Home
ಸುದ್ದಿಜಾಲ

ಶಿಯೋಮಿಯಿಂದ ಮತ್ತೊಂದು ಹೊಸ ಫೋನ್‌ ಲಾಂಚ್‌; ಇದರ ಡಿಸೈನ್‌ಗೆ ನೀವು ಫಿದಾ ಆಗ್ತೀರಾ!

ಶಿಯೋಮಿ ಕಂಪನಿಯ ಬಹುನಿರೀಕ್ಷಿತ ಶಿಯೋಮಿ 14 ಸಿವಿ ಪಾಂಡಾ ಲಿಮಿಟೆಡ್‌ ಎಡಿಷನ್‌ (Xiaomi 14 CIVI Panda Limited Edition) ಸ್ಮಾರ್ಟ್‌ಫೋನ್‌ ದೇಶಿಯ ಮಾರುಕಟ್ಟೆಗೆ ಅದಿಕೃತವಾಗಿ ಲಾಂಚ್ ಆಗಿದೆ. ಈ ಫೋನ್‌ ಪಾಂಡಾ ವೈಟ್ ಮತ್ತು ಆಕ್ವಾ ಬ್ಲೂ ಹಾಗೂ ಹಾಟ್ ಪಿಂಕ್ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದ್ದು, ಮೊಬೈಲ್‌ ಪ್ರಿಯರ ಚಿತ್ತ ಸೆಳೆಯುವ ಲುಕ್‌ನಲ್ಲಿ ಎಂಟ್ರಿ ನೀಡಿದೆ.

ಹೌದು, ಶಿಯೋಮಿ ಸಂಸ್ಥೆಯ ಶಿಯೋಮಿ 14 ಸಿವಿ ಪಾಂಡಾ ಲಿಮಿಟೆಡ್‌ ಎಡಿಷನ್‌ (Xiaomi 14 CIVI Panda Limited Edition) ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಈ ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ಫೋನಿನ ಮೊದಲ ಕ್ಯಾಮೆರಾವು 50 ಮೆಗಾಪಿಕ್ಸಲ್‌ ಸೆನ್ಸಾರ್‌ ಸೌಲಭ್ಯವನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಫೋನಿನ ಇತರೆ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಶಿಯೋಮಿಯಿಂದ ಮತ್ತೊಂದು ಹೊಸ ಫೋನ್‌ ಲಾಂಚ್‌; ಇದರ ಡಿಸೈನ್‌ಗೆ ನೀವು ಫಿದಾ ಆಗ್ತೀರಾ!

ಶಿಯೋಮಿ 14 ಸಿವಿ ಪಾಂಡಾ ಲಿಮಿಟೆಡ್‌ ಎಡಿಷನ್‌ - ಫೀಚರ್ಸ್‌

ಶಿಯೋಮಿ 14 ಸಿವಿ ಪಾಂಡಾ ಲಿಮಿಟೆಡ್‌ ಎಡಿಷನ್‌ ಸ್ಮಾರ್ಟ್‌ಫೋನ್‌ 6.55 ಇಂಚಿನ 1.5K ಅಮೋಲೆಡ್ ಡಿಸ್‌ಪ್ಲೇ ಪಡೆದಿದ್ದು, ಇದರ ಜೊತೆಗೆ 120Hz ರಿಫ್ರೆಶ್ ರೇಟ್‌, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಮತ್ತು 3000 ನಿಟ್ಸ್‌ ಪೀಕ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದರ ಜೊತೆಗೆ ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿದೆ.

ಶಿಯೋಮಿ 14 ಸಿವಿ ಪಾಂಡಾ ಲಿಮಿಟೆಡ್‌ ಎಡಿಷನ್‌ ಫೋನ್‌ ಅಡ್ರಿನೋ 735 ಜಿಪಿಯು ಬಲದೊಂದಿಗೆ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಿಂದ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಇದು 12GB ವರೆಗೆ RAM ಮತ್ತು 512 GB ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಇದು 50 ಮೆಗಾ ಪಿಕ್ಸೆಲ್‌ ಮುಖ್ಯ ಕ್ಯಾಮೆರಾ, ಲೈಕಾ ಸಮ್ಮಿಲಕ್ಸ್ ಲೆನ್ಸ್, 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 50 ಮೆಗಾ ಪಿಕ್ಸೆಲ್‌ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ.

ಶಿಯೋಮಿ 14 ಸಿವಿ ಪಾಂಡಾ ಲಿಮಿಟೆಡ್‌ ಎಡಿಷನ್‌ ಫೋನ್ ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಡ್ಯುಯಲ್‌ 32 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಪಡೆದಿದೆ. ಇನ್ನು ಈ ಫೋನ್ ಬ್ಯಾಟರಿಯು 4,700 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 67W ವೇಗದ ಚಾರ್ಜಿಂಗ್ ಸಪೋರ್ಟ್‌ ಒಳಗೊಂಡಿದೆ. ಅಲ್ಲದೇ ಆಂಡ್ರಾಯ್ಡ್‌ 14 ನೊಂದಿಗೆ ಶಿಯೋಮಿ ಹೈಪರ್ ಓಎಸ್ ಅನ್ನು ರನ್ ಮಾಡುತ್ತದೆ.

ಬೆಲೆ ಮತ್ತು ಲಭ್ಯತೆ

ಶಿಯೋಮಿ 14 ಸಿವಿ ಪಾಂಡಾ ಲಿಮಿಟೆಡ್‌ ಎಡಿಷನ್‌ ಫೋನ್‌ 12GB + 512 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ. ಇದರ ಬೆಲೆಯು 48,999ರೂ. ಗಳು ಆಗಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಕೆ ಮಾಡಿ ಖರೀದಿಸಿದರೆ 3,000ರೂ. ಗಳ ರಿಯಾಯಿತಿ ಸಿಗಲಿದ್ದು, ಹೀಗಾಗಿ 45,999ರೂ. ಗಳಿಗೆ ಫೋನ್‌ ಖರೀದಿಸಲು ಅವಕಾಶ ಇದೆ. ಇನ್ನು ಈ ಫೋನ್‌ ಪಾಂಡಾ ವೈಟ್ ಮತ್ತು ಆಕ್ವಾ ಬ್ಲೂ ಹಾಗೂ ಹಾಟ್ ಪಿಂಕ್ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಈ ಫೋನಿನ ಪಾಂಡಾ ವೈಟ್ ಮತ್ತು ಆಕ್ವಾ ಬ್ಲೂ ಬಣ್ಣಗಳು Mi.com, Xiaomi ರಿಟೇಲ್ ಮತ್ತು Flipkart ಮೂಲಕ ಲಭ್ಯ ಇರುತ್ತವೆ. ಇನ್ನು ಹಾಟ್ ಪಿಂಕ್ ಕಲರ್‌ ಫೋನ್‌ ಅನ್ನು Flipkart ಮತ್ತು Mi.com ಮೂಲಕ ಮಾರಾಟ ಮಾಡಲಾಗುತ್ತದೆ.

Best Mobiles in India

English summary
Xiaomi 14 Civi Panda limited edition model launched in India. price, specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+