ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ರಿಯಾಯಿತಿ!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಶಿಯೋಮಿ ತನ್ನ ಬಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಇನ್ನು ಹಬ್ಬದ ಸೀಸನ್‌ಗಳಲ್ಲಿ ಭರ್ಜರಿ ಡಿಸ್ಕೌಂಟ್‌ ನಿಡುವ ಶಿಯೋಮಿ ಗ್ರಾಹಕರಿಗೆ ನೆಚ್ಚಿನ ಬ್ರ್ಯಾಂಡ್‌ ಎನಿಸಿದೆ. ಸದ್ಯ ಇದೀಗ ಬ್ಲ್ಯಾಕ್‌ ಫ್ರೈಡೇ ಸೇಲ್‌ ಪ್ರಯುಕ್ತ ಶಿಯೋಮಿ ಕೂಡ ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ಬಾರಿ ರಿಯಾಯಿತಿಯನ್ನ ಘೋಷಿಸಿದೆ. ಈ ಸೇಲ್‌ ಇದೇ ನವೆಂಬರ್ 29 ರವರೆಗೆ ಮುಂದುವರಿಯುತ್ತದೆ. ಇನ್ನು ಈ ಸೇಲ್‌ನಲ್ಲಿ ರೆಡ್‌ಮಿ ನೋಟ್ 9 ಪ್ರೊ, ರೆಡ್‌ಮಿ ಪವರ್ ಬ್ಯಾಂಕ್, ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ 2 ಮತ್ತು 2ಸಿ, ಮಿ ಬ್ಯಾಂಡ್ 4 ಮುಂತಾದ ಉತ್ಪನ್ನಗಳು ಬಿಗ್‌ ಡಿಸ್ಕೌಂಟ್‌ನಲ್ಲಿ ದೊರೆಯಲಿವೆ.

ಶಿಯೋಮಿ ಬ್ಲ್ಯಾಕ್‌ ಫ್ರೈಡೇ ಸೇಲ್

ಹೌದು, ಶಿಯೋಮಿ ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿ ತನ್ನ ವಿವಿಧ ಪ್ರಾಡಕ್ಟ್‌ಗಳ ಮೇಲೆ ಬಿಗ್‌ ಆಫರ್‌ಗಳನ್ನ ನೀಡುತ್ತಿದೆ. ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ ಬ್ಯಾಂಡ್‌ಗಳು, ಇಯರ್‌ಫೋನ್‌ ಸೇರಿದಂತೆ ಹಲವು ಪ್ರಾಡಕ್ಟ್‌ಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ. ಇನ್ನು ಶಿಯೋಮಿ ಬ್ಲ್ಯಾಕ್ ಫ್ರೈಡೇ ಸೇಲ್‌ ನಲ್ಲಿ ನೀವು ಪಡೆದುಕೊಳ್ಳಬಹುದಾದ ಅತ್ಯುತ್ತಮ ಡೀಲ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬ್ಲ್ಯಾಕ್‌ ಫ್ರೈಡೇ ಸೇಲ್

ಶಿಯೋಮಿ ತನ್ನ ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿ ರೆಡ್ಮಿ 8A ಡ್ಯುಯಲ್ ಸ್ಮಾರ್ಟ್‌ಫೋನ್‌ ಅನ್ನು ರಿಯಾಯಿತಿ ದರದಲ್ಲಿ 6,999 ರೂ. ಗಳಿಗೆ ಸೇಲ್‌ ಮಾಡುತ್ತಿದೆ. ಇದರ ಮೂಲ ಬೆಲೆ 9,999 ರೂ ಆಗಿದೆ. ಇನ್ನು ಶಿಯೋಮಿ ರೆಡ್‌ಮಿ ನೋಟ್ 9 ಪ್ರೊ 4GB RAM ಮತ್ತು 128GB ಸ್ಟೋರೇಜ್ ಮಾದರಿ 14,999 ರೂಗಳಲ್ಲಿ ಲಭ್ಯವಾಗಲಿದೆ. ಜೊತೆಗೆ ರೆಡ್‌ಮಿ 9I ಸ್ಮಾರ್ಟ್‌ಫೋನ್‌ 8,999 ರೂ ಗಳಿಗೆ ಲಭ್ಯವಾಗಲಿದ್ದು, ಇದರ ಮೂಲ ಬೆಲೆ 10,999 ರೂ. ಆಗಿದೆ. ಅಲ್ಲದೆ ರೆಡ್‌ಮಿ ನೋಟ್ 8 ಕೂಡ 8,999 ರೂಗಳಲ್ಲಿ ಲಭ್ಯವಾಗಲಿದ್ದು, ಇದರ ಮೂಲ ಬೆಲೆ 12,999 ರೂ. ಆಗಿದೆ.

ಶಿಯೋಮಿ ಬ್ಲ್ಯಾಕ್‌ ಫ್ರೈಡೇ ಸೇಲ್

ಇನ್ನು ಶಿಯೋಮಿ ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿ ರೆಡ್‌ಮಿ ಪವರ್ ಬ್ಯಾಂಕ್ ಬೇಸ್ ಮಾಡೆಲ್‌ 10,000mAh ರೂಪಾಂತರದ ಆಯ್ಕೆಗೆ ಕೇವಲ 699 ರೂಗಳಿಗೆ ನೀಡುವುದಾಗಿ ಘೋಷಿಸಿದೆ. ಇದಲ್ಲದೆ ಈ ಸೇಲ್‌ನಲ್ಲಿ ಮಿ ಬ್ಯಾಂಡ್ 4 ಕೇವಲ 1,999 ರೂಗಳಿಗೆ ಲಭ್ಯವಾಗಲಿದೆ. ಹಾಗೇಯೇ ರೆಡ್‌ಮಿ ಇಯರ್‌ಬಡ್ಸ್‌ 2c 1,299 ರೂ.ಗೆ ಮತ್ತು ರೆಡ್‌ಮಿ ಇಯರ್‌ಬಡ್ಸ್‌S 1,699 ರೂ.ಗೆ ಲಭ್ಯವಾಗಲಿದೆ. ಜೊತೆಗೆ ನೀವು ಮಿ ಟ್ರೂ ವಾಯರ್‌ಲೆಸ್ ಇಯರ್‌ಫೋನ್ 2C ಅನ್ನು 2,499 ರೂ.ಗೆ ಖರೀದಿಸಬಹುದಾಗಿದೆ.

ಶಿಯೋಮಿ

ಇದಲ್ಲದೆ ಶಿಯೋಮಿ ಹೆಚ್ಚುವರಿಯಾಗಿ, ಶಿಯೋಮಿ ಮಿ ಬಿಯರ್ಡ್ ಟ್ರಿಮ್ಮರ್ ಮತ್ತು ಮಿ ಬ್ರೆಡ್ ಟ್ರಿಮ್ಮರ್ ಗಳಲ್ಲಿ ಭಾರಿ ರಿಯಾಯಿತಿ ಆಫರ್‌ ಅನ್ನು ನೀಡುತ್ತಿದೆ. ಸದ್ಯ ಶಿಯೋಮಿ ಬ್ಲ್ಯಾಕ್‌ ಫ್ರೈಡೇ ಸೇಲ್‌ನಲ್ಲಿನ ಲಭ್ಯವಾಗುವ ಪ್ರಾಡಕ್ಟ್‌ಗಳನ್ನ ಮಿ.ಕಾಮ್, ಮಿ ಹೋಮ್, ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್ಕಾರ್ಟ್ ಮತ್ತು ಇತರ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸೇಲ್‌ ನವೆಂಬರ್ 29 ರವರೆಗೆ ನಡೆಯಲಿದ್ದು, ಗ್ರಾಹಕರಿಗೆ ಸ್ಮಾರ್ಟ್‌ಫೋನ್‌ ಖರೀದಿಸಲು ಇದು ಸದಾವಕಾಶವಾಗಿದೆ.

Most Read Articles
Best Mobiles in India

English summary
Here we will be taking a look at all the deals that will be offered by Xiaomi during its Black Friday sale in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X