ಇಂದು Xiaomi 15 Ultra ಪ್ರೀ-ಬುಕಿಂಗ್ ಶುರು; 10,000 ರಿಯಾಯಿತಿ.. 5,000 ಕ್ಯಾಶ್‌ಬ್ಯಾಕ್.. ಬೆಲೆ, ಫೀಚರ್ಸ್ ಹೇಗಿವೆ?
ಟೆಕ್ ದೈತ್ಯ ಶಿಯೋಮಿ ಇತ್ತೀಚೆಗೆ ಶಿಯೋಮಿ 15 ಅಲ್ಟ್ರಾ (Xiaomi 15 Ultra) ಫೋನನ್ನು ಬಿಡುಗಡೆ ಮಾಡಿದೆ. ಇದನ್ನು ಶಿಯೋಮಿ 15 ಸರಣಿಯ ಅಡಿಯಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ಲೈಕಾ ಕ್ಯಾಮೆರಾಗಳು, ಎಐ (AI) ವೈಶಿಷ್ಟ್ಯಗಳನ್ನು ಹೊಂದಿವೆ. ಅಂದಹಾಗೆ, ಈ ಮೊಬೈಲ್ ಇಂದಿನಿಂದ (ಮಾರ್ಚ್ 19) ಮುಂಗಡ ಬುಕಿಂಗ್‌ಗೆ ಲಭ್ಯವಿರಲಿದೆ. ಬನ್ನಿ, ಶಿಯೋಮಿ 15 ಅಲ್ಟ್ರಾ ಫೋನಿನ ಬೆಲೆ, ಆಫರ್ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಕಂಪನಿಯು ಶಿಯೋಮಿ 15 (Xiaomi 15) ಮತ್ತು ಶಿಯೋಮಿ 15 ಅಲ್ಟ್ರಾ ಫೋನ್‌ಗಳನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಪೈಕಿ ಶಿಯೋಮಿ 15 ಅಲ್ಟ್ರಾಮೊಬೈಲ್ ಗ್ರಾಹಕರ ಗಮನ ಸೆಳೆದಿದೆ. ಈ ಫೋನಿನಲ್ಲಿ 200MP ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.73 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರಲ್ಲಿ 50MP + 50MP + 50MP + 32MP ಕ್ಯಾಮೆರಾಗಳು ಸಹ ಇವೆ. ಜೊತೆಗೆ 512GB ಸ್ಟೋರೇಜ್, 5410mAh ಬ್ಯಾಟರಿ ಮತ್ತು 90W ವೈರ್ಡ್ ಚಾರ್ಜಿಂಗ್ ಒಳಗೊಂಡಿದೆ.

ಶಿಯೋಮಿ 15 ಅಲ್ಟ್ರಾ ಬೆಲೆ ಮತ್ತು ಆಫರ್
ಶಿಯೋಮಿ 15 ಅಲ್ಟ್ರಾ ಫೋನ್ 16GB + 512GB ಸ್ಟೊರೇಜ್ ರೂಪಾಂತರದಲ್ಲಿ ಖರೀದಿಗೆ ಲಭ್ಯವಿದೆ. ಇದರ ಬೆಲೆ 1,09,999 ರೂ. ಆಗಿದೆ. ಹಾಗೆಯೇ ಶಿಯೋಮಿ 15 ಅಲ್ಟ್ರಾ ಫೋಟೋಗ್ರಫಿ ಕಿಟ್ ಲೆಜೆಂಡ್ ಆವೃತ್ತಿಯನ್ನು 11,999 ರೂ.ಗೆ ಪರಿಚಯಿಸಲಾಗಿದೆ. ಇದು ಸಿಲ್ವರ್ ಕ್ರೋಮ್ ಬಣ್ಣದಲ್ಲಿ ಖರೀದಿಗೆ ಲಭ್ಯವಿದೆ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್ (Mi.com), ಅಮೇಜಾನ್ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಮುಂಗಡ ಬುಕಿಂಗ್ ಮಾಡಬಹುದು. ಕಂಪನಿಯು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಪಾವತಿ ಮೇಲೆ 10,000 ರೂ.ಗಳ ರಿಯಾಯಿತಿ ಘೋಷಿಸಿದೆ. ಜೊತೆಗೆ 5,000 ಕ್ಯಾಶ್‌ಬ್ಯಾಕ್ ಸಹ ನೀಡುತ್ತಿದೆ.
ಶಿಯೋಮಿ 15 ಅಲ್ಟ್ರಾ ವೈಶಿಷ್ಟ್ಯಗಳು
ಶಿಯೋಮಿ 15 ಅಲ್ಟ್ರಾ ಮೊಬೈಲ್ 6.73 ಇಂಚಿನ ಅಮೋಲೆಡ್ ಮೈಕ್ರೋ ಕರ್ವ್ಡ್ ಡಿಸ್ಪ್ಲೇ ಹೊಂದಿದೆ. ಇದು 3,100 x 1,440 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 3,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ. ಇದು ಶಿಯೋಮಿ ಸೆರಾಮಿಕ್ ಗ್ಲಾಸ್ ರಕ್ಷಣೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಆಕ್ಟಾಕೋರ್ ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಆಧಾರಿತ ಹೈಪರ್‌ಓಎಸ್ 2 ಜೊತೆಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಅಡ್ರಿನೊ 830 ಜಿಪಿಯು ಹೊಂದಿದೆ.
ಶಿಯೋಮಿ 15 ಅಲ್ಟ್ರಾ ಫೋನ್ 200 ಮೆಗಾಪಿಕ್ಸೆಲ್ ಲೈಕಾ ಪೆರಿಸ್ಕೋಪ್ ಲೆನ್ಸ್ ಹೊಂದಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಲೈಕಾ ಪ್ರಾಥಮಿಕ ಕ್ಯಾಮೆರಾ, OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಲೈಕಾ ಟೆಲಿಫೋಟೋ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಲೈಕಾ ಅಲ್ಟ್ರಾ ವೈಡ್ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಫೋನ್ 12GB RAM, 512GB ಮತ್ತು 1TB ಸ್ಟೊರೇಜ್ ಆಯ್ಕೆ ಒಳಗೊಂಡಿದೆ.

ಶಿಯೋಮಿ 15 ಅಲ್ಟ್ರಾ ಸ್ಮಾರ್ಟ್‌ಫೋನ್ 5,410mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೈರ್ಡ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 80W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನ ಒಳಗೊಂಡಿದೆ. ಈ ಫೋನ್ ಇನ್ ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಇದು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಪಡೆದಿದೆ. ಇದರೊಂದಿಗೆ ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಲಭ್ಯವಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








