Home
ಸುದ್ದಿಜಾಲ

Xiaomi: ಶಿಯೋಮಿ 15 ಪ್ರೊ ಸರಣಿಯಲ್ಲಿ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ರೀಡರ್?

ಶಿಯೋಮಿ ಸ್ಮಾರ್ಟ್‌ಫೋನ್‌ಗಳು (Xiaomi Smartphones)ಭಿನ್ನ ಫೀಚರ್ಸ್‌ ಆಯ್ಕೆ ಪಡೆಯುವ ಮೂಲಕ ಹೆಚ್ಚು ಸೇಲ್‌ ಆಗುತ್ತಿರುವ ಫೋನ್‌ಗಳಾಗಿ ಗುರುತಿಸಿಕೊಂಡಿವೆ. ಈ ಬೆಳವಣಿಗೆ ನಡುವೆ ಇನ್ನೇನು ಕೆಲವೇ ದಿನಗಳಲ್ಲಿ ಅನಾವರಣ ಆಗುವ ಶಿಯೋಮಿ 15 ಪ್ರೊ ಸರಣಿ ಫೋನ್‌ಗಳು ವಿಶೇಷ ಫೀಚರ್ಸ್‌ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ.

ಹೌದು, ಶಿಯೋಮಿ 15 ಪ್ರೊ ಮತ್ತು ಶಿಯೋಮಿ 15 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು (Xiaomi 15 Pro and Xiaomi 15 Ultra smartphones) ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ (Ultrasonic fingerprint scanner) ಅನ್ನು ಹೊಂದಿರಬಹುದು ಎಂದು ತಿಳಿದುಬಂದಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲು ತಯಾರಿ ಮಾಡಿಕೊಂಡಂತೆ ಕಾಣುತ್ತಿದೆ. ಹಾಗಿದ್ರೆ ಈ ಫೋನ್‌ನಲ್ಲಿ ಇರುತ್ತದೆ ಎನ್ನಲಾದ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ರೀಡರ್ ಎಂದರೆ ಏನು?, ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಶಿಯೋಮಿ 15 ಪ್ರೊ ಸರಣಿಯಲ್ಲಿ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ರೀಡರ್?

ಶಿಯೋಮಿ 15 ಪ್ರೊ ಸರಣಿಯಲ್ಲಿ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ರೀಡರ್: ಮೊದಲೇ ತಿಳಿಸಿದಂತೆ ಶಿಯೋಮಿ 15 ಪ್ರೊ ಮತ್ತು ಶಿಯೋಮಿ 15 ಅಲ್ಟ್ರಾ ಫೋನ್‌ಗಳು ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಹೊಂದಿರಲಿವೆ ಎಂದು ತಿಳಿದುಬಂದಿದ್ದು, ಈ ಮೂಲಕ ಬಳಕೆದಾರರಿಗೆ ಭಿನ್ನ ಅನುಭವ ನೀಡಲಿವೆ ಎನ್ನಲಾಗಿದೆ. ಈ ಫೀಚರ್ಸ್‌ ಅನ್ನು ಈಗಾಗಲೇ ಸ್ಯಾಮ್‌ಸಂಗ್‌ನ ಕೆಲವು ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ನೀಡಲಾಗಿದೆ.

ಅದರಲ್ಲೂ ಇತ್ತೀಚೆಗಷ್ಟೇ ಅನಾವರಣ ಆಗಿರುವ ಒಪ್ಪೋ ಫೈಂಡ್ X7 ಅಲ್ಟ್ರಾ ಮತ್ತು ಐಕ್ಯೂ 12 ಪ್ರೋ ನಲ್ಲಿ ಈ ಫೀಚರ್ಸ್‌ ಆಯ್ಕೆ ನೀಡಲಾಗಿದೆ. ಇನ್ನು ಸಾಂಪ್ರದಾಯಿಕ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳಿಗೆ ಹೋಲಿಸಿದರೆ, ಅಲ್ಟ್ರಾಸಾನಿಕ್ ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚಿನ ಭದ್ರತೆಯನ್ನು ನಿರೀಕ್ಷೆ ಮಾಡಬಹುದಾಗಿದೆ.

ಶಿಯೋಮಿ 15 ಪ್ರೊ ಸರಣಿಯಲ್ಲಿ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ರೀಡರ್?

ಟಿಪ್‌ಸ್ಟರ್ ಸ್ಮಾರ್ಟ್ ಪಿಕಾಚು ಅವರು ಶಿಯೋಮಿ 15 ಪ್ರೊ ಮತ್ತು ಶಿಯೋಮಿ 15 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆಯಲಿವೆ ಎಂದು ಉಲ್ಲೇಖ ಮಾಡಲಾಗಿದ್ದು, ಸಾಮಾನ್ಯ ಶಿಯೋಮಿ 15 ವೇರಿಯಂಟ್‌ ಇನ್ನೂ ಪರಿಗಣನೆಯಲ್ಲಿದೆ. ಬಹುಶಃ ಅದು ವೆನಿಲ್ಲಾ ಮತ್ತು ಪ್ರೀಮಿಯಂ ಶಿಯೋಮಿ 15 ಮಾದರಿಗಳ ನಡುವಿನ ವ್ಯತ್ಯಾಸದ ಒಂದು ಅಂಶವಾಗಿರಬಹುದು ಎಂದಿದ್ದಾರೆ.

ಇನ್ನು ಈ ಅಲ್ಟ್ರಾಸಾನಿಕ್ ಪ್ರೀಮಿಯಂ ಫೀಚರ್ಸ್‌ ಆಗಿದ್ದು, ಇದುವರೆಗೆ ಆಯ್ದ ಫೋನ್‌ಗಳಲ್ಲಿ ಮಾತ್ರ ಕಂಡುಬಂದಿದೆ. ಆದಾಗ್ಯೂ ಟಿಪ್‌ಸ್ಟರ್ ಹೇಳಿಕೆಯಂತೆ, ಶಿಯೋಮಿ ಮತ್ತು ಹೆಚ್ಚಿನ ಬ್ರ್ಯಾಂಡ್‌ಗಳು ಇದನ್ನು ಅಳವಡಿಸಿಕೊಳ್ಳುವುದರೊಂದಿಗೆ, ಈ ವಿಶೇಷ ಫೀಚರ್ಸ್‌ ಅನ್ನು ಜನಪ್ರಿಯಗೊಳಿಸುತ್ತಿವೆ ಎನ್ನಲಾಗಿದೆ. ಅದರಂತೆ ಮುಂದಿನ ದಿನಗಳಲ್ಲಿ ಬಜೆಟ್ ಬೆಲೆಯ ಫೋನ್‌ಗಳಲ್ಲೂ ಸಹ ಈ ಫೀಚರ್ಸ್‌ ಕಾಣಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ.

ಅಲ್ಟ್ರಾಸಾನಿಕ್ ಯಾಕೆ ಮುಖ್ಯ?: ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ರೀಡರ್‌ಗಳು ವ್ಯಕ್ತಿಯ ಫಿಂಗರ್‌ಪ್ರಿಂಟ್ ಅನ್ನು ದೃಢೀಕರಿಸಲು ಸೌಂಡ್ ಅನ್ನು ಬಳಕೆ ಮಾಡಿಕೊಳ್ಳುತ್ತವೆ. ಅಂದರೆ ಇದು ಹೆಚ್ಚಿನ ಆವರ್ತನದ ಸೌಂಡ್ ತರಂಗಗಳನ್ನು ಬೆರಳಿಗೆ ರವಾನಿಸುತ್ತದೆ ಮತ್ತು ಫಿಂಗರ್‌ಪ್ರಿಂಟ್‌ನ ವಿವರವಾದ 3D ರೆಂಡರ್‌ನೊಂದಿಗೆ ಧ್ವನಿ ತರಂಗವು ರಿಟರ್ನ್‌ ಆಗುತ್ತದೆ. ಇನ್ನೊಂದೆಡೆ ಆಪ್ಟಿಕಲ್ ಸ್ಕ್ಯಾನರ್‌ಗಳು 2D ನಕ್ಷೆಯನ್ನು ರಚಿಸಲು ಬೆಳಕಿನ ಅಲೆಗಳನ್ನು ಬಳಕೆ ಮಾಡುತ್ತವೆ.

ಶಿಯೋಮಿ 15 ಪ್ರೊ ಸರಣಿಯಲ್ಲಿ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ರೀಡರ್?

ಈ ಸೌಂಡ್ ಪ್ರತಿಧ್ವನಿಗಳು ಬೆಳಕು ಅಥವಾ ಆಪ್ಟಿಕಲ್ ಪ್ರತಿಫಲನಗಳಿಗೆ ಹೋಲಿಕೆ ಮಾಡಿದ್ರೆ ಫಿಂಗರ್‌ಪ್ರಿಂಟ್‌ನ ಉತ್ತಮ ಪ್ರಾತಿನಿಧ್ಯವನ್ನು ನೀಡುವಲ್ಲಿ ಹೆಚ್ಚು ವಿಶ್ವಾಸಾರ್ಹವಾಗಿರುತ್ತವೆ. ಏನಾದರೂ ನಿಮ್ಮ ಬೆರಳುಗಳು ತೇವವಾಗಿದ್ದರೆ. ಅದು ನಿಮ್ಮ ಬೆರಳಿನ ಮೇಲ್ಮೈ ದೋಷಗಳನ್ನು ಅಥವಾ ಹಸ್ತಕ್ಷೇಪಗಳನ್ನು ಮೇಲ್ವಿಚಾರಣೆ ಮಾಡುವ ಕೆಲಸ ಮಾಡುತ್ತದೆ. ಇದರೊಂದಿಗೆ ಅಲ್ಟ್ರಾಸಾನಿಕ್ ಸೆನ್ಸರ್‌ಗಳು ರಕ್ತದ ಹರಿವು ಮತ್ತು ಹೃದಯದ ನಾಡಿಗಳನ್ನು ಸಹ ಗಣನೆಗೆ ತೆಗೆದುಕೊಳ್ಳುವುದರಿಂದ ಸುಲಭವಾಗಿ ನಿಮ್ಮನ್ನು ವಂಚಿಸಲು ಸಾಧ್ಯವಿಲ್ಲ.

ಇದಿಷ್ಟೇ ಅಲ್ಲದೆ ಈ ವಿಶೇಷ ಫೀಚರ್ಸ್‌ ಆಯ್ಕೆಯಿಂದಾಗಿ ಹೃದಯ ಬಡಿತ, ಬಿಎಮ್‌ಐ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ಮೇಲ್ವಿಚಾರಣೆ ಮಾಡಬಹುದಾಗಿದೆ. ಅದರಂತೆ ಇಷ್ಟೆಲ್ಲಾ ವಿಶೇಷ ಸೌಲಭ್ಯ ಇರುವ ಫೀಚರ್ಸ್‌ ಅನ್ನು ಮುಂದಿನ ದಿನಗಳಲ್ಲಿ ಶಿಯೋಮಿಯ ಪ್ರೊ ಸರಣಿಯಲ್ಲಿ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಹೆಚ್ಚು ಸುರಕ್ಷಿತ ಮತ್ತು ವೆಚ್ಚ-ಪರಿಣಾಮಕಾರಿ ಬಯೋಮೆಟ್ರಿಕ್ ಆಯ್ಕೆಯನ್ನು ನೀಡುತ್ತವೆ.

ಶಿಯೋಮಿ 15 ಪ್ರೊ ನಿರೀಕ್ಷಿತ ಫೀಚರ್ಸ್‌: ಕೆಲವು ವದಂತಿಗಳ ಪ್ರಕಾರ ಶಿಯೋಮಿ 15 ಪ್ರೊ 2K ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 0.6mm ಬೆಜೆಲ್‌ಗಳೊಂದಿಗೆ ಕಾಣಿಸಿಕೊಳ್ಳಲಿವೆ. ಹಾಗೆಯೇ ವೆನಿಲ್ಲಾ ವೇರಿಯಂಟ್‌ 1.5K ರೆಸಲ್ಯೂಶನ್, 1,400 ನಿಟ್ಸ್ ಬ್ರೈಟ್‌ನೆಸ್ ಮತ್ತು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಫ್ಲಾಟ್ 6.36 ಇಂಚಿನ OLED ಅನ್ನು ಹೊಂದಿರಬಹುದು ಎಂದು ನಂಬಲಾಗಿದೆ. ಜೊತೆಗೆ ಎರಡೂ ಫೋನ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 4 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ.

Best Mobiles in India

English summary
Xiaomi 15 Pro and Xiaomi 15 Ultra smartphones are known to feature an ultrasonic fingerprint scanner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+