೋನ್‌ಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ. ಈ ನಡುವೆ ಶಿಯೋಮಿ ಹೊಸ ಫೋನ್ ಅನ್ನು ಅನಾವರಣ ಮಾಡಿದ್ದು, ಇದು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸದ್ದು ಮಾಡೋದು ಪಕ್ಕಾ ಎನಿಸಿದೆ.
ಹೌದು, ಶಿಯೋಮಿ 13 ಅಲ್ಟ್ರಾ (Xiaomi 13 Ultra) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲಾಗಿದ್ದು, ಈ ಫೋನ್ 50 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹೊಂದಿದ್ದು, 90W ಫಾಸ್ಟ್ ಚಾರ್ಜ್ ಬೆಂಬಲ ಪಡೆದುಕೊಂಡಿದೆ. ಹಾಗೆಯೇ ಅತ್ಯಂತ ಹೆಚ್ಚಿನ ಬ್ರೈಟ್‌ನೆಸ್ ಅಂದರೆ 2600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮೂಲಕ ವಿಶೇಷ ಎನಿಸಿಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರವನ್ನು ತಿಳಿದುಕೊಳ್ಳೋಣ ಬನ್ನಿ.

ಶಿಯೋಮಿ 13 ಅಲ್ಟ್ರಾ ಡಿಸ್‌ಪ್ಲೇ ವಿವರ: ಈ ಫೋನ್ 6.73 ಇಂಚಿನ 2K ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು LTPO ಗೆ ಬೆಂಬಲ ಪಡೆದಿದೆ. ಜೊತೆಗೆ 120Hz ರಿಫ್ರೆಶ್ ರೇಟ್, HDR10+, ಡಾಲ್ಬಿ ವಿಷನ್, P3 ಕಲರ್ ಗ್ಯಾಮಟ್, 1920Hz PWM ಡಿಮ್ಮಿಂಗ್ ಹಾಗೂ 2600ನಿಟ್ಸ್ ವರೆಗೆ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದ್ದು, ಅತ್ಯಂತ ಆಕರ್ಷಕವಾದ ಶೈಲಿಯಲ್ಲಿ ಕಾಣಿಸಿಕೊಂಡಿದೆ. ಅದರಲ್ಲೂ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಪಡೆದುಕೊಂಡಿದೆ.
ಶಿಯೋಮಿ 13 ಅಲ್ಟ್ರಾ ಪ್ರೊಸೆಸರ್: ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ 16GB RAM ಹಾಗೂ 1TB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಂಡಿದೆ. ವಿಷಯ ಏನೆಂದರೆ ನಿಮಗೆ ಇನ್ನೂ ಹೆಚ್ಚಿನ ಸ್ಟೋರೇಜ್ ಅವಶ್ಯಕತೆ ಇದೆ ಎಂದಾದರೆ ಇದನ್ನು ವಿಸ್ತರಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿಲ್ಲ.
ಶಿಯೋಮಿ 13ಅಲ್ಟ್ರಾ ಕ್ಯಾಮೆರಾ ರಚನೆ: ಶಿಯೋಮಿ ಫೋನ್‌ಗಳು ಇತ್ತೀಚೆಗೆ ಕ್ಯಾಮೆರಾ ವಿಚಾರಕ್ಕೆ ಹೆಚ್ಚು ಫೋಕಸ್ ಆಗುತ್ತಿವೆ. ಅದರಂತೆ ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಇದರಲ್ಲಿ 50ಮೆಗಾಪಿಕ್ಸೆಲ್ ಸೋನಿ IMX989 ಸೆನ್ಸರ್, 50ಮೆಗಾಪಿಕ್ಸೆಲ್ ಸೋನಿ IMX858 ಅಲ್ಟ್ರಾವೈಡ್ ಕ್ಯಾಮೆರಾ, OIS ನೊಂದಿಗೆ 50ಮೆಗಾಪಿಕ್ಸೆಲ್ ಸೂಪರ್ ಟೆಲಿಫೋಟೋ ಸೆನ್ಸರ್ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 50ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಹೊಂದಿದೆ. ಇದರೊಂದಿಗೆ 32ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಶಿಯೋಮಿ 13ಅಲ್ಟ್ರಾ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ : ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಚಾರ್ಜಿಂಗ್ ವಿಭಾಗದಲ್ಲಿ ಎರಡು ಆಯ್ಕೆ ಪಡೆದುಕೊಂಡಿದೆ. ಒಂದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಹಾಗೂ ಮತ್ತೊಂದು 50W ವಾಯರ್‌ಲೆಸ್ ಚಾರ್ಜಿಂಗ್ ಟೆಕ್ನಾಲಜಿ. ಈ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕ್ಷಣ ಮಾತ್ರದಲ್ಲಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ಇನ್ನಿತರೆ ಫೀಚರ್ಸ್‌ಗಳ ಕಡೆ ಕಣ್ಣಾಯಿಸುವುದಾದರೆ ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್, ಡಾಲ್ಬಿ ಅಟ್ಮಾಸ್, ಐಆರ್ ಬ್ಲಾಸ್ಟರ್ ಮತ್ತು ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಹಾಗೆಯೇ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಸಹ ಪಡೆದುಕೊಂಡಿದ್ದು, ಈ ಮೂಲಕ ಉತ್ತಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಪಟ್ಟಿಗೆ ಸೇರಿಕೊಳ್ಳಲಿದೆ.

ಶಿಯೋಮಿ 13 ಅಲ್ಟ್ರಾ ಬೆಲೆ ಹಾಗೂ ಲಭ್ಯತೆ : ಈ ಫೋನ್‌ನ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, 12GB + 256GB ಸ್ಟೋರೇಜ್ ಮಾದರಿಗೆ RMB 5,999 ಬೆಲೆ ಹೊಂದಿದೆ. ಅಂದರೆ ಭಾರತದಲ್ಲಿ ಇದನ್ನು ನೀವು 71,600 ರೂ. ಗಳ ಆಸುಪಾಸಿನಲ್ಲಿ ಖರೀದಿ ಮಾಡಬಹುದು. ಹಾಗೆಯೇ 16GB + 512GB ವೇರಿಯಂಟ್‌ಗೆ RMB 6499 ಬೆಲೆ ನಿಗದಿ ಮಾಡಲಾಗಿದ್ದು, ಭಾರತದಲ್ಲಿ 77,600 ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.


Click it and Unblock the Notifications








