Home
ಸುದ್ದಿಜಾಲ

ನಿಮ್ಮ ಬಳಿ ರೆಡ್ಮಿಯ ಈ ಫೋನ್‌ ಇದ್ರೆ, ಇಲ್ಲಿದೆ ನಿಮಗೆ ಗುಡ್‌ನ್ಯೂಸ್‌!

ಶಿಯೋಮಿ ಸಂಸ್ಥೆಯ ಇತ್ತೀಚಿನ ರೆಡ್ಮಿ ನೋಟ್‌ 13 ಸರಣಿಯ ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ಗ್ರಾಹಕರಿಗೆ ಇದೀಗ ಗುಡ್‌ನ್ಯೂಸ್‌. ಏಕೆಂದರೆ, ಶಿಯೋಮಿ ಸಂಸ್ಥೆಯು ತನ್ನ ರೆಡ್ಮಿ ನೋಟ್‌ 13 ಸರಣಿಯ ಸ್ಮಾರ್ಟ್‌ಫೋನ್‌ ಗಳಿಗೆ ಈಗ ಹೈಪರ್‌ಓಎಸ್‌ (HyperOS) ಅನ್ನು ನವೀಕರಿಸಿದೆ. ಈ ಅಪ್‌ಡೇಟ್‌ನಿಂದ ಗ್ರಾಹಕರು ಫೋನಿನಲ್ಲಿ ಕೆಲವು ಬದಲಾವಣೆ ಕಾಣಬಹುದಾಗಿದೆ.

ಹೌದು, ರೆಡ್ಮಿ ನೋಟ್‌ 13 ಸರಣಿಯ ಫೋನ್‌ಗಳು ಈಗ ಹೈಪರ್‌ಓಎಸ್‌ (HyperOS) ಅಪ್‌ಡೇಟ್‌ ಕಾಣಲಿವೆ. ಅಂದಹಾಗೆ ಈ ಸರಣಿಯು ರೆಡ್ಮಿ ನೋಟ್‌ 13, ರೆಡ್ಮಿ ನೋಟ್‌ 13 ಪ್ರೊ ಹಾಗೂ ರೆಡ್ಮಿ ನೋಟ್‌ 13 ಪ್ರೊ+ ಮಾಡೆಲ್‌ ಫೋನ್‌ಗಳನ್ನು ಒಳಗೊಂಡಿದೆ. ಈ ಅಪ್‌ಡೇಟ್‌ನಲ್ಲಿ ಕಸ್ಟಮೈಸ್ ಬ್ಯಾಕ್‌ಡ್ರಾಪ್‌ಗಳು ಮತ್ತು ಥೀಮ್‌ಗಳೊಂದಿಗೆ ಮಲ್ಟಿ ಲಾಕ್ ಸ್ಕ್ರೀನ್‌ಗಳನ್ನು ಸೆಟ್ ಮಾಡಲು ಬಳಕೆದಾರರಿಗೆ ಅವಕಾಶ ಇರಲಿದೆ.

ನಿಮ್ಮ ಬಳಿ ರೆಡ್ಮಿಯ ಈ ಫೋನ್‌ ಇದ್ರೆ, ಇಲ್ಲಿದೆ ನಿಮಗೆ ಗುಡ್‌ನ್ಯೂಸ್‌!

ಹೊಸ ಹೈಪರ್‌ಓಎಸ್‌ ಅಪ್‌ಡೇಟ್‌ನಿಂದ ಸುಧಾರಿತ ಕಾರ್ಯಕ್ಷಮತೆ ಕಾಣಬಹುದು. ಅಲ್ಲದೇ ಹೊಸ ಫೀಚರ್ಸ್‌ ಪರಿಷ್ಕರಿಸಿದ ಫೈಲ್ ಮ್ಯಾನೇಜರ್ ಲಭ್ಯವಾಗಲಿದೆ. ಹಾಗೆಯೇ ಹವಾಮಾನ ಸಂಬಂಧಿಸಿದ ಅಪ್ಲಿಕೇಶನ್ ನಲ್ಲಿ ಹೊಸತನ ಇರಲಿದೆ. ಇದು ಬಳಕೆದಾರರಿಗೆ ಸ್ಲಿಟ್‌ ಸ್ಕ್ರೀನ್‌ ಆಯ್ಕೆ ಒದಗಿಸಲಿದ್ದು, ಒಂದೇ ಸಮಯದಲ್ಲಿ ಎರಡು ಬೇರೆ ಬೇರೆ ಆಪ್‌ಗಳನ್ನು ಬಳಸಲು ಅನುಮತಿಸುತ್ತದೆ. ಹಾಗಾದರೇ ಈ ಸರಣಿಯ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ ನೋಟ್‌ 13 ಫೀಚರ್ಸ್‌

ರೆಡ್ಮಿ ನೋಟ್‌ 13 ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1080×2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಮೀಡಿಯಾ ಟೆಕ್ ಡೈಮೆನ್ಸಿಟಿ 6080SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ.

ಇದರ ಜೊತೆಗೆ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 100 ಮೆಗಾಪಿಕ್ಸೆಲ್‌ ಸೆನ್ಸಾರ್‌ ಇದೆ. ಹಾಗೆಯೇ ಈ ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 33W ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ರೆಡ್ಮಿ ನೋಟ್‌ 13 ಪ್ರೊ 5G ಫೀಚರ್ಸ್‌

ರೆಡ್ಮಿ ನೋಟ್‌ 13 ಪ್ರೊ 5G ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಈ ಡಿಸ್‌ಪ್ಲೇಯು 1220 x 2712 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7s ಜೆನ್‌ 2 ಚಿಪ್‌ಸೆಟ್ ಅನ್ನು ಪಡೆದಿದ್ದು, ಇದು ಆಂಡ್ರಾಯ್ಡ್ v13 ಸಪೋರ್ಟ್‌ ಜೊತೆಗೆ ಕಾರ್ಯ ನಿರ್ವಹಿಸಲಿದೆ.

ಇದರೊಂದಿಗೆ ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 200 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್‌ 5100 mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದಿದ್ದು, ಇದು 67W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ.

ರೆಡ್ಮಿ ನೋಟ್‌ 13 ಪ್ರೊ+ ಫೀಚರ್ಸ್‌

ರೆಡ್ಮಿ ನೋಟ್‌ 13 ಪ್ರೊ+ ಮೊಬೈಲ್‌ 6.67 ಇಂಚಿನ 1.5K ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು ಮೀಡಿಯಾ ಟೆಕ್‌ ಡೈಮೆನ್ಸಿಟಿ 7200 ಅಲ್ಟ್ರಾ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಈ ಫೋನ್‌ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನಿನ ಪ್ರಾಥಮಿಕ ಕ್ಯಾಮೆರಾ 200 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದ್ದು, ಇದರ ಜೊತೆಗೆ ಈ ಸ್ಮಾರ್ಟ್‌ಫೋನ್‌ 5100 mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಪಡೆದಿದೆ.

Best Mobiles in India

English summary
Xiaomi announces HyperOS update for the Redmi Note 13 5G Series. check other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+