Home
ಸುದ್ದಿಜಾಲ

ಇಂದು ಶಿಯೋಮಿ 14 ಫೋನಿನ ಫಸ್ಟ್‌ ಸೇಲ್‌!..ಬೆಲೆ ಎಷ್ಟು?..ಆಫರ್‌ ಏನು?

ಶಿಯೋಮಿ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಶಿಯೋಮಿ 14 ಸ್ಮಾರ್ಟ್‌ಫೋನ್‌ ಫಸ್ಟ್‌ ಸೇಲ್‌ ಇಂದು (ಮಾರ್ಚ್‌ 10 ರಂದು) ಫ್ಲಿಪ್‌ಕಾರ್ಟ್‌ ತಾಣ ಹಾಗೂ ಮಿ ವೆಬ್‌ಸೈಟ್‌ ಮೂಲಕ ಮಧ್ಯಾಹ್ನ 12 ರಿಂದ ಶುರು ಆಗಲಿದೆ. ಈ ಸ್ಮಾರ್ಟ್‌ಫೋನ್‌ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಆಗಿದೆ.

ಹೌದು, ಶಿಯೋಮಿ 14 ಮೊಬೈಲ್‌ ಇ ಕಾಮರ್ಸ್‌ (ಫ್ಲಿಪ್‌ಕಾರ್ಟ್‌, ಅಮೆಜಾನ್) ತಾಣದ ಮೂಲಕ ಇಂದು ಫಸ್ಟ್‌ ಸೇಲ್‌ ಪ್ರಾರಂಭ ಆಗಲಿದೆ. ಈ ಫೋನ್‌ ದೈತ್ಯ ಫೀಚರ್ಸ್‌ ಆಯ್ಕೆಗಳನ್ನು ಪಡೆದಿದ್ದು, ಗ್ರಾಹಕರ ಗಮನ ಸೆಳೇದಿದೆ. ಈ ಫೋನ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 3 SoC ಪ್ರೊಸೆಸರ್‌ ಪಡೆದಿದ್ದು, ಇದರೊಂದಿಗೆ 4,610mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿದೆ.

ಇಂದು ಶಿಯೋಮಿ 14 ಫೋನಿನ ಫಸ್ಟ್‌ ಸೇಲ್‌!..ಬೆಲೆ ಎಷ್ಟು?..ಆಫರ್‌ ಏನು?

ಶಿಯೋಮಿ 14 ಮೊಬೈಲ್‌ನ ಆರಂಭಿಕ ವೇರಿಯಂಟ್‌ ಬೆಲೆಯು 69,999ರೂ. ಆಗಿದ್ದು, ಖರೀದಿದಾರರು ಈ ಮೊಬೈಲ್‌ ಅನ್ನು ಬ್ಲ್ಯಾಕ್‌, ವೈಟ್‌ ಅಥವಾ ಜೇಡ್ ಗ್ರೀನ್ ಕಲರ್‌ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ. ಹಾಗಾದರೇ ಶಿಯೋಮಿ 14 ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಇಂದು ಶಿಯೋಮಿ 14 ಫೋನಿನ ಫಸ್ಟ್‌ ಸೇಲ್‌!..ಬೆಲೆ ಎಷ್ಟು?..ಆಫರ್‌ ಏನು?

ಶಿಯೋಮಿ 14 ಮೊಬೈಲ್‌ - ಫೀಚರ್ಸ್‌

ಶಿಯೋಮಿ 14 ಮೊಬೈಲ್‌ 6.3 ಇಂಚಿನ ಕೇಂದ್ರಿತ ಪಂಚ್-ಹೋಲ್ ಫ್ಲಾಟ್ OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 2670 x 1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಜೊತೆಗೆ ಡಿಸ್‌ಪ್ಲೇಯು 460 PPI ಮತ್ತು 1-120Hz ರಿಫ್ರೆಶ್ ರೇಟ್ (LTPO) ರೆಸಲ್ಯೂಶನ್ ಹೊಂದಿದೆ. ಇದು ಡಾಲ್ಬಿ ವಿಷನ್, ಡಿಸಿ ಡಿಮ್ಮಿಂಗ್, ಮತ್ತು 3000 ನಿಟ್ಸ್ ಲೋಕಲ್‌ ಪೀಕ್ ಬ್ರೈಟ್‌ನೆಸ್ ಲೆವೆಲ್‌ ಅನ್ನು ಸಪೋರ್ಟ್‌ ಪಡೆದಿದೆ.

ಶಿಯೋಮಿ 14 ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 ಜೆನ್‌ 3 SoC ಪ್ರೊಸೆಸರ್‌ ಪವರ್‌ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್‌ 14 ಸಪೋರ್ಟ್‌ ಜೊತೆಗೆ ಕೆಲಸ ನಿರ್ವಹಿಸಲಿದೆ. ಇದನ್ನು ಲಿಕ್ವಿಡ್ ಕೂಲಿಂಗ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ. ಹಾಗೆಯೇ 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಲಭ್ಯ.

ಶಿಯೋಮಿ 14 ಮೊಬೈಲ್‌ ಲೈಕಾ-ಟ್ಯೂನ್ಡ್ ಕ್ಯಾಮೆರಾಗಳನ್ನು ಪಡೆದಿದ್ದು, ಇದು ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ದ್ವಿತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಲೆನ್ಸ್‌ ಮತ್ತು ತೃತೀಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ 3.2x ಫ್ಲೋಟಿಂಗ್ ಟೆಲಿಫೋಟೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ.

ಶಿಯೋಮಿ 14 ಸ್ಮಾರ್ಟ್‌ಫೋನ್‌ 4,610mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದು 90W ವೈರ್ಡ್, 50W ವಾಯರ್‌ಲೆಸ್ ಮತ್ತು 10W ರಿವರ್ಸ್ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ. ಹಾಗೆಯೇ ಇದು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ವೈಫೈ 7, ಬ್ಲೂಟೂತ್ 5.4, GNSS, NFC, ಮತ್ತು USB 3.2 ಅನ್ನು ಸಪೋರ್ಟ್ ಮಾಡುತ್ತದೆ.

ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ 12GB + 512GB ವೇರಿಯಂಟ್‌ ಆಯ್ಕೆಗೆ 69,999ರೂ ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಗ್ರಾಹಕರು ಇದನ್ನು ಬ್ಲ್ಯಾಕ್‌, ವೈಟ್‌ ಅಥವಾ ಜೇಡ್ ಗ್ರೀನ್ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಇಂದು ಮಾರ್ಚ್ 11 ರಂದು ಮಧ್ಯಾಹ್ನ 12 ಗಂಟೆಗೆ ಸೇಲ್ ಪ್ರಾರಂಭಿಸಲಿದ್ದು, ಅಮೆಜಾನ್‌, ಮಿ.ಕಾಮ್‌, ಫ್ಲಿಪ್‌ಕಾರ್ಟ್‌, ಶಿಯೋಮಿಯ ಹೋಮ್‌ಸ್ಟೋರ್‌ಗಳ ಮೂಲಕ ಖರೀದಿಸಬಹುದು.

Best Mobiles in India

English summary
Xiaomi 14 first sale in India today. Price, offers and more check out here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+