Home
ಸುದ್ದಿಜಾಲ

ಇಂದು ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್‌ ಲಾಂಚ್‌; ಖರೀದಿಗೆ ಕ್ಯೂ ಖಚಿತ!

ಶಿಯೋಮಿ ಮೊಬೈಲ್‌ ಸಂಸ್ಥೆಯ ಬಹುನಿರೀಕ್ಷಿತ ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ಇಂದು (ಮಾರ್ಚ್ 7 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಆಗಲಿವೆ. ಇನ್ನು ಈ ಫೋನಿನ ಲೀಕ್‌ ಫೀಚರ್ಸ್‌ ಗ್ರಾಹಕರ ನಿರೀಕ್ಷೆ ಅಧಿಕ ಮಾಡಿವೆ.

ಹೌದು, ಶಿಯೋಮಿ 14 ಫೋನ್‌ ಸರಣಿ ಇಂದು ಸಂಜೆ 6 ಗಂಟೆಗೆ ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಅಂದಹಾಗೆ ಈ ಸರಣಿಯು ಇತ್ತೀಚಿನ MWC 2024 ಕಾರ್ಯಕ್ರಮದ ಮೂಲಕ ಗ್ಲೋಬಲ್ ಮಾರುಕಟ್ಟೆಗೆ ಅನಾವರಣ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳ ದೈತ್ಯ ಫೀಚರ್ಸ್‌ಗಳು ಗ್ರಾಹಕರ ಕುತೂಹಲ ಹೆಚ್ಚಿಸಿವೆ.

ಇಂದು ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್‌ ಲಾಂಚ್‌; ಖರೀದಿಗೆ ಕ್ಯೂ ಖಚಿತ!

ಇನ್ನು ಈ ಮೊಬೈಲ್‌ಗಳು ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ ಪವರ್‌ ಪಡೆದಿರಲಿದ್ದು, ಇದರ ಜೊತೆಗೆ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆನ್ಸಾರ್‌ ಒಳಗೊಂಡಿರಲಿದೆ. ಅಲ್ಲದೇ 4610mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಕೂಡಾ ಪಡೆದಿರುವ ಸಾಧ್ಯತೆ ಇದೆ. ಹಾಗಾದರೇ ಶಿಯೋಮಿ 14 ಮತ್ತು ಶಿಯೋಮಿ 14 ಅಲ್ಟ್ರಾ ಫೋನಿನ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಇಂದು ಶಿಯೋಮಿ 14 ಅಲ್ಟ್ರಾ ಸ್ಮಾರ್ಟ್‌ಫೋನ್‌ ಲಾಂಚ್‌; ಖರೀದಿಗೆ ಕ್ಯೂ ಖಚಿತ!

ಶಿಯೋಮಿ 14 ಫೋನ್‌ - ನಿರೀಕ್ಷಿತ ಫೀಚರ್ಸ್‌

ಶಿಯೋಮಿ 14 ಈ ಫೋನ್ ಫೋನ್ 6.36 ಇಂಚಿನ ಕ್ರಿಸ್ಟಲ್ ರೆಸ್ ಅಮೋಲೆಡ್‌ ಡಿಸ್‌ಪ್ಲೇ ಮತ್ತು ತುಂಬಾ ಹಗುರವಾದ ಬೆಜೆಲ್‌ಗಳೊಂದಿಗೆ ಲಗ್ಗೆ ಇಡಲಿದೆ. ಈ ಮೊಬೈಲ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಉತ್ತಮ ಫೋಟೋಗ್ರಫಿಗಾಗಿ ಮುಖ್ಯ ಕ್ಯಾಮೆರಾ ಲೈಕಾ ಸಮ್ಮಿಲಕ್ಸ್ ಆಪ್ಟಿಕ್ಸ್, ಅಪ್‌ಗ್ರೇಡ್ ಮಾಡಿದೆ. ಇದು 13.5 EV ಡೈನಾಮಿಕ್ ರೇಂಜ್‌ನೊಂದಿಗೆ ಲೈಟ್ ಫ್ಯೂಷನ್ 900 ಇಮೇಜ್ ಸೆನ್ಸಾರ್ ಆಯ್ಕೆ ಒಳಗೊಂಡಿದೆ.

ಇದರೊಂದಿಗೆ ಲೈಕಾ 14 ಎಂಎಂ ಅಲ್ಟ್ರಾ ವೈಡ್ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ರೆಸಲ್ಯೂಶನ್ ಅನ್ನು ಪಡೆದಿದ್ದು, ಲೈಕಾ 75 ಎಂಎಂ ಟೆಲಿಫೋಟೋ ಲೆನ್ಸ್ ಕನಿಷ್ಠ 10 ಸೆಂಟಿ ಮೀಟರ್ ಫೋಕಸ್ ಸೌಲಭ್ಯ ಇರಲಿದೆ. ಹಾಗೆಯೇ ಈ ನೂತನ ಮೊಬೈಲ್‌ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಿಂದ ಕೆಲಸ ನಿರ್ವಹಿಸಲಿದ್ದು, ಶಿಯೋಮಿ ಹೈಪರ್‌ ಓಎಸ್‌ ನಲ್ಲಿ ಕೆಲಸ ಮಾಡಲಿದೆ. ಇದರ ಜೊತೆಗೆ ಈ ಮೊಬೈಲ್‌ 90W ಹೈಪರ್‌ಚಾರ್ಜ್ ಮತ್ತು 50W ವೈರ್‌ಲೆಸ್ ಹೈಪರ್‌ಚಾರ್ಜ್‌ ಸಪೋರ್ಟ್‌ ಪಡೆದಿದ್ದು, ಹಾಗೆಯೇ 4610 mAh ಸಾಮರ್ಥ್ಯದ ಬ್ಯಾಟರಿ ಅನ್ನು ಪಡೆದಿರಲಿದೆ.

ಶಿಯೋಮಿ 14 ಅಲ್ಟ್ರಾ ಫೋನ್‌ - ನಿರೀಕ್ಷಿತ ಫೀಚರ್ಸ್‌

ಶಿಯೋಮಿ 14 ಅಲ್ಟ್ರಾ ಮೊಬೈಲ್‌ ಗಟ್ಟಿಮುಟ್ಟಾದ ಗಾರ್ಡಿಯನ್ ರಚನೆಯನ್ನು ಹೊಂದಿದೆ. ಇದರಲ್ಲಿನ ಅಲ್ಯೂಮಿನಿಯಂ ಫ್ರೇಮ್ ಈ ಫೋನ್‌ಗೆ ಹೆಚ್ಚಿನ ಲುಕ್‌ ನೀಡಿದೆ. ಅಲ್ಲದೇ ಇದು 6.73 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಪಡೆದಿದ್ದು, ಇದು 3200 x 1440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಹಾಗೆಯೇ 522 ppi ಪಿಕ್ಸೆಲ್ ಸಾಂದ್ರತೆ, 120Hz ರಿಫ್ರೆಶ್ ರೇಟ್‌ ಮತ್ತು 3000 ನಿಟ್ಸ್‌ ಸಾಧ್ಯತೆ.

ಅಲ್ಲದೇ ಶಿಯೋಮಿ 14 ಅಲ್ಟ್ರಾ ಫೋನ್‌ ಕ್ವಾಡ್ ಕ್ಯಾಮೆರಾ ರಚನೆ ಪಡೆದಿದ್ದು, ಲೈಕಾ 75 ಎಂಎಂ ಫ್ಲೋಟಿಂಗ್ ಟೆಲಿಫೋಟೋ ಕ್ಯಾಮೆರಾ. ಇದರೊಂದಿಗೆ ಲೈಕಾ 120 ಎಂಎಂ ಪೆರಿಸ್ಕೋಪ್ ಕ್ಯಾಮೆರಾ ಮತ್ತು ಲೈಕಾ 12 ಎಂಎಂ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಈ ಮೊಬೈಲ್‌ ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದಿರಲಿದೆ.

Best Mobiles in India

English summary
Xiaomi 14 India Launch Today. Expected Specifications, price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+