Subscribe to Gizbot

ಆಪಲ್ ಬೆನ್ನಿಗೆ ಚೂರಿ ಹಾಕಲು ಯತ್ನಿಸಿದ ಶಿಯೋಮಿಗೆ ಬಿತ್ತು ಸರಿಯಾದ ಹೊಡೆತ..!

Written By:

ಈಗಾಗಲೇ ಏಷ್ಯಾ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಶಿಯೋಮಿ ಕಂಪನಿ ಭಾರತ-ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಕೇವಲ ಸ್ಮಾರ್ಟ್‌ಫೋನ್ ಮಾತ್ರವಲ್ಲದೇ ಲಾಪ್‌ಟಾಪ್, ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವ ಮೂಲಕ ಗ್ರಾಹಕರಿಗೆ ಹತ್ತಿರವಾಗುತ್ತಿದೆ.

ಆಪಲ್ ಬೆನ್ನಿಗೆ ಚೂರಿ ಹಾಕಲು ಯತ್ನಿಸಿದ ಶಿಯೋಮಿಗೆ ಬಿತ್ತು ಸರಿಯಾದ ಹೊಡೆತ..!

ಓದಿರಿ: ಡ್ಯುಯಲ್ ಕ್ಯಾಮೆರಾ ಟ್ರೆಂಡ್ ಮುಗಿತು: ಶೀಘ್ರವೇ ತ್ರಿಪಲ್ ಲೈನ್ಸ್‌ ಕ್ಯಾಮೆರಾ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ...!

ಇದೇ ಮಾದರಿಯಲ್ಲಿ ಆಪಲ್ ಗೆ ಸೆಡ್ಡು ಹೊಡೆಯುವ ಸಲುವಾಗಿ ಮಾಡಿದ್ದ ಪ್ರಯತ್ನವೊಂದರಲ್ಲಿ ಹಿನ್ನಡೆಯನ್ನು ಅನುಭವಿಸಿದೆ ಎನ್ನಲಾಗಿದೆ. ಶಿಯೋಮಿ ವಿರುದ್ಧ ಆಪಲ್ ಗೆ ಹೆಚ್ಚಿನ ಗೆಲುವು ದೊರೆತಿದೆ ಎನ್ನಾಗಿದೆ. EU ಟ್ರೆಡ್‌ ಮಾರ್ಕ್‌ನಲ್ಲಿ ಶಿಯೋಮಿ ಸೋಲನುಭವಿಸಿದ್ದು, ಆಪಲ್‌ಗೆ ಗೆಲವು ದೊರೆತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Mi ಪ್ಯಾಡ್- i ಪ್ಯಾಡ್:

Mi ಪ್ಯಾಡ್- i ಪ್ಯಾಡ್:

ಶಿಯೋಮಿಯೂ ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಆಪಲ್ i ಪ್ಯಾಡ್ ಖ್ಯಾತಿಯನ್ನು ಸೆಳೆಯುವ ಸಲುವಾಗಿ ತನ್ನ ನೂತನ ಟ್ಯಾಬ್ಲೆಟ್‌ಗೆ Mi ಪ್ಯಾಡ್ ಎಂದು ಹೆಸರು ಇಡಲು ಮುಂದಾಗಿತ್ತು. ಇದರಿಂದ ಆಪಲ್ ಕೇಸ್‌ ದಾಖಲಿಸಿ, ತನ್ನ ಗ್ರಾಹಕರನ್ನು ಸೆಳೆಯುವ ತಂತ್ರವಾಗಿದೆ ಎಂದು ವಾದಿಸಿತ್ತು.

ದೇಶ್‌ ಕಾ ಸ್ಮಾರ್ಟ್‌ಫೋನ್ ಸೇಲ್ ಶುರು: ಇಲ್ಲಿದೇ ನೋಡಿ ಕಂಪ್ಲೀಟ್ ಡಿಟೈಲ್ಸ್..!
2014ರಲ್ಲಿ ಲಾಂಚ್:

2014ರಲ್ಲಿ ಲಾಂಚ್:

ಶಿಯೋಮಿ Mi ಪ್ಯಾಡ್ 2014ರಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಇದು ಆಪಲ್ ಬಳಕೆದಾರಿರರನ್ನು ಕನಪ್ಯೂಸ್ ಮಾಡುತ್ತಿದ್ದು, ಇದರಿಂದಾಗಿ ತನ್ನ ಬ್ರಾಂಡ್‌ಗೆ ಹೊಡೆತವಾಗುತ್ತಿದೆ ಎಂದು ಆಪಲ್ ದೂರು ದಾಖಲಿಸಿತ್ತು. ಇದಲ್ಲದೇ Mi ಪ್ಯಾಡ್ ನೋಡಲು iಪ್ಯಾಡ್ ಮಾದರಿಯಲ್ಲಿಯೇ ಇದೆ ಎಂದು ಸಹ ತಿಳಿಸಿತ್ತು.

ಶಿಯೋಮಿಗೆ ಹೊಡೆತ:

ಶಿಯೋಮಿಗೆ ಹೊಡೆತ:

ಯುರೋಪಿಯನ್ ಜನರಲ್ ಕೋರ್ಟ್‌ ನಲ್ಲಿ ಹಿನ್ನಡೆ ಅನುಭವಿಸಿರುವ ಶಿಯೋಮಿ ಮುಂದಿನ ದಿನಗಳಲ್ಲಿ ಮೆಲ್ಮನವಿಯನ್ನು ಸಲ್ಲಿಸುವ ಅವಕಾಶವನ್ನು ಹೊಂದಿದ್ದರೂ ಸಹ ಭಾರೀ ಹೊಡೆತವವನ್ನು ತಿನ್ನಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi fails in EU trademark case against Apple. to kmow more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot