ನಾಳೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್!
ಗ್ರಾಹಕರು ಬಹಳ ಕಾತುರದಿಂದ ಎದುರುನೋಡುತ್ತಿರುವ ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ನಾಳೆ (ಮಾರ್ಚ್ 7 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಈ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳು ಈಗಾಗಲೇ ಮೊಬೈಲ್ ಪ್ರಿಯರ ಗಮನ ಸೆಳೆದಿವೆ.
ಹೌದು, ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ ಫೋನ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ನಾಳೆ ಬಿಡುಗಡೆ ಆಗಲಿದೆ. ಈ ಫೋನ್‌ಗಳ ಬಿಡುಗಡೆ ಬಗ್ಗೆ ದೈತ್ಯ ಇ ಕಾಮರ್ಸ್ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ತಿಳಿಸಲಾಗಿದೆ. ವಿಭಿನ್ನ ಕ್ಯಾಮೆರಾ ರಚನೆ ಹಾಗೂ ಲೆದರ್ ಟಚ್ ಇರುವ ಬ್ಯಾಕ್ ಪ್ಯಾನೆಲ್ ರಚನೆ ಅನ್ನು ಈ ಫೋನ್ ಪಡೆದಿದ್ದು, 5160 mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿರಲಿದೆ.

ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ಬಲದಲ್ಲಿ ಕೆಲಸ ಮಾಡಲಿದ್ದು, ಇದರ ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆನ್ಸಾರ್ ಪಡೆದಿರಲಿದೆ. ಹಾಗೆಯೇ 4610mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಕೂಡಾ ಒಳಗೊಂಡಿರುವ ಸಾಧ್ಯತೆ ಇದೆ. ಇನ್ನುಳಿದಂತೆ ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ ಫೋನಿನ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಶಿಯೋಮಿ 14 ಸ್ಮಾರ್ಟ್‌ಫೋನ್ ನಿರೀಕ್ಷಿತ
ಶಿಯೋಮಿ 14 ಮೊಬೈಲ್ ಕರ್ವ್ಡ್ ರಿಯರ್ ಪ್ಯಾನಲ್ ಆಯ್ಕೆ ಪಡೆದಿದ್ದು, ಸ್ಪೀಕರ್ ಅನ್ನು ಡಿಸ್‌ಪ್ಲೇ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇದು ಮೇಲ್ಭಾಗ ಮತ್ತು ಸೈಡ್‌ನಲ್ಲಿ ಉತ್ತಮ ವೀಕ್ಷಣಾ ಅನುಭವ ಉಂಟು ಮಾಡುತ್ತದೆ. ಉಳಿದಂತೆ ಈ ಫೋನ್ ಫೋನ್ 6.36 ಇಂಚಿನ ಕ್ರಿಸ್ಟಲ್ ರೆಸ್ ಅಮೋಲೆಡ್ ಡಿಸ್‌ಪ್ಲೇ ಮತ್ತು ತುಂಬಾ ಹಗುರವಾದ ಬೆಜೆಲ್‌ಗಳೊಂದಿಗೆ ಕಾಣಿಸಿಕೊಂಡಿದೆ.

ಈ ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಉತ್ತಮ ಫೋಟೋಗ್ರಫಿಗಾಗಿ ಮುಖ್ಯ ಕ್ಯಾಮೆರಾ ಲೈಕಾ ಸಮ್ಮಿಲಕ್ಸ್ ಆಪ್ಟಿಕ್ಸ್, ಅಪ್‌ಗ್ರೇಡ್ ಮಾಡಿದೆ. ಇದು 13.5 EV ಡೈನಾಮಿಕ್ ರೇಂಜ್‌ನೊಂದಿಗೆ ಲೈಟ್ ಫ್ಯೂಷನ್ 900 ಇಮೇಜ್ ಸೆನ್ಸಾರ್ ಆಯ್ಕೆ ಒಳಗೊಂಡಿದೆ. ಇದರೊಂದಿಗೆ ಲೈಕಾ 14 ಎಂಎಂ ಅಲ್ಟ್ರಾ ವೈಡ್ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ರೆಸಲ್ಯೂಶನ್ ಅನ್ನು ಪಡೆದಿದ್ದು, ಲೈಕಾ 75 ಎಂಎಂ ಟೆಲಿಫೋಟೋ ಲೆನ್ಸ್ ಕನಿಷ್ಠ 10 ಸೆಂಟಿ ಮೀಟರ್ ಫೋಕಸ್ ಸೌಲಭ್ಯ ಇರಲಿದೆ.
ಹಾಗೆಯೇ ಈ ನೂತನ ಮೊಬೈಲ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಿಂದ ಕೆಲಸ ನಿರ್ವಹಿಸಲಿದ್ದು, ಶಿಯೋಮಿ ಹೈಪರ್ ಓಎಸ್ ನಲ್ಲಿ ಕೆಲಸ ಮಾಡಲಿದೆ. ಇದರ ಜೊತೆಗೆ ಈ ಮೊಬೈಲ್ 90W ಹೈಪರ್‌ಚಾರ್ಜ್ ಮತ್ತು 50W ವೈರ್‌ಲೆಸ್ ಹೈಪರ್‌ಚಾರ್ಜ್ ಸಪೋರ್ಟ್ ಪಡೆದಿದ್ದು,ಹಾಗೆಯೇ 4610mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ.
ಶಿಯೋಮಿ 14 ಅಲ್ಟ್ರಾ ನಿರೀಕ್ಷಿತ ಫೀಚರ್ಸ್
ಈ ಫೋನ್ ಗಟ್ಟಿಮುಟ್ಟಾದ ಗಾರ್ಡಿಯನ್ ರಚನೆಯನ್ನು ಹೊಂದಿದೆ. ಇದರಲ್ಲಿನ ಅಲ್ಯೂಮಿನಿಯಂ ಫ್ರೇಮ್ ಈ ಫೋನ್‌ಗೆ ಹೆಚ್ಚಿನ ಲುಕ್ ನೀಡಿದೆ. 6.73 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಪಡೆದಿದ್ದು, ಇದು 3200 x 1440 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಒಳಗೊಂಡಿದೆ. ಇದರ ಜೊತೆಗೆ 522 ppi ಪಿಕ್ಸೆಲ್ ಸಾಂದ್ರತೆ, 120Hz ರಿಫ್ರೆಶ್ ರೇಟ್ ಮತ್ತು 3000 ನಿಟ್ಸ್ ಇರಲಿವೆ.
ಅಲ್ಲದೇ ಕ್ವಾಡ್ ಕ್ಯಾಮೆರಾ ರಚನೆ ಪಡೆದಿದ್ದು, ಲೈಕಾ 75 ಎಂಎಂ ಫ್ಲೋಟಿಂಗ್ ಟೆಲಿಫೋಟೋ ಕ್ಯಾಮೆರಾ. ಇದರೊಂದಿಗೆ ಲೈಕಾ 120 ಎಂಎಂ ಪೆರಿಸ್ಕೋಪ್ ಕ್ಯಾಮೆರಾ ಮತ್ತು ಲೈಕಾ 12 ಎಂಎಂ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಈ ಮೊಬೈಲ್ ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದಿರಲಿದೆ.


Click it and Unblock the Notifications








