Home
ಸುದ್ದಿಜಾಲ

ಹೊಸ ಲುಕ್‌ನೊಂದಿಗೆ ಮತ್ತೆ ಲಾಂಚ್‌ ಆಗಲಿದೆ ಶಿಯೋಮಿಯ ಈ ಜನಪ್ರಿಯ ಫೋನ್‌!

ಶಿಯೋಮಿ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಶಿಯೋಮಿ 14 ಸಿವಿ (Xiaomi 14 civi) ಸ್ಮಾರ್ಟ್‌ಫೋನ್‌ ತನ್ನ ಕ್ಯಾಮೆರಾ ಸೇರಿದಂತೆ ಇತರೆ ಕೆಲವು ಆಕರ್ಷಕ ಫೀಚರ್ಸ್‌ನಿಂದ ಭಾರೀ ಸದ್ದು ಮಾಡಿದೆ. ಇದರ ಜನಪ್ರಿಯತೆ ಬೆನ್ನಲ್ಲೇ ಸಂಸ್ಥೆಯು ಈ ಆವೃತ್ತಿಯ ಮುಂದುವರಿದ ಭಾಗವಾಗಿ ಪಾಂಡ್‌ ಡಿಸೈನ್‌ನ ಶಿಯೋಮಿ 14 ಸಿವಿ ಲಿಮಿಟೆಡ್‌ ಎಡಿಷನ್‌ (Xiaomi 14 CIVI Limited Edition with Panda Design) ಫೋನ್‌ ಅನ್ನು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಲು ಸಕಲ ತಯಾರಿ ಮಾಡಿಕೊಂಡಿದೆ.

ಹೌದು, ಶಿಯೋಮಿ ಸಂಸ್ಥೆಯು ಇದೇ ಜುಲೈ 29 ರಂದು ತನ್ನ ನೂತನ 'ಪಾಂಡ್‌ ಡಿಸೈನ್‌ನ ಶಿಯೋಮಿ 14 ಸಿವಿ ಲಿಮಿಟೆಡ್‌ ಎಡಿಷನ್‌' (Xiaomi 14 CIVI Limited Edition with Panda Design) ಫೋನ್‌ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್‌ ಮಿರರ್ ಗ್ಲಾಸ್ ಮತ್ತು ವೆಗನ್ ಲೆದರ್‌ ಆವೃತ್ತಿ, ಪಿಂಕ್, ಗ್ಲಾಮರಸ್ ಮೊನೊಕ್ರೋಮ್ ಮತ್ತು ಎಲೆಕ್ಟ್ರಿಕ್ ಬ್ಲೂ ಆವೃತ್ತಿಗಳಲ್ಲಿ ಲಗ್ಗೆ ಇಡಲಿದೆ. ಇನ್ನುಳಿದಂತೆ ಈ ಫೋನಿನ ಇತರೆ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹೊಸ ಲುಕ್‌ನೊಂದಿಗೆ ಮತ್ತೆ ಲಾಂಚ್‌ ಆಗಲಿದೆ ಶಿಯೋಮಿಯ ಈ ಜನಪ್ರಿಯ ಫೋನ್‌!

ಶಿಯೋಮಿ 14 ಸಿವಿ ಲಿಮಿಟೆಡ್‌ ಎಡಿಷನ್‌ - ನಿರೀಕ್ಷಿತ ಫೀಚರ್ಸ್‌

ಶಿಯೋಮಿ 14 ಸಿವಿ ಲಿಮಿಟೆಡ್‌ ಎಡಿಷನ್‌ ಸ್ಮಾರ್ಟ್‌ಫೋನ್‌ 6.55 ಇಂಚಿನ 1.5K ಅಮೋಲೆಡ್ ಡಿಸ್‌ಪ್ಲೇ ಪಡೆದಿರಲಿದ್ದು, ಇದರ ಜೊತೆಗೆ 120Hz ರಿಫ್ರೆಶ್ ರೇಟ್‌, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 3000 ನಿಟ್ಸ್‌ ಪೀಕ್ ಬ್ರೈಟ್‌ನೆಸ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿರಬಹುದು ಎಂದು ತಿಳಿದುಬಂದಿದೆ.

ಶಿಯೋಮಿ 14 ಸಿವಿ ಲಿಮಿಟೆಡ್‌ ಎಡಿಷನ್‌ ಫೋನ್‌ ಅಡ್ರಿನೋ 735 ಜಿಪಿಯು ಬಲದೊಂದಿಗೆ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಿಂದ ಕೆಲಸ ನಿರ್ವಹಿಸಲಿದೆ ಎನ್ನಲಾಗಿದ್ದು, ಇದು 12GB ವರೆಗೆ RAM ಮತ್ತು 512 GB UFS 4.0 ವರೆಗೆ ಪ್ರಾರಂಭಿಸಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ. ಹಾಗೆಯೇ ಇದು 50 ಮೆಗಾ ಪಿಕ್ಸೆಲ್‌ ಮುಖ್ಯ ಕ್ಯಾಮೆರಾ, ಲೈಕಾ ಸಮ್ಮಿಲಕ್ಸ್ ಲೆನ್ಸ್, 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 50 ಮೆಗಾ ಪಿಕ್ಸೆಲ್‌ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.

ಶಿಯೋಮಿ 14 ಸಿವಿ ಲಿಮಿಟೆಡ್‌ ಎಡಿಷನ್‌ ಫೋನ್ ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಡ್ಯುಯಲ್‌ 32 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾಗಳನ್ನು ಇರುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಈ ಫೋನಿನ ಬ್ಯಾಟರಿಯು 4,700 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 67W ವೇಗದ ಚಾರ್ಜಿಂಗ್ ಸಪೋರ್ಟ್‌ ಇರಲಿದೆ ಎಂದು ಹೇಳಾಗಿದೆ. ಅಲ್ಲದೇ ಆಂಡ್ರಾಯ್ಡ್‌ 14 ನೊಂದಿಗೆ ಶಿಯೋಮಿ ಹೈಪರ್ ಓಎಸ್ ಅನ್ನು ರನ್ ಮಾಡುತ್ತದೆ ಎಂದು ಲೀಕ್‌ ಮಾಹಿತಿಗಳಿಂದ ತಿಳಿದುಬಂದಿದೆಸ.

ಶಿಯೋಮಿ 14 ಸಿವಿ ಲಿಮಿಟೆಡ್‌ ಎಡಿಷನ್‌ ಫೋನ್‌ ಕ್ಯಾಮೆರಾ ವಿಭಾಗದಲ್ಲಿ 4K ಅಲ್ಟ್ರಾ HD, ಫೋಕಸ್‌ ಸ್ವಿಚಿಂಗ್‌, ಶಾರ್ಟ್‌ ವಿಡಿಯೋ, ಡ್ಯುಯಲ್‌ ವಿಡಿಯೋ ಮೋಡ್‌, ರಿಯಲ್‌ ಟೈಮ್‌ ಸಬ್‌ ಟೈಟಲ್‌, ಪೊಕೆಟ್‌ ಮೀರರ್, ಜೂಮ್‌ ಸ್ಮೂತ್ ರೆಕಾರ್ಡಿಂಗ್‌ ನಂತಹ ಆಯ್ಕೆಗಳನ್ನು ಪಡೆದಿರುವ ಸಾಧ್ಯತೆಗಳು ಹೆಚ್ಚಿವೆ.

Best Mobiles in India

English summary
Xiaomi 14 CIVI Limited Edition with Panda Design will launch on July 29 in India. check specifications, price, offer and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+