Home
ಸುದ್ದಿಜಾಲ

ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ 'ಶಿಯೋಮಿ 13T ಪ್ರೊ' ಫೋನ್‌!..ಅಬ್ಬರದ ಫೀಚರ್ಸ್‌!

ಪ್ರಮುಖ ಮೊಬೈಲ್‌ ಕಂಪನಿಗಳಲ್ಲಿ ಒಂದಾದ ಶಿಯೋಮಿ ಮೊಬೈಲ್‌ ಸಂಸ್ಥೆಯು ನೂತನವಾಗಿ ಶಿಯೋಮಿ 13T ಸ್ಮಾರ್ಟ್‌ಫೋನ್‌ ಸರಣಿ ಅನ್ನು ಗ್ಲೋಬಲ್ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸರಣಿಯು ಶಿಯೋಮಿ 13T ಮತ್ತು ಶಿಯೋಮಿ 13T ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ.

ಹೌದು, ಶಿಯೋಮಿ ಸಂಸ್ಥೆಯು ಹೊಸದಾಗಿ ಲಾಂಚ್ ಮಾಡಿರುವ ಶಿಯೋಮಿ 13T ಪ್ರೊ ಫೋನ್‌ ಆಕರ್ಷಕ ಫೀಚರ್ಸ್‌ ಹಾಗೂ ಡಿಸೈನ್‌ನಿಂದ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಅಂದಹಾಗೆ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟ್ರಾ SoC ಪ್ರೊಸೆಸರ್‌ ಅನ್ನು ಪಡೆದಿದ್ದು, ಜೊತೆಗೆ ಈ ದೈತ್ಯ ಫೋನ್‌ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ 'ಶಿಯೋಮಿ 13T ಪ್ರೊ' ಫೋನ್‌!..ಅಬ್ಬರದ ಫೀಚರ್ಸ್‌!

ಇನ್ನು ಈ ನೂತನ ಫೋನ್‌ ಡಾಲ್ಬಿ ವಿಷನ್‌ ಸೌಲಭ್ಯ ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. ಹಾಗೆಯೇ ಈ ಮೊಬೈಲ್‌ನ ಸೆಲ್ಫಿ ಕ್ಯಾಮೆರಾವು 20 ಮೆಗಾ ಪಿಕ್ಸಲ್‌ ಆಗಿದೆ. ಹಾಗಾದರೆ ಶಿಯೋಮಿ 13T ಪ್ರೊ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿ 13T ಪ್ರೊ ಡಿಸ್‌ಪ್ಲೇ ರಚನೆ
ಶಿಯೋಮಿ 13T ಪ್ರೊ ಸ್ಮಾರ್ಟ್‌ಫೋನ್‌ 6.67 FHD+ ಅಮೊಲೇಡ್‌ ಸ್ಕ್ರೀನ್‌ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 2712 × 1200 ಪಿಕ್ಸಲ್‌ ರೆಸಲ್ಯೂಶನ್‌ ಪಡೆದಿದೆ. ಜೊತೆಗೆ 144Hz ರೇಟ್‌ ಆಯ್ಕೆ ಪಡೆದಿದ್ದು, 2600 nits ಬ್ರೈಟ್ನೆಸ್‌ ಸೌಲಭ್ಯ ಒಳಗೊಂಡಿದೆ. ಸ್ಕ್ರೀನ್‌ ರಕ್ಷಣೆಗೆ ಗೊರಿಲ್ಲಾ ಗ್ಲಾಸ್‌ 5 ಸಹ ಪಡೆದಿದೆ.

ಶಿಯೋಮಿ 13T ಪ್ರೊ ಪ್ರೊಸೆಸರ್‌ ಬಲ
ಶಿಯೋಮಿ 13T ಪ್ರೊ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟ್ರಾ SoC ಪ್ರೊಸೆಸರ್‌ ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಅನುಗುಣವಾಗಿ ಆಂಡ್ರಾಯ್ಡ್ 13 ಜೊತೆಗೆ MIUI 14 ಸಪೋರ್ಟ್ ಪಡೆದಿದೆ. ಅಲ್ಲದೇ ಈ ಫೋನ್‌ 12/16GB RAM ಜೊತೆಗೆ 256/512GB/1TB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಇದು ಖರೀದಿಗೆ ಲಭ್ಯ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ 'ಶಿಯೋಮಿ 13T ಪ್ರೊ' ಫೋನ್‌!..ಅಬ್ಬರದ ಫೀಚರ್ಸ್‌!

ಶಿಯೋಮಿ 13T ಪ್ರೊ ಕ್ಯಾಮೆರಾ ರಚನೆ
ಶಿಯೋಮಿ 13T ಪ್ರೊ ಫೋನ್‌ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿದೆ. ಇದರ ಸೆಕೆಂಡರಿ ಕ್ಯಾಮೆರಾ ಕೂಡಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ದಲ್ಲಿ ಇದೆ. ಹಾಗೆಯೇ ತೃತೀಯ ಕ್ಯಾಮೆರಾ 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಇದರೊಂದಿಗೆ 20 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಸೌಲಭ್ಯ ಪಡೆದಿದೆ.

ಶಿಯೋಮಿ 13T ಪ್ರೊ ಬ್ಯಾಟರಿ ಮತ್ತು ಇತರೆ
ಶಿಯೋಮಿ 13T ಪ್ರೊ ಸ್ಮಾರ್ಟ್‌ಫೋನ್‌ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 120W ಫಾಸ್ಟ್‌ ಚಾರ್ಜಿಂಗ್ ಕೂಡಾ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫೇಸ್ ಅನ್‌ಲಾಕ್ ಆಯ್ಕೆ, 5G, NFC, IP68 ರೇಟಿಂಗ್, ಬ್ಲೂಟೂತ್ 5.4, USB-C 2.0 ಪೋರ್ಟ್, GPS ಮತ್ತು ವೈಫೈ 7 ಆಯ್ಕೆಗಳನ್ನು ಪಡೆದೆ.

ಶಿಯೋಮಿ 13T ಪ್ರೊ ಬೆಲೆ ಎಷ್ಟು
ಶಿಯೋಮಿ 13T ಪ್ರೊ ಬೆಲೆಯು GBP 649 (ಭಾರತದಲ್ಲಿ ಅಂದಾಜು 65,610ರೂ. ಆಗಿದೆ). ಇನ್ನು ಈ ಫೋನ್‌ ಆಲ್ಪೈನ್ ಬ್ಲೂ, ಮೆಡೋ ಗ್ರೀನ್ ಮತ್ತು ಬ್ಲ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಿದೆ.

Best Mobiles in India

English summary
Xiaomi 13T Pro with MediaTek Dimensity SoC launched. Check Price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+