Home
ಸುದ್ದಿಜಾಲ

Xiaomi: ಭಾರತದಲ್ಲಿ ಶಿಯೋಮಿ 14 ಸರಣಿ ಲಾಂಚ್‌ಗೆ ದಿನಾಂಕ ನಿಗದಿ: ಫೀಚರ್ಸ್‌ ಏನಿವೆ? ಬೆಲೆ ಎಷ್ಟು?

ಶಿಯೋಮಿ 14 ಸರಣಿ (Xiaomi 14 series) ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳು ಬಹಳ ಸದ್ದು ಮಾಡುತ್ತಿವೆ. ಅದರಲ್ಲೂ ಈ ಫೋನ್‌ ಜಾಗತಿಕವಾಗಿ ದೊಡ್ಡ ಅಲೆಯನ್ನೇ ಸೃಷ್ಟಿ ಮಾಡಿದ್ದು, ಈ ಫೋನ್‌ ಖರೀದಿ ಮಾಡಲೇಬೇಕು ಅನ್ನೋವಷ್ಟು ಕ್ರೇಜ್‌ ಸಾಕಷ್ಟು ಜನರಲ್ಲಿ ಉಂಟಾಗಿದೆ. ಅದರಂತೆ ಈಗ ಭಾರತದಲ್ಲಿ ಈಗ ಫೋನ್‌ ಲಾಂಚ್‌ ದಿನಾಂಕ ನಿಗದಿಯಾಗಿದೆ.

ಹೌದು, ಶಿಯೋಮಿ ಈಗಾಗಲೇ ಭಿನ್ನ ಫೀಚರ್ಸ್‌ ಆಯ್ಕೆಯ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡುವ ಮೂಲಕ ಸಾಕಷ್ಟು ಗ್ರಾಹಕರನ್ನು ಪಡೆದುಕೊಂಡಿದೆ. ಈ ಬೆಳವಣಿಗೆ ನಡುವೆ ಕೆಲವೇ ವಾರಗಳಲ್ಲಿ ಬಹುನಿರೀಕ್ಷಿತ ಶಿಯೋಮಿ 14 ಸರಣಿ ಲಾಂಚ್‌ ಆಗಲಿದ್ದು, ಈ ಫೋನ್‌ನ ಕೆಲವು ಲೀಕ್‌ ಫೀಚರ್ಸ್‌ ಈಗಾಗಲೇ ಸಖತ್‌ ಸೌಂಡ್‌ ಮಾಡಿದೆ. ಈ ಮೂಲಕ ದೊಡ್ಡ ನಿರೀಕ್ಷೆ ಹುಟ್ಟುಹಾಕಲಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವಾಗ ಲಾಂಚ್‌ ಆಗಲಿದೆ?, ಇದರ ನಿರೀಕ್ಷಿತ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಶಿಯೋಮಿ 14 ಸರಣಿ ಲಾಂಚ್‌ಗೆ ದಿನಾಂಕ ನಿಗದಿ: ಫೀಚರ್ಸ್‌ ಏನಿವೆ?

ಶಿಯೋಮಿ 14 ಸರಣಿ: ಶಿಯೋಮಿ 14 ಸರಣಿಯನ್ನು ಭಾರತದಲ್ಲಿ ಲಾಂಚ್‌ ಮಾಡುವ ದಿನಾಂಕವನ್ನು ಅಧಿಕೃವಾಗಿ ತಿಳಿಸಲಾಗಿದೆ. ಅದರಂತೆ ಭಾರತದಲ್ಲಿ ಈ ಫೋನ್‌ ಅನ್ನು ಮಾರ್ಚ್ 7 ರಂದು ಲಾಂಚ್‌ ಮಾಡಲಾಗುತ್ತದೆ. ಈ ಸ್ಮಾರ್ಟ್‌ಫೋನ್ 50,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರಲಿದೆ ಎಂದು ನಿರೀಕ್ಷೆಯಿದ್ದು, ಶಿಯೋಮಿ 14 ಪ್ರೊ (Xiaomi 14 Pro) ಫೋನ್ 80,000ರೂ.ಗಳ ಬೆಲೆಯಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ.

ಇನ್ನು ಚೀನಾದಲ್ಲಿ ಲಭ್ಯವಿರುವ ಈ ಫೋನ್‌ ಎಲ್ಲಾ ಮೂರು ವೇರಿಯಂಟ್‌ ಅನ್ನು ಭಾರತಕ್ಕೆ ತರುತ್ತದೆಯೇ ಎಂಬುದನ್ನು ಬ್ರ್ಯಾಂಡ್ ಇನ್ನೂ ಸಹ ಬಹಿರಂಗಪಡಿಸಿಲ್ಲ. ಸ್ಟಾಂಡರ್ಡ್ ಮತ್ತು ಅಲ್ಟ್ರಾ ಮಾದರಿಗಳು ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಬರಬಹುದು ಎಂದು ಲೀಕ್‌ ಮಾಹಿತಿಯಿಂದ ತಿಳಿದುಬಂದಿದೆ. ಅಲ್ಲದೆ ಈ ಫೋನ್‌ಗಳು ಫೆಬ್ರವರಿ 25 ರಂದು ಜಾಗತಿಕವಾಗಿ ಎಂಟ್ರಿ ನೀಡಲಿವೆ.

ಭಾರತದಲ್ಲಿ ಶಿಯೋಮಿ 14 ಸರಣಿ ಲಾಂಚ್‌ಗೆ ದಿನಾಂಕ ನಿಗದಿ: ಫೀಚರ್ಸ್‌ ಏನಿವೆ?

ಶಿಯೋಮಿ 14, ಪ್ರೊ, ಅಲ್ಟ್ರಾದ ನಿರೀಕ್ಷಿತ ಫೀಚರ್ಸ್‌: ಶಿಯೋಮಿ 14 ಸ್ಮಾರ್ಟ್‌ಫೋನ್ 6.36 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, ಶಿಯೋಮಿ 14 ಪ್ರೊ ಸ್ವಲ್ಪ ದೊಡ್ಡದಾದ ಅಂದರೆ 6.73 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ. ಈ ಎರಡೂ ವೇರಿಯಂಟ್‌ 120Hz ರಿಫ್ರೆಶ್‌ ರೇಟ್‌ನೊಂದಿಗೆ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದಿರಲಿವೆ ಎನ್ನಲಾಗಿದ್ದು, 3000ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆಯನ್ನು ಈ ಫೋನ್‌ಗಳು ಹೊಂದಿರಬಹುದು ಎಂದು ತೋರುತ್ತದೆ.

ಶಿಯೋಮಿ 14 ಸರಣಿಯು ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ ಎನ್ನಲಾಗಿದ್ದು, ಈ ಡಿವೈಸ್‌ಗಳು UFS 4.0 ಸ್ಟೋರೇಜ್‌ ಮತ್ತು 16GB RAM ವರೆಗೆ ಬೆಂಬಲ ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್‌ಗಳು IP68 ರೇಟಿಂಗ್‌ ಹೊಂದಿರಲಿದ್ದು, ನೀರು ಮತ್ತು ಧೂಳಿನ ನಿರೋಧಕವಾಗಿವೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಫೋನ್‌ ಆಂಡ್ರಾಯ್ಡ್‌ 14 ಓಎಸ್‌ ಅನ್ನು ರನ್‌ ಮಾಡಲಿವೆ.

ಭಾರತದಲ್ಲಿ ಶಿಯೋಮಿ 14 ಸರಣಿ ಲಾಂಚ್‌ಗೆ ದಿನಾಂಕ ನಿಗದಿ: ಫೀಚರ್ಸ್‌ ಏನಿವೆ?

ಈ ಫೋನ್‌ಗಳು ಕ್ಯಾಮೆರಾ ವಿಚಾರದಲ್ಲಿ ಪ್ರೀಮಿಯಂ ಫೀಚರ್ಸ್‌ ಆಯ್ಕೆ ಪಡೆದಿರಲಿವೆ ಎನ್ನಲಾಗಿದೆ. ಅಂದರೆ ಕಸ್ಟಮೈಸ್ ಮಾಡಿದ ಲೈಕಾ ಸಮ್ಮಿಲಕ್ಸ್ ಲೆನ್ಸ್‌ನೊಂದಿಗೆ ಲೈಟ್ ಹಂಟರ್ 900 ಸೆನ್ಸರ್‌ ಅನ್ನು ಹೊಂದಿರುವ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಆಯ್ಕೆ ಇದರಲ್ಲಿ ಇರಲಿದ್ದು, ಎರಡೂ ಫೋನ್‌ಗಳು ಹಿಂದಿನ ಮಾದರಿಗಳಂತೆ ಉತ್ತಮ ಫೋಟೋಗ್ರಫಿ ಅನುಭವವನ್ನು ನೀಡುವ ನಿರೀಕ್ಷೆಯಿದೆ.

ಆದರೂ ಸಹ ಶಿಯೋಮಿ 14 ಪಿಕ್ಸೆಲ್‌ ಅಪಾರ್ಚರ್‌ ಆಯ್ಕೆ ಪಡೆದಿರಲಿದ್ದು, ಪ್ರೊ ಆವೃತ್ತಿಯು ವೇರಿಯಬಲ್ ಅಪರ್ಚರ್ ಆಯ್ಕೆ ಪಡೆಯಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಬಳಕೆದಾರರು 50 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್‌ ಆಯ್ಕೆ ಪಡೆಯಲಿದ್ದು, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್‌ನಲ್ಲಿ ಎದುರು ನೋಡಬಹುದಾಗಿದೆ.

ಇನ್ನು ವೆನಿಲ್ಲಾ ಶಿಯೋಮಿ 14 ಸ್ಮಾರ್ಟ್‌ಫೋನ್ 90W ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 4,610mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಜೊತೆಗೆ ಪ್ರೊ ಮಾದರಿಯು 120W ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ 4,880mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರಬಹುದು ಎಂದು ಲೀಕ್‌ ಮಾಹಿತಿಯಿಂದ ತಿಳಿದುಬಂದಿದೆ. ಇದರ ಜೊತೆಗೆ ಎರಡೂ ಮಾದರಿಗಳು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಜೊತೆಗೆ 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತವೆ ಎಂದು ತಿಳಿದುಬಂದಿದೆ.

Best Mobiles in India

English summary
Xiaomi 14 series launch will be launched in India on March 7, and some of the leaked features of this phone have already sounded solid.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+