ಶಿಯೋಮಿ Civi 1S ಸ್ಮಾರ್ಟ್‌ಫೋನ್ ಲಾಂಚ್! 55W ವೇಗದ ಚಾರ್ಜಿಂಗ್ ಸಾಮರ್ಥ್ಯ!
ಶಿಯೋಮಿ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳಿಂದ ಜನಪ್ರಿಯತೆ ಪಡೆದುಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಶಿಯೋಮಿ Civi 1S ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಅನ್ನು ಸೆಲ್ಫಿ ಲವರ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು 2x ಜೂಮ್ ಮತ್ತು ಆಟೋಫೋಕಸ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿರುವ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಹೌದು, ಶಿಯೋಮಿ ಕಂಪೆನಿ ಹೊಸದಾಗಿ ಶಿಯೋಮಿ Civi 1S ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 4D ಲೈಟ್ ಚೇಸಿಂಗ್ ಬ್ಯೂಟಿ ಮತ್ತು ನೇಟಿವ್ ಬ್ಯೂಟಿ ಪೋರ್ಟ್ರೇಟ್ 2.0 ಟೆಕ್ನಾಲಜಿಯನ್ನು ಒಳಗೊಂಡ ಹಲವಾರು ಬ್ಯೂಟಿಷಿಯನ್ ಫೀಚರ್ಸ್ ಹೊಂದಿದೆ. ಈ ಸ್ಮಾರ್ಟ್‌ಫೋನ್ 6.55 ಇಂಚಿನ ಮೈಕ್ರೋ-ಕರ್ವ್ಡ್ ಫುಲ್ HD+ OLED ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಶಿಯೋಮಿ Civi 1S ಸ್ಮಾರ್ಟ್‌ಫೋನ್ 6.55 ಇಂಚಿನ ಮೈಕ್ರೋ-ಕರ್ವ್ಡ್ ಫುಲ್ HD+ OLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 950 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಫ್ರೇಮ್ ರೇಟ್ 87.7fps ನೊಂದಿಗೆ 3 ಗಂಟೆಗಳ ಗೇಮಿಂಗ್ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಪ್ರೊಸೆಸರ್ ಹೇಗಿದೆ?
ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM + 128GB ಮತ್ತು 12GB RAM + 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.

ಕ್ಯಾಮೆರಾ ವಿಶೇಷ
ಶಿಯೋಮಿ Civi 1S ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ f/1.79 ಲೆನ್ಸ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಸಹ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಇನ್ನು ಈ ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 55W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದಿಂದ ಚಾಲಿತ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ NFC, ಬ್ಲೂಟೂತ್ v5.2 ಮತ್ತು IR ರಿಮೋಟ್ ಕಂಟ್ರೋಲ್ ಟೆಕ್ನಾಲಜಿಯನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
ಶಿಯೋಮಿ Civi 1S ಸ್ಮಾರ್ಟ್‌ಫೋನ್ ಪ್ರಸ್ತುತ ಚೀನಾದಲ್ಲಿ ಮಾತ್ರ ಲಭ್ಯವಿದೆ. ಇದರ ಬೇಸ್ ಮಾಡೆಲ್ 8GB RAM + 128GB ಇಂಟರ್ ಸ್ಟೋರೇಜ್ ಆಯ್ಕೆಯು CNY 2,299 (ಅಂದಾಜು 27,100ರೂ) ಬೆಲೆಯನ್ನು ಹೊಂದಿದೆ. ಇದು 8GB RAM + 256GB ಇಂಟರ್ ಸ್ಟೋರೇಜ್ ಆಯ್ಕೆಯು CNY 2,599 (ಸುಮಾರು 30,700ರೂ)ಬೆಲೆಗೆ ಲಭ್ಯವಾಗಲಿದೆ. ಟಾಪ್-ಎಂಡ್ 12GB RAM + 256GB ಇಂಟರ್ ಸ್ಟೋರೇಜ್ ರೂಪಾಂತರದ ಬೆಲೆ CNY 2,899 (ಅಂದಾಜು 34,200ರೂ) ಬೆಲೆಗೆ ನಿಗಧಿಪಡಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬ್ಲ್ಯಾಕ್, ನೀಲಿ, ಗುಲಾಬಿ ಮತ್ತು ಬಿಳಿ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.


Click it and Unblock the Notifications








