Xiaomi: ಶಿಯೋಮಿ ಸಿವಿ 4 ಪ್ರೊ ಸ್ಮಾರ್ಟ್‌ಫೋನ್ ಲಾಂಚ್! ಡ್ಯುಯಲ್ 32MP ಸೆಲ್ಫಿ ಕ್ಯಾಮೆರಾ, 16GB RAM...
ಶಿಯೋಮಿ (Xiaomi) ಫೋನ್‌ಗಳು ಸಾಮಾನ್ಯವಾಗಿ ಕಡಿಮೆ ದರದಲ್ಲಿ ಅತ್ಯುತ್ತಮ ಫೀಚರ್ಸ್ ಆಯ್ಕೆ ಇರುವ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಮೂಲಕ ಇತರೆ ಸ್ಮಾರ್ಟ್‌ಫೋನ್ ತಯಾರಿಕರಿಗೆ ನಡುಕ ಹುಟ್ಟಿಸುವ ಕೆಲಸ ಮಾಡುತ್ತಲೇ ಇರುತ್ತದೆ. ಅದರಂತೆ ಈಗ ಶಿಯೋಮಿ ಸಿವಿ 4 ಪ್ರೊ ಸ್ಮಾರ್ಟ್‌ಫೋನ್ (Xiaomi CIVI 4 Pro smartphone) ಅನ್ನು ಲಾಂಚ್ ಮಾಡಲಾಗಿದೆ.
ಹೌದು, ಶಿಯೋಮಿ ಸಿವಿ 4 ಪ್ರೊ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಾಗಿದ್ದು, ಈ ಸ್ಮಾರ್ಟ್‌ಫೋನ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಹಾಗೂ ಡ್ಯುಯಲ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೇರಿದಂತೆ ಆಕರ್ಷಕ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಶಿಯೋಮಿ ಸಿವಿ 4 ಪ್ರೊ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.55 ಇಂಚಿನ 1.5 ಕೆ ಸಿ 8 12 ಬಿಟ್ ಒಎಲ್ಇಡಿ ಡಿಸ್‌ಪ್ಲೆ ಆಯ್ಕೆ ಪಡೆದುಕೊಂಡಿದೆ. ಅಂದರೆ ಈ ಡಿಸ್‌ಪ್ಲೆ 2750 x 1236 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಹಾಗೆಯೇ ಗ್ಲಾಸ್ ವಿಕ್ಟಸ್ 2 ರಕ್ಷಣೆ ಪಡೆದುಕೊಂಡಿದೆ. ಅಲ್ಲದೆ DCI-P3 ಬಣ್ಣದ ಹರವು, 120Hz ರಿಫ್ರೆಶ್ ರೇಟ್ 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಈ ಫೋನ್ ಪಡೆದಿದೆ.
ಶಿಯೋಮಿ ಸಿವಿ 4 ಪ್ರೊ ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 8s ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು ಅಡ್ರಿನೋ 735 ಜಿಪಿಯು ಬಲ ಪಡೆದಿಕೊಂಡಿದೆ. ಹಾಗೆಯೇ ಶಿಯೋಮಿ ಹೈಪರ್ ಓಎಸ್ ಅನ್ನು ಈ ಫೋನ್ ರನ್ ಮಾಡಲಿದೆ. ಇದರ ಜೊತೆಗೆ 12GB / 16GB LPPDDR5x RAM ಜೊತೆಗೆ 256GB / 512GB UFS 4.0 ಇಂಟರ್ ಸ್ಟೋರೇಜ್ ಆಯ್ಕೆಯ ವೇರಿಯಂಟ್ ಫೋನ್‌ಗಳನ್ನು ಕಾಣಬಹುದು.
ಶಿಯೋಮಿ ಸಿವಿ 4 ಪ್ರೊ ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ ಇದು ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಅಂದರೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, ಆಟೋಫೋಕಸ್‌ನೊಂದಿಗೆ ಟೆಲಿಫೋಟೋ ಕ್ಯಾಮೆರಾ ಹಾಗೂ 12 ಮೆಗಾಪಿಕ್ಸೆಲ್ 120° ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಅನ್ನು ಈ ಫೋನ್ ಹೊಂದಿದ್ದು, ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್‌ಓಮ್ನಿವಿಷನ್ ಸ್ಯಾಮ್‌ಸಂಗ್ S5K3D2 78° FoV ಫ್ರಂಟ್ ಫೇಸಿಂಗ್ ಕ್ಯಾಮೆರಾ ಜೊತೆಗೆ f/2.0 ಅಪರ್ಚರ್ ಮತ್ತು 32 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ S5K3D2 100° FoV ಸೆಕೆಂಡರಿ ಕ್ಯಾಮರಾ ಆಯ್ಕೆ ನೀಡಲಾಗಿದೆ.

ಶಿಯೋಮಿ ಸಿವಿ 4 ಪ್ರೊ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಫೋನ್ 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4700mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಅಲ್ಲದೆ 5G SA/NSA, ಡ್ಯುಯಲ್ 4G VoLTE, ವೈ ಫೈ 6 802.11 be, ಬ್ಲೂಟೂರ್ ಆವೃತ್ತಿ 5.4 ಸೇರಿದಂತೆ ಅನೇಕ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಇನ್-ಡಿಸ್‌ಪ್ಕಲೇ ಫಿಂಗರ್‌ಫ್ರಿಂಟ್ ಸೆನ್ಸರ್, ಇನ್ಫ್ರಾರೆಡ್ ಸೆನ್ಸರ್, ಹೈ-ರೆಸ್ ಆಡಿಯೋ, ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಸೇರಿದಂತೆ ವಿಶೇಷ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ.
ಶಿಯೋಮಿ ಸಿವಿ 4 ಪ್ರೊ ಸ್ಮಾರ್ಟ್‌ಫೋನ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್‌ಫೋನ್‌ನ 12GB + 256GB ಆವೃತ್ತಿಗೆ 2999 ಯುವಾನ್ ಅಂದರೆ 35,095ರೂ.ಗಳು ಹಾಗೂ 12GB + 512GB ವೇರಿಯಂಟ್‌ಗೆ 3299 ಯುವಾನ್ ಅಂದರೆ 38,605 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಟಾಪ್-ಎಂಡ್ 16GB + 512GB ಆವೃತ್ತಿಗೆ 3599 ಯುವಾನ್ ಅಂದರೆ 42,120 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.

ಈ ಸ್ಮಾರ್ಟ್‌ಫೋನ್ ಸ್ಪ್ರಿಂಗ್ ವೈಲ್ಡ್ ಗ್ರೀನ್, ಸಾಫ್ಟ್ ಮಿಸ್ಟ್ ಪಿಂಕ್, ಬ್ರೀಜ್ ಬ್ಲೂ ಮತ್ತು ಸ್ಟಾರ್ರಿ ಬ್ಲ್ಯಾಕ್ ಬಣ್ಣಗಳಲ್ಲಿ ಕಂಡುಬಂದಿದ್ದು, ಸ್ಟ್ಯಾಂಡರ್ಡ್ ಆವೃತ್ತಿಯು ವಿಶೇಷ ಬಣ್ಣದ ಆಯ್ಕೆಯಲ್ಲಿಯೂ ಲಭ್ಯ ಇದೆ. ಇನ್ನು ಈ ಫೋನ್ ಅನ್ನು ಪೂರ್ವ ಆರ್ಡರ್ ಮಾಡಲು ಅವಕಾಶ ಸಹ ನೀಡಲಾಗಿದ್ದು, ಇದನ್ನು ಮಾರ್ಚ್ 26 ರಿಂದ ಚೀನಾದಲ್ಲಿ ಸೇಲ್ ಮಾಡಲಾಗುತ್ತದೆ. ಭಾರತವೂ ಸೇರಿದಂತೆ ಈ ಫೋನ್ ಜಾಗತಿಕವಾಗಿ ಯಾವಾಗ ಲಭ್ಯ ಇರಲಿದೆ ಎಂಬ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.


Click it and Unblock the Notifications








