ಡ್ಯುಯಲ್ ಕ್ಯಾಮೆರಾ ಟ್ರೆಂಡ್ ಮುಗಿತು: ಶೀಘ್ರವೇ ತ್ರಿಪಲ್ ಲೈನ್ಸ್‌ ಕ್ಯಾಮೆರಾ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ...!

|

ವಿಶ್ವ ಮೊಬೈಲ್ ಮಾರುಕಟ್ಟೆಯ ದೈತ್ಯ ಕಂಪನಿಗಳಾದ ಸ್ಯಾಮ್‌ಸಂಗ್‌ ಮತ್ತು ಆಪಲ್‌ನೊಂದಿಗೆ ಮೂರನೇ ಸ್ಥಾನಕ್ಕೆ ಸೆಣೆಸಾಡುವ ಚೀನಾ ಮೂಲದ ಹುವಾವೆ ಕಂಪನಿಯೂ ಸ್ಮಾರ್ಟ್‌ಫೋನ್ ಇತಿಹಾಸದಲ್ಲಿಯೇ ಅತೀ ದೊಡ್ಡ ಸಾಹಸವನ್ನು ಮಾಡಲು ಮುಂದಾಗಿದೆ, ಈ ಮೂಲಕ ಸ್ಮಾರ್ಟ್‌ಫೋನ್ ಕ್ಯಾಮೆರಾ ಇತಿಹಾಸದಲ್ಲಿಯೇ ಹೊಸ ಭಾಷ್ಯವನ್ನು ಬರೆಯಲಿದೆ ಎನ್ನಲಾಗಿದೆ.

ಡ್ಯುಯಲ್ ಕ್ಯಾಮೆರಾ ಟ್ರೆಂಡ್ ಮುಗಿತು: ಶೀಘ್ರವೇ ತ್ರಿಪಲ್ ಲೈನ್ಸ್‌ ಕ್ಯಾಮೆರಾ

ಓದಿರಿ: ರೂ. 1,649ಕ್ಕೆ 4G ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ ಏರ್‌ಟೆಲ್: ಜಿಯೋ ಫೋನ್ ಕೇಳುವವರಿಲ್ಲ...!

ಹುವಾವೆ ಹೊಸದಾಗಿ P ಸರಣಿಯ ಟಾಪ್‌ಎಂಡ್ ಸ್ಮಾರ್ಟ್‌ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದ್ದು, ಈ ಸ್ಮಾರ್ಟ್‌ಫೋನ್‌ಗಳು ಸದ್ಯ ಮಾರುಕಟ್ಟೆಯ ಟ್ರೆಂಡ್ ಆಗಿರುವ ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ಮೀರಿಸುವಂತೆ ಟ್ರಿಪಲ್ ಲೆನ್ಸ್‌ ಕ್ಯಾಮೆರಾವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಇದಕ್ಕಾಗಿಯೇ ಕ್ಯಾಮೆರಾ ಕೃತಕ ಬುದ್ದಿಮತ್ತೆಯನ್ನು ಬಳಸಿಕೊಳ್ಳಲು ಮುಂದಾಗಿದೆ.

40MP ಯ ತ್ರಿಪಲ್ ಕ್ಯಾಮೆರಾ:

40MP ಯ ತ್ರಿಪಲ್ ಕ್ಯಾಮೆರಾ:

ಹುವಾವೆ ಲಾಂಚ್ ಮಾಡಲಿರುವ P ಸರಣಿಯ ಹುವಾಮೆ P11 ಟಾಪ್‌ಎಂಡ್ ಸ್ಮಾರ್ಟ್‌ಫೋನಿನಲ್ಲಿ 40 MP ಕ್ಯಾಮೆರಾವನ್ನು ಅಳವಡಿಸಲಾಗುತ್ತಿದ್ದು, ಇದರೊಂದಿಗೆ ಇದು ತ್ರಿಪಲ್ ಲೆನ್ಸ್ ಕ್ಯಾಮೆರಾವಾಗಿದ್ದು, ಸ್ಮಾರ್ಟ್‌ಫೋನ್ ಕ್ಯಾಮೆರಾ ಇತಿಹಾಸವನ್ನು ಬದಲಾಯಿಸಲಿದೆ ಎನ್ನಲಾಗಿದೆ.

ಹೈಬ್ರಿಡ್ ಜೂಮ್:

ಹೈಬ್ರಿಡ್ ಜೂಮ್:

ಒಟ್ಟು ಮೂರು ಲೈನ್ಸ್‌ಗಳನ್ನು ಈ ಹುವಾಮೆ P11 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಕಾಣಬಹುದಾಗಿದೆ. ಅಲ್ಲದೇ ಇದು 5X ಹೈಬ್ರಿಡ್ ಜೂಮ್ ಆಯ್ಕೆಯನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 24MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದೆ.

ಇದಕ್ಕಾಗಿಯೇ ಕೃತಕ ಬುದ್ದಿ ಮತ್ತೆ:

ಇದಕ್ಕಾಗಿಯೇ ಕೃತಕ ಬುದ್ದಿ ಮತ್ತೆ:

ಹುವಾಮೆ P11 ಸ್ಮಾರ್ಟ್‌ಫೋನಿನಲ್ಲಿ ಕ್ಯಾಮೆರಾಗಾಗಿಯೇ ಹೊಸದಾಗಿ ಕೃತಕ ಬುದ್ಧಿ ಮತ್ತೆಯನ್ನು ಕಾಣಬಹುದಾಗಿದೆ. ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿ ಹುವಾವೆ ಹೊಸ ಮಾದರಿಯ ಕೃತಕ ಬುದ್ಧಿ ಮತ್ತೆಯನ್ನು ನೀಡಲಾಗಿದೆ.

ಇದಕ್ಕಾಗಿ ಕಿರನ್ 970 ಪ್ರೋಸೆಸರ್:

ಇದಕ್ಕಾಗಿ ಕಿರನ್ 970 ಪ್ರೋಸೆಸರ್:

ಇದಲ್ಲದೇ ಹುವಾಮೆ P11 ಸ್ಮಾರ್ಟ್‌ಫೋನಿನಲ್ಲಿ ಹೊಸ ಮಾದರಿಯ ಕಿರನ್ 970 ಪ್ರೋಸೆಸರ್ ಅನ್ನು ಅಳವಡಿಸಿದೆ ಎನ್ನಲಾಗಿದೆ. ಇದು ಸದ್ಯದ ಬೆಸ್ಟ್ ಪ್ರೋಸೆಸರ್ ಮಾರುಕಟ್ಟೆಯಲ್ಲಿ ಲಭ್ಯವಿರುವುದು ಎನ್ನಲಾಗಿದೆ.

Best Mobiles in India

English summary
The Huawei P11 may feature a triple-lens 40MP camera setup and a 24MP selfie shooter. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X