Home
ಸುದ್ದಿಜಾಲ

Xiaomi: ಭಾರತದಲ್ಲಿ ಶಿಯೋಮಿ 14 ಸಿವಿ ಲಾಂಚ್ ದಿನಾಂಕ ಫಿಕ್ಸ್! ಇದು ಈ ಫೋನ್‌ನ ರೀಬ್ರಾಂಡ್ ಆಗಿರಬಹುದು?

ಭಾರತದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ (Xiaomi smartphone) ವಿಶೇಷ ಬೇಡಿಕೆ ಇದೆ. ಈ ನಡುವೆ ಭಾರತದಲ್ಲಿ ಶಿಯೋಮಿ 14 ಸಿವಿ ಸ್ಮಾರ್ಟ್‌ಫೋನ್‌ (Xiaomi 14 CIVI smartphone) ಅನ್ನು ಲಾಂಚ್‌ ಮಾಡುವ ಬಗ್ಗೆ ಮಾಹಿತಿ ನೀಡಿದೆ. ಅಲ್ಲದೆ ಈ ಫೋನ್‌ ಲಾಂಚ್‌ ದಿನಾಂಕವನ್ನೂ ಸಹ ಬಹಿರಂಗಪಡಿಸಿದೆ.

ಹೌದು, ಶಿಯೋಮಿ 14 ಸಿವಿ ಇಂಡಿಯಾ ಬಿಡುಗಡೆಯನ್ನು ಖಚಿತಪಡಿಸಲಾಗಿದೆ. ಭಾರತದಲ್ಲಿ ಬಿಡುಗಡೆಯಾದ ಮೊದಲ ಸಿವಿ ಫೋನ್ ಇದಾಗಿದ್ದು, ಇದು ಶಿಯೋಮಿ ಸಿವಿ 4 ಪ್ರೊ ಸ್ಮಾರ್ಟ್‌ಫೋನ್‌ನ (Xiaomi civi 4 Pro) ರೀಬ್ರಾಂಡ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗಿದ್ರೆ, ಈ ಫೋನ್ ಏನೆಲ್ಲಾ ಫೀಚರ್ಸ್‌ ಪಡೆದಿರಲಿದೆ?, ಬೆಲೆ ಎಷ್ಟಿರಬಹುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಭಾರತದಲ್ಲಿ ಶಿಯೋಮಿ 14 ಸಿವಿ ಲಾಂಚ್ ದಿನಾಂಕ ಫಿಕ್ಸ್!..

ಶಿಯೋಮಿ 14 ಸಿವಿ: ಶಿಯೋಮಿ 14 ಸಿವಿ ಇಂಡಿಯಾ ಬಿಡುಗಡೆ ದಿನಾಂಕವನ್ನು ಜೂನ್ 12 ರಂದು ನಿಗದಿಪಡಿಸಲಾಗಿದ್ದು, ಈ ಪ್ರಕಟಣೆಯು ಭಾರತೀಯ ಮಾರುಕಟ್ಟೆಗೆ ವಿಭಿನ್ನವಾದ ಸ್ಮಾರ್ಟ್‌ಫೋನ್‌ನ ಮಾನಿಕರ್ ಅನ್ನು ದೃಢೀಕರಿಸುತ್ತದೆ. ಹೊಸ ಹೆಸರಾದರೂ, ಶಿಯೋಮಿ 14 ಸಿವಿ ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆಯಾದ ಸಿವಿ 4 ಪ್ರೊ ನ ಮರುಬ್ರಾಂಡ್ ಆಗಿರಲಿದೆ ಎಂದು ತಿಳಿದುಬಂದಿದೆ.

ಶಿಯೋಮಿ 14 ಸಿವಿ ಪ್ರಮುಖ ಶಿಯೋಮಿ 14 ಶ್ರೇಣಿಯನ್ನು ಸೇರುತ್ತದೆ. ಆದರೆ ಇದು ಹೆಚ್ಚು ಕೈಗೆಟುಕುವ ರೂಪಾಂತರವಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದು ವಾಸ್ತವವಾಗಿ ಈ ಫೋನ್ ಒನ್‌ಪ್ಲಸ್ 12R ಮತ್ತು ಐಕ್ಯೂ 12 ನಂತಹ ಫೋನ್‌ಗಳೊಂದಿಗೆ ಸ್ಪರ್ಧಿಸುವ ನಿರೀಕ್ಷೆಯಿದೆ. ಅದಾಗ್ಯೂ ಈ ಫೋನ್‌ನ ಬಾರತೀಯ ಬೆಲೆ ಕುರಿತು ಇನ್ನೂ ಯಾವುದೇ ಮಾಹಿತಿ ಇಲ್ಲವಾದರೂ ಸಿವಿ 4 ಪ್ರೊನ 12GB RAM ಮತ್ತು 256GB ಸ್ಟೋರೇಜ್‌ ಆಯ್ಕೆಯ ಫೋನ್ CNY 2,999 (ಅಂದಾಜು 35,100 ರೂ.ಗಳು) ನಿಂದ ಪ್ರಾರಂಭವಾಗುತ್ತದೆ. ಈ ಕಾರಣಕ್ಕೆ ಭಾರತಕ್ಕೆ ಬರುತ್ತಿರುವ ಹೊಸ ಫೋನ್‌ ಸಹ ಇದೇ ಬೆಲೆಯಲ್ಲಿ ಕಾಣಿಸಿಕೊಳ್ಳಬಹುದು ಎಂದು ನಂಬಲಾಗಿದೆ.

ಶಿಯೋಮಿ 14 ಸಿವಿ ನಿರೀಕ್ಷಿತ ಫೀಚರ್ಸ್‌: ಈ ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್‌ ವಿಷಯಕ್ಕೆ ಬಂದರೆ 6.55 ಇಂಚಿನ 1.5K ಅಮೋಲೆಡ್ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್‌, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 3000 ನಿಟ್ಸ್‌ ಪೀಕ್ ಬ್ರೈಟ್‌ನೆಸ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇದರ ಜೊತೆಗೆ ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿರಬಹುದು ಎಂದು ತಿಳಿದುಬಂದಿದೆ.

ಈ ಫೋನ್ ಅಡ್ರಿನೋ 735 ಜಿಪಿಯು ಬಲದೊಂದಿಗೆ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಇದು 12GB ವರೆಗೆ LPPDDR5x RAM ಮತ್ತು 512GB UFS 4.0 ವರೆಗೆ ಪ್ರಾರಂಭಿಸಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ. ಇದರ ಜೊತೆಗೆ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, ಲೈಕಾ ಸಮ್ಮಿಲಕ್ಸ್ ಲೆನ್ಸ್, 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್‌ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಇದರ ಜೊತೆಗೆ ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಎರಡು 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾಗಳನ್ನು ಕಾಣಬಹುದಾಗಿದೆ. ಇನ್ನು ಬ್ಯಾಟರಿ ವಿಚಾರಕ್ಕೆ ಬಂದರೆ 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್ ಪಡೆದಿರಲಿದೆ ಎನ್ನಲಾಗಿದ್ದು, ಆಂಡ್ರಾಯ್ಡ್‌ 14 ನೊಂದಿಗೆ ಶಿಯೋಮಿ ಹೈಪರ್ ಓಎಸ್ ಅನ್ನು ರನ್ ಮಾಡುತ್ತದೆ ಎಂದು ತಿಳಿದುಬಂದಿದೆ.

Best Mobiles in India

English summary
Xiaomi 14 civi will join the flagship Xiaomi 14 range and the launch date of this phone has now been confirmed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+