Home
ಸುದ್ದಿಜಾಲ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಶಿಯೋಮಿಯಿಂದ ಗಿಫ್ಟ್‌!

ಟೋಕಿಯೊ ಒಲಿಂಪಿಕ್ಸ್ 2020ಗೆ ಅದ್ದೂರಿಯಾಗಿ ಮುಕ್ತಾಯವಾಗಿದೆ. ಈ ಕ್ರಿಡಾಕೂಟದಲ್ಲಿ ಪದಕ ಗೆದ್ದ ಪ್ರತಿಯೊಬ್ಬ ಭಾರತೀಯ ಕ್ರೀಡಾಪಟುವಿಗೆ ಶಿಯೋಮಿ ಕಂಪನಿಯು ತನ್ನ ಪ್ರಮುಖ ಮಿ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ ಅನ್ನು ಉಡುಗೊರೆಯಾಗಿ ನೀಡುವುದಾಗಿ ಶಿಯೋಮಿ ಭಾನುವಾರ ಘೋಷಿಸಿದೆ. ಸ್ಮಾರ್ಟ್ ಫೋನ್ ತಯಾರಕರು ಒಲಿಂಪಿಕ್ಸ್ ಪದಕ ಗೆಲ್ಲಲು ತೆಗೆದುಕೊಳ್ಳುವ ಛಲ ಮತ್ತು ಸಮರ್ಪಣೆಯನ್ನು ಗೌರವಿಸುತ್ತಾರೆ ಎಂದು ಶಿಯೋಮಿಯ ಭಾರತದ ಎಮ್‌ಡಿ ಮನು ಕುಮಾರ ಜೈನ್ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಎಲ್ಲಾ ಭಾರತೀಯ ಒಲಿಂಪಿಕ್ ಪದಕ ವಿಜೇತರಿಗೆ ವಿನಮ್ರವಾಗಿ ಮಿ 11 ಅಲ್ಟ್ರಾವನ್ನು ಉಡುಗೊರೆಯಾಗಿ ನೀಡುವುದಾಗಿ ಅವರು ಹೇಳಿದರು. ಸೂಪರ್ ಹೀರೋಗಳಿಗೆ ಸೂಪರ್ ಫೋನ್ ಎಂದಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಶಿಯೋಮಿಯಿಂದ ಗಿಫ್ಟ್‌!

ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತೀಯ ತಂಡದಿಂದ ಅತ್ಯುತ್ತಮ ಪ್ರದರ್ಶನ ಕಂಡಿತು. ಈ ಕ್ರಿಡಾಕೂಟದಲ್ಲಿ ನಮ್ಮ ರಾಷ್ಟ್ರವು ಒಟ್ಟು ಏಳು ಪದಕಗಳನ್ನು ಗೆದ್ದಿದ್ದು, 2012 ರ ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಆರು ಪದಕಗಳನ್ನು ಮೀರಿದೆ. ಒಲಿಂಪಿಕ್ಸ್ 2020 ರ ಈ ಕ್ರಿಡಾಕೂಟದಲ್ಲಿ ಜಾವೆಲಿನ್ ಥ್ರೋ ಎಸೆತಗಾರ 'ನೀರಜ್ ಚೋಪ್ರಾ' ಮೊದಲ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದರು. ಇದು ಒಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಮೊದಲ ಚಿನ್ನವಾಗಿದೆ.

ನೀರಜ್ ಚೋಪ್ರಾ, ಮೀರಾಬಾಯಿ ಚಾನು, ರವಿಕುಮಾರ್ ದಹಿಯಾ, ಲವ್ಲಿನಾ ಬೊರ್ಗೊಹೈನ್, ಪಿವಿ ಸಿಂಧು ಮತ್ತು ಭಜರಂಗ್ ಪುನಿಯಾ ಟೋಕಿಯೊದಲ್ಲಿ ಪದಕಗಳನ್ನು ಗೆದ್ದ ಇತರ ಅಥ್ಲೆಟಿಗಳು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಭಾರತ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಬಹುಮಾನಗಳನ್ನು ಘೋಷಿಸಿವೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಶಿಯೋಮಿಯಿಂದ ಗಿಫ್ಟ್‌!

ಶಿಯೋಮಿ ಈ ಎಲ್ಲಾ ಕ್ರೀಡಾಪಟುಗಳಿಗೆ ಮಿ 11 ಅಲ್ಟ್ರಾ ಫೋನ್‌ ಅನ್ನು ನೀಡುತ್ತದೆ. ಭಾರತೀಯ ಪುರುಷರ ಹಾಕಿ ತಂಡದ ಪ್ರತಿಯೊಬ್ಬ ಸದಸ್ಯರು ಕೂಡ ಮಿ 11X ಆದರೂ ಸ್ಮಾರ್ಟ್ ಫೋನ್ ಪಡೆಯುತ್ತಾರೆ ಎಂದು ಮನು ಕುಮಾರ ಜೈನ್ ದೃಢಪಡಿಸಿದರು. ಭಾರತೀಯ ಹಾಕಿ ತಂಡ 1980 ರ ನಂತರ ಈ ಕ್ರೀಡೆಯಲ್ಲಿ ಮೊದಲ ಬಾರಿಗೆ ಕಂಚಿನ ಪದಕ ಗೆದ್ದಿತು. ಹಾಗಾದರೇ ಶಿಯೋಮಿಯ ಮಿ 11 ಅಲ್ಟ್ರಾ ಫೋನ್ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಮಿ 11 ಅಲ್ಟ್ರಾ- ಡಿಸ್‌ಪ್ಲೇ ಹಾಗೂ ಪ್ರೊಸೆಸರ್‌
ಮಿ 11 ಅಲ್ಟ್ರಾ ಫೋನ್ 3,200× 1,440 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.81 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ E4 AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಹೊಂದಿದ್ದು, 120Hz ರೀಫ್ರೇಶ್‌ ರೇಟ್‌ ಪಡೆದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಹೊಂದಿದ್ದು, 8GB RAM + 256GB, 12GB RAM + 256GB ಆಯ್ಕೆಗಳನ್ನು ಒಳಗೊಂಡಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಶಿಯೋಮಿಯಿಂದ ಗಿಫ್ಟ್‌!

ಮಿ 11 ಅಲ್ಟ್ರಾ- ಕ್ಯಾಮೆರಾ ಹಾಗೂ ಬ್ಯಾಟರಿ

ಮಿ 11 ಅಲ್ಟ್ರಾ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 48 ಎಂಪಿ ಸೆನ್ಸಾರ್‌ ಬಲದಲ್ಲಿ ಇದೆ. ಹಾಗೂ ತೃತೀಯ ಕ್ಯಾಮೆರಾವು ಅತ್ಯುತ್ತಮ ಸೆನ್ಸಾರ್ ಬಲ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 20 ಎಂಪಿ ಸೆನ್ಸಾರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಮಿ 11 ಅಲ್ಟ್ರಾ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ.

Best Mobiles in India

English summary
Xiaomi Gifts A Mi 11 Ultra To Each Indian Athlete Who Won A Medal in Tokyo Olympics 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+