Subscribe to Gizbot

ರೂ 1 ರ ಶ್ಯೋಮಿ ಫ್ಲ್ಯಾಶ್ ಸೇಲ್ ದೀಪಾವಳಿ ಧಮಾಕಾ

Posted By:

ದೀಪಾವಳಿ ಇನ್ನೇನು ಸಮೀಪದಲ್ಲಿದೆ ಮತ್ತು ಹಬ್ಬದ ಶಾಪಿಂಗ್ ತುಸು ಜೋರಾಗಿಯೇ ನಡೆಯುತ್ತಿದೆ. ಹೆಚ್ಚಿನ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ತಮ್ಮ ಹಬ್ಬದ ಸೇಲ್‌ಗಳ ಮಾರಾಟವನ್ನು ಆರಂಭಿಸಿದ್ದು ಆಫರ್‌ಗಳು ಮತ್ತು ಆಕರ್ಷಣೀಯ ಡಿಸ್ಕೌಂಟ್‌ಗಳನ್ನು ಬಳಕೆದಾರರಿಗೆ ನೀಡುತ್ತಿದೆ.

ಓದಿರಿ: ತಾಯ್ನೆಲದಲ್ಲೂ ಶ್ಯೋಮಿ ಕಂಪೆನಿಗೆ ಸಂಚಕಾರ!!!

ಶ್ಯೋಮಿ ಕೂಡ ತನ್ನದೇ ಆದ ಮಾರಾಟವನ್ನು ಇನ್ನಷ್ಟು ಮನರಂಜನಾತ್ಮಕವಾಗಿ ನಡೆಸುವ ಹಾದಿಯಲ್ಲಿದೆ. ಟ್ವಿಟ್ಟರ್ ಪೋಸ್ಟ್ ಮೂಲಕ ಕಂಪೆನಿ ದೀಪಾವಳಿಯ ಭರ್ಜರಿ ಸೇಲ್ ಅನ್ನು ಈಗಾಗಲೇ ಅದು ಪ್ರಸ್ತುತಪಡಿಸಿದೆ. ತನ್ನ ಕೆಲವೊಂದು ಉತ್ಪನ್ನಗಳಿಗೆ ರೂ 1 ರ ಫ್ಲ್ಯಾಶ್ ಸೇಲ್ ಅನ್ನು ಶ್ಯೋಮಿ ಕೊಡಮಾಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಾಮಾಜಿಕ ಜಾಲತಾಣ

ಸಾಮಾಜಿಕ ಜಾಲತಾಣ

"Announcing #DiwaliWithMi Sale from 3-5 Nov! Special offers, games, flash sales & more! http://mi.com/in." ಎಂಬ ಒಕ್ಕಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಶ್ಯೋಮಿ ಈಗಾಗಲೇ ಹರಿಯಬಿಟ್ಟಿದೆ.

ಮಾರಾಟ

ಮಾರಾಟ

ಈ ಮಾರಾಟವನ್ನು ನವೆಂಬರ್ 3,4 ಮತ್ತು 5 ರಂದು ಮಧ್ಯಾಹ್ನ 2ರಿಂದ 6 ರವರೆಗೆ ನಡೆಸಲಾಗುತ್ತದೆ.

ರೂ 1 ರ ಫ್ಲ್ಯಾಶ್ ಸೇಲ್‌

ರೂ 1 ರ ಫ್ಲ್ಯಾಶ್ ಸೇಲ್‌

ರೂ 1 ರ ಫ್ಲ್ಯಾಶ್ ಸೇಲ್‌ನಲ್ಲಿ ಭಾಗವಹಿಸಲು ಬಳಕೆದಾರರು ತಮ್ಮಷ್ಟಕ್ಕೆ ನೋಂದಾಯಿಸಬೇಕಾಗುತ್ತದೆ. ತಮ್ಮ ಸಾಮಾಜಿಕ ಫ್ರೊಫೈಲ್‌ಗಳಾದ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಪ್ರಮೊಶನ್ ಲಿಂಕ್ ಅನ್ನು ಶೇರ್ ಮಾಡಬೇಕಾಗುತ್ತದೆ.

ಗೂಗಲ್ ಪ್ಲೇ ಸ್ಟೋರ್‌

ಗೂಗಲ್ ಪ್ಲೇ ಸ್ಟೋರ್‌

ಗೂಗಲ್ ಪ್ಲೇ ಸ್ಟೋರ್‌ನಿಂದ ಎಮ್ಐ ಸ್ಟೋರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಲಿಂಕ್ ಅನ್ನು ಬಳಕೆದಾರರು ಪಡೆದುಕೊಳ್ಳಬಹುದು. ಮಾರಾಟದ ಅಧಿಸೂಚನೆಗಳನ್ನು ಇದರಿಂದ ಪಡೆದುಕೊಳ್ಳಬಹುದಾಗಿದೆ.

ಆಡಿ ಗೆಲ್ಲಿ ಎಂಬ ಯೋಜನೆ

ಆಡಿ ಗೆಲ್ಲಿ ಎಂಬ ಯೋಜನೆ

ಶ್ಯೋಮಿ ಕೂಡ ಆಡಿ ಗೆಲ್ಲಿ ಎಂಬ ಯೋಜನೆಯನ್ನು ಆರಂಭಿಸಿದ್ದು ಎಮ್ಐ ಫೋನ್ ಅನ್ನು ಗೆಲ್ಲುವ ಅವಕಾಶವನ್ನು ಬಳಕೆದಾರರಿಗೆ ಕಂಪೆನಿ ಒದಗಿಸುತ್ತಿದೆ.

ಶ್ಯೋಮಿ ಮಾಡಿದ ಪ್ಯಾಟ್ರನ್

ಶ್ಯೋಮಿ ಮಾಡಿದ ಪ್ಯಾಟ್ರನ್

ಶ್ಯೋಮಿ ಮಾಡಿದ ಪ್ಯಾಟ್ರನ್ ಅನ್ನು ಬಳಕೆದಾರರು 10 ಸೆಕೆಂಡ್‌ಗಳಲ್ಲಿ ಬದಲಿಸಿ ಎಮ್ಐ ಫೋನ್ ಅನ್ನು ಗೆಲ್ಲಬಹುದು.

ಹಬ್ಬದ ಆಫರ್‌ಗಳ ಪಟ್ಟಿ

ಹಬ್ಬದ ಆಫರ್‌ಗಳ ಪಟ್ಟಿ

ಹಬ್ಬದ ಆಫರ್‌ಗಳ ಪಟ್ಟಿಯಲ್ಲಿ ಶ್ಯೋಮಿ ತನ್ನ ಯಶಸ್ವಿ ಉತ್ಪನ್ನಗಳನ್ನು ಕಂಪೆನಿ ಪಟ್ಟಿ ಮಾಡಿದೆ.

ರೂ 1 ರ ಫ್ಲ್ಯಾಶ್ ಸೇಲ್

ರೂ 1 ರ ಫ್ಲ್ಯಾಶ್ ಸೇಲ್

ರೆಡ್ಮಿ 2 ಪ್ರೈಮ್, 16ಜಿಬಿ ಎಮ್ಐ 4, 16ಜಿಬಿ ಎಮ್ಐ 4 ಮತ್ತು ಎಮ್ಐ ಪ್ಯಾಡ್ ಈ ಪಟ್ಟಿಯಲ್ಲಿ ಸೇರಿದೆ.

ಕಡಿಮೆ ಬೆಲೆ

ಕಡಿಮೆ ಬೆಲೆ

ಇವುಗಳ ಬೆಲೆಯನ್ನು ಕಡಿತಗೊಳಿಸಲಾಗಿದ್ದು ಅತ್ಯಂತ ಕಡಿಮೆ ಬೆಲೆಗೆ ಫೋನ್‌ಗಳ ಮಾರಾಟವನ್ನು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಶ್ಯೋಮಿ ಸೇಲ್

ಶ್ಯೋಮಿ ಸೇಲ್

ಶ್ಯೋಮಿಯು ಸೇಲ್ ಅನ್ನು ನವೆಂಬರ್ 3, 4 ಹಾಗೂ 5 ರಂದು ಬೆಳಗ್ಗೆ 10 ರಿಂದ ಆರಂಭಿಸುತ್ತಿದೆ.

ತನ್ನ ಸ್ಟಾರ್ ಉತ್ಪನ್ನ

ತನ್ನ ಸ್ಟಾರ್ ಉತ್ಪನ್ನ

ತನ್ನ ಸ್ಟಾರ್ ಉತ್ಪನ್ನಗಳಾದ ಎಮ್ ಬ್ಯಾಂಡ್ ಹಾಗೂ ಎಮ್ಐ ಇಯರ್ ಫೋನ್‌ಗಳನ್ನೇ ಹೆಚ್ಚು ಹೈಲೈಟ್ ಮಾಡುತ್ತಿದೆ. ಎಮ್ಐ ಬ್ಯಾಂಡ್ ಮತ್ತು ಬೇಸಿಕ್ ಇಯರ್ ಫೋನ್‌ಗಳನ್ನು ರೂ 799 ಮತ್ತು ರೂ 299 ಕ್ಕೆ ಮಾರಾಟ ಮಾಡಲಾಗುತ್ತಿದೆ.

ಎಮ್ಐ ಸ್ಟೋರ್ ಅಪ್ಲಿಕೇಶನ್‌

ಎಮ್ಐ ಸ್ಟೋರ್ ಅಪ್ಲಿಕೇಶನ್‌

ಎಮ್ಐ ಸ್ಟೋರ್ ಅಪ್ಲಿಕೇಶನ್‌ನಲ್ಲಿ ಶ್ಯೋಮಿ ಉತ್ಪನ್ನಗಳ ಶಾಪರ್‌ಗಳು ಪ್ರತೀ ದಿನ ಎಮ್‌ಐ ಟಿವಿಯನ್ನು ಉಚಿತವಾಗಿ ಗೆಲ್ಲುವ ಅವಕಾಶ ಕೂಡ ಇದೆ. ಪೇಯು ಮನಿ ಮೂಲಕ ಟ್ರಾನ್ಸಾಕ್ಶನ್ ಮಾಡಿದಲ್ಲಿ ಗರಿಷ್ಟ ರೂ 500 ಕ್ಕೆ 5% ದಷ್ಟು ಕ್ಯಾಶ್ ಬ್ಯಾಕ್ ಕೂಡ ಪಡೆದುಕೊಳ್ಳಬಹುದು.

ಪೇಯುಮನಿ ಅಪ್ಲಿಕೇಶನ್‌

ಪೇಯುಮನಿ ಅಪ್ಲಿಕೇಶನ್‌

ಈ ಕೊಡುಗೆಯನ್ನು ಪಡೆದುಕೊಳ್ಳಲು ಬಳಕೆದಾರರು ಪೇಯುಮನಿ ಅಪ್ಲಿಕೇಶನ್‌ನ (ಆವೃತ್ತಿ 1.0.5) ಅತ್ಯಾಧುನಿಕ ಆವೃತ್ತಿಯನ್ನು ಅಪ್‌ಡೇಟ್ ಮಾಡಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi too is very interested in holding its very own sale. Through a Twitter post, the company had earlier shared a post that hinted at a Diwali sale. Xiaomi has shed more light on its Diwali sales plan - it will be hosting Re 1 flash sale on some of its products.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot