Home
ಸುದ್ದಿಜಾಲ

ಶಿಯೋಮಿ ಫ್ಯಾನ್ ಫೆಸ್ಟಿವಲ್ 2023: ಈ ಎಲ್ಲಾ ಸ್ಮಾರ್ಟ್‌ಡಿವೈಸ್‌ಗಳಿಗೂ ಬೊಂಬಾಟ್‌ ಡಿಸ್ಕೌಂಟ್‌!

ಶಿಯೋಮಿ ಇಂಡಿಯಾ ಶಿಯೋಮಿ ಫ್ಯಾನ್ ಫೆಸ್ಟಿವಲ್ 2023 ಅನ್ನು ಘೋಷಣೆ ಮಾಡಿದ್ದು, ಇಂದಿನಿಂದ ಏಪ್ರಿಲ್ 11, 2023 ರವರೆಗೆ ಇರಲಿದೆ. ಈ ವೇಳೆ ಗ್ರಾಹಕರು ಭಾರೀ ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಸೇರಿದಂತೆ ವಿವಿಧ ಸ್ಮಾರ್ಟ್‌ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ. ಸಾಮಾನ್ಯ ಡಿಸ್ಕೌಂಟ್‌ನೊಂದಿಗೆ ಹಲವು ವಿಶೇಷವಾದ ಆಫರ್‌ಸಹ ಲಭ್ಯ ಇವೆ.

ಹೌದು, ಈ ವಿಶೇಷ ಆಫರ್‌ನಲ್ಲಿ ನೀವು ರೆಡ್ಮಿ 12C ಮತ್ತು ರೆಡ್ಮಿ ನೋಟ್‌ 12 ಸೇರಿದಂತೆ ವಿವಿಧ ಹೊಸ ಸ್ಮಾರ್ಟ್‌ಫೋನ್‌ಗಳನ್ನೂ ಖರೀದಿ ಮಾಡಬಹುದಾಗಿದ್ದು, ಇ- ಕಾಮರ್ಸ್ ಸೈಟ್‌ನಲ್ಲಿ ಈ ಹಿಂದೆ ಲಭ್ಯವಾಗುತ್ತಿದ್ದ ಡಿಸ್ಕೌಂಟ್‌ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಈ ನೀವು ಸ್ಮಾರ್ಟ್‌ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ತಡ ಯಾಕೆ, ಬನ್ನಿ ಯಾವೆಲ್ಲಾ ಸ್ಮಾರ್ಟ್‌ ಡಿವೈಸ್‌ಗಳು ಎಷ್ಟೆಲ್ಲಾ ಆಫರ್‌ ಪಡೆದಿವೆ ಎಂಬ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ.

ಶಿಯೋಮಿ ಫ್ಯಾನ್ ಫೆಸ್ಟಿವಲ್ 2023: ಈ ಎಲ್ಲಾ ಸ್ಮಾರ್ಟ್‌ಡಿವೈಸ್‌ಗಳಿಗೂ ಡಿಸ್ಕೌಂಟ್‌

ರೆಡ್ಮಿ 12C, ರೆಡ್ಮಿ ನೋಟ್‌ 12: ನೀವೇನಾದರೂ ರೆಡ್ಮಿ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಎಂದುಕೊಂಡಿದ್ದರೆ 500ರೂ. ಗಳ ವಿಶೇಷ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ರೆಡ್ಮಿ ನೋಟ್‌ 12 ಸ್ಮಾರ್ಟ್‌ಫೋನ್ ಖರೀದಿ ಮಾಡಲು ಮುಂದಾದರೆ ನೀವು 1,000ರೂ. ಗಳ ವಿಶೇಷ ರಿಯಾಯಿತಿ ಪಡೆದುಕೊಳ್ಳಬಹುದು. ಇವುಗಳನ್ನು ಮಿ, ಮಿ ಹೋಮ್‌, ಅಮೆಜಾನ್ ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ ಮೂಲಕ ಖರೀದಿ ಮಾಡಬಹುದು.

ಶಿಯೋಮಿ 13 ಪ್ರೊ: ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್‌ 79,999ರೂ. ಗಳ ಸಾಮಾನ್ಯ ದರ ಹೊಂದಿದ್ದು, ಈ ಆಫರ್‌ ನಲ್ಲಿ ನೀವು 71999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಮೂಲಕ 9000ರೂ. ಗಳನ್ನು ಉಳಿಸಬಹುದಾಗಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ ಬಲ ಹೊಂದಿದ್ದು, 120W ಸೌಲಭ್ಯದ ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಜೊತೆಗೆ ಲೈಕಾ-ಟ್ಯೂನ್ಡ್ ಕ್ಯಾಮೆರಾ ರಚನೆ ಇದರಲ್ಲಿದೆ.

ಸ್ಮಾರ್ಟ್‌ಟಿವಿಗೆ ಬಂಪರ್‌ ಆಫರ್‌: ಇನ್ನು ಸ್ಮಾರ್ಟ್‌ಟಿವಿಯಲ್ಲಿಯೂ ಭಾರೀ ಡಿಸ್ಕೌಂಟ್‌ ಘೋಷಣೆ ಮಾಡಲಾಗಿದ್ದು, ಅದರಂತೆ ಶೀಯೋಮಿ TV X50 ಟಿವಿಯನ್ನು 31,499ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದು. ಇದು 3,500ರೂ. ಗಳ ರಿಯಾಯಿತಿ ಪಡೆದಿದೆ. ಇದರೊಂದಿಗೆ ಶಿಯೋಮಿ TV 5A ಗೂ ಸಹ 2,300ರೂ. ಗಳ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಇದನ್ನು 11,699ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಟಿವಿಗಳು ಸುಧಾರಿತ ಇತ್ತೀಚಿನ ತಂತ್ರಜ್ಞಾನ ಹೊಂದಿವೆ.

ಶಿಯೋಮಿ ಫ್ಯಾನ್ ಫೆಸ್ಟಿವಲ್ 2023: ಈ ಎಲ್ಲಾ ಸ್ಮಾರ್ಟ್‌ಡಿವೈಸ್‌ಗಳಿಗೂ ಡಿಸ್ಕೌಂಟ್‌

ಶಿಯೋಮಿ ಪ್ಯಾಡ್‌ಗಳಿಗೂ ಡಿಸ್ಕೌಂಟ್‌: ಶಿಯೋಮಿ ಪ್ಯಾಡ್‌ 5 ಇದೀಗ 2,500ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ನೀವು 24,499ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ರೆಡ್ಮಿ ಪ್ಯಾಡ್‌‌ಗೆ 2,000ರೂ. ಗಳ ರಿಯಾಯಿತಿ ಘೋಷಣೆ ಮಾಡಲಾಗಿದ್ದು, 12,999ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದು. ಈ ರೆಡ್ಮಿ ಪ್ಯಾಡ್‌ ಅನ್ನು ಶಿಯೋಮಿಯು 2022 ರಲ್ಲಿ ಲಾಂಚ್‌ ಮಾಡಿದ್ದು, 3GB + 64 GB ವೇರಿಯಂಟ್‌ನಲ್ಲಿ ಲಭ್ಯವಿದೆ.

ಇತರೆ ಸ್ಮಾರ್ಟ್‌ಡಿವೈಸ್‌ಗಳು: ಇನ್ನು ಶೀಯೋಮಿಯ ಇತರೆ ಡಿವೈಸ್‌ಗಳಾದ ಶಿಯೋಮಿ ಸ್ಮಾರ್ಟ್ ಏರ್ ಫ್ರೈಯರ್ (3.5L) ಸಹ 3,000ರೂ. ಗಳ ಡಿಸ್ಕೌಂಟ್‌ ಪಡೆದುಕೊಂಡಿದ್ದು, 5,999ರೂ. ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಹಾಗೆಯೇ ರೆಡ್ಮಿ ಸ್ಮಾರ್ಟ್‌ ಬ್ಯಾಂಡ್‌ ಪ್ರೊ ಸ್ಮಾರ್ಟ್‌ವಾಚ್‌ಗೂ ಸಹ 2,000ರೂ. ಗಳ ರಿಯಾಯಿತಿ ನೀಡಲಾಗಿದ್ದು, ಈ ಮೂಲಕ ನೀವು 1,999ರೂ. ಗಳಿಗೆ ಖರೀದಿ ಕೊಂಡುಕೊಳ್ಳಬಹುದು.

ಶಿಯೋಮಿ ಫ್ಯಾನ್ ಫೆಸ್ಟಿವಲ್ 2023: ಈ ಎಲ್ಲಾ ಸ್ಮಾರ್ಟ್‌ಡಿವೈಸ್‌ಗಳಿಗೂ ಡಿಸ್ಕೌಂಟ್‌

ಇದರೊಂದಿಗೆ ಶಿಯೋಮಿ ನೋಟ್‌ಬುಕ್‌ ಪ್ರೊ120G ಲ್ಯಾಪ್‌ಟಾಪ್‌ಗೆ ಬರೋಬ್ಬರಿ 8,000ರೂ.ಗಳ ರಿಯಾಯಿತಿ ಲಭ್ಯವಾಗಿದ್ದು, ಈ ಮೂಲಕ ನೀವು 68,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಲ್ಯಾಪ್‌ಟಾಪ್‌ ಮೂಲ ದರ 76,999ರೂ. ಗಳಾಗಿದೆ. ಇದು ಇಂಟೆಲ್ 12ನೇ ಜನ್ i5 ಪ್ರೊಸೆಸರ್ ಬಲ ಹೊಂದಿದ್ದು, 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ನಿಂದ ಪ್ಯಾಕ್ ಆಗಿದೆ.

ಇದರೊಂದಿಗೆ ಕಂಪನಿಯು ಪ್ರತಿದಿನ ಮಧ್ಯಾಹ್ನ 12 ರಿಂದ ಸಂಜೆ 6 ರ ನಡುವೆ ವಿಶೇಷ ಬೆಲೆಯನ್ನೂ ಸಹ ನಿಗದಿ ಮಾಡಲಿದೆ. ನಿಗದಿ ಪಡಿಸಲಾದ ಸಮಯದಲ್ಲಿ ಒಂದು ಗಂಟೆಯವರೆಗೆ ಈ ಆಫರ್‌ ಇರಲಿದೆ. ಹಾಗೆಯೇ UNiDAYS ನಲ್ಲಿ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳು ಶಿಯೋಮಿ ಮತ್ತು ರೆಡ್ಮಿ ಡಿವೈಸ್‌ಗಳಲ್ಲಿ ಸ್ಟೂಡೆಂಟ್ ಪ್ಲಸ್ ಆಫರ್‌ಗಳನ್ನು ಪಡೆಯಬಹುದು.

Best Mobiles in India

English summary
Xiaomi India has announced the Xiaomi Fan Festival 2023. this sale starting from 6th April to 11th April 2023. During this sale consumers can avail of discounts on all smart device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+