Home
ಸುದ್ದಿಜಾಲ

Xiaomi free health check-up:ನಿಮ್ಮ ಫೋನ್‌ನ ಡಿಸ್‌ಪ್ಲೇ, ಬ್ಯಾಟರಿ ಹಾಳಾಗಿದೆಯೇ? ಚಿಂತೆ ಯಾಕೆ ಉಚಿತ ಸರ್ವಿಸ್‌ ಲಭ್ಯ !

ಸ್ಮಾರ್ಟ್‌ಫೋನ್‌ಗಳನ್ನು ಇಂದು ಎಲ್ಲಾ ಸಮಯದಲ್ಲೂ ಬಳಕೆ ಮಾಡುತ್ತಿರುವ ಕಾರಣಕ್ಕೆ ಕೆಲವು ಸ್ಮಾರ್ಟ್‌ಫೋನ್‌ ಹಲವಾರು ತೊಂದರೆಗಳಿಗೆ ಒಳಗಾಗಿರುತ್ತದೆ. ಅಂದರೆ ಫೋನ್‌ನ ಡಿಸ್‌ಪ್ಲೇ ಸರಿಯಾಗಿ ಕೆಲಸ ಮಾಡದೆ ಇರಬಹುದು, ಅಥವಾ ಬ್ಯಾಟರಿ ತನ್ನ ಸಾಮರ್ಥ್ಯ ಕಳೆದುಕೊಂಡಿರಬಹುದು. ಇದೇ ರೀತಿಯ ಹಲವಾರು ಸಮಸ್ಯೆಗಳು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಎದುರಾಗುತ್ತವೆ.

ಹೌದು, ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಹೆಚ್ಚು ಬಳಕೆ ಮಾಡಿದಷ್ಟು ಹೆಚ್ಚಿನ ಒತ್ತಡ ಬೀಳುವುದರಿಂದಾಗಿ ಡಿಸ್‌ಪ್ಲೇ ಅಥವಾ ಬ್ಯಾಟರಿ ಸರಿಯಾಗಿ ಕೆಲಸ ಮಾಡದೆ ಇರಬಹುದು. ಈ ರೀತಿಯ ಸಮಸ್ಯೆ ಇದೆ ಎಂದು ಸುಮ್ಮನೆ ಚಿಂತೆಗೆ ಒಳಗಾಗಬೇಡಿ. ಅಥವಾ ಖರ್ಚು ಜಾಸ್ತಿ ಆಗುತ್ತದೆ ಎಂದೂ ಸಹ ಅಂದುಕೊಳ್ಳಬೇಡಿ. ಯಾಕೆಂದರೆ 10 ದಿನಗಳವರೆಗೆ ತಪಾಸಣೆಗೆ ಫೋನ್‌ ಅನ್ನು ಒಳಪಡಿಸಬಹುದಾಗಿದೆ.

ನಿಮ್ಮ ಫೋನ್‌ನ ಡಿಸ್‌ಪ್ಲೇ, ಬ್ಯಾಟರಿ ಹಾಳಾಗಿದೆಯೇ? ಉಚಿತ ಸರ್ವಿಸ್‌ ಲಭ್ಯ !

ಏನಿದು ಶಿಯೋಮಿಯ ಹೊಸ ಕೊಡುಗೆ?: ಈ ಹಿಂದೆ ಶಿಯೋಮಿ ಕೆಲವು ಸ್ಮಾರ್ಟ್‌ಫೋನ್‌ಗಳ ವಾರಂಟಿಯನ್ನು ಹೆಚ್ಚಿಗೆ ಮಾಡಿ ತನ್ನ ಬಳಕೆದಾರರ ಮುಖದಲ್ಲಿ ಸಂತಸ ಉಂಟಾಗುವಂತೆ ಮಾಡಿತ್ತು. ಇದೀಗ ಜೂನ್ 1 ರಿಂದ ಶಿಯೋಮಿ ತನ್ನ ಬೇಸಿಗೆ ಸೇವಾ ಶಿಬಿರವನ್ನು ಘೋಷಿಸಿದ್ದು(Xiaomi free health check-up), ಶಿಯೋಮಿ ಮತ್ತು ರೆಡ್ಮಿ ಬಳಕೆದಾರರು ಉಚಿತವಾಗಿ ತಮ್ಮ ಸ್ಮಾರ್ಟ್‌ಫೋನ್‌ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.

ಶಿಯೋಮಿ ಇಂಡಿಯಾ ತನ್ನ ಗ್ರಾಹಕರಿಗೆ ರಾಷ್ಟ್ರವ್ಯಾಪಿ ವಿಶೇಷ ಸೇವೆಯನ್ನು ಘೋಷಿಸಿದ್ದು, ಇದರ ಮೂಲಕ ಕಂಪನಿಯು ಫೋನ್ ಆರೋಗ್ಯ ತಪಾಸಣೆ, ಡಿವೈಸ್‌ ಸಾಫ್ಟ್‌ವೇರ್ ನವೀಕರಣಗಳು ಮತ್ತು ಇನ್ನೂ ಹೆಚ್ಚಿನ ಸ್ಮಾರ್ಟ್‌ಫೋನ್ ಸೇವೆಗಳನ್ನು ನೀಡುತ್ತಿದೆ. ಅದರಂತೆ ಈ ಪ್ರಕ್ರಿಯೆ ದೇಶಾದ್ಯಂತ 1000 ಶಿಯೋಮಿ ಅಧಿಕೃತ ಸೇವಾ ಕೇಂದ್ರಗಳಲ್ಲಿ ಜರುಗಲಿದ್ದು, ಜೂನ್ 10 ರವರೆಗೆ 10 ದಿನಗಳ ಕಾಲ ಈ ಶಿಬಿರವನ್ನು ಏರ್ಪಡಿಸಲಾಗಿದೆ.

ಈ ಕೊಡುಗೆ ಭಾಗವಾಗಿ ಈ ಸ್ಮಾರ್ಟ್‌ಫೋನ್‌ ಬಳಕೆದಾರರು 100 % ರಷ್ಟು ಉಚಿತ ಫೋನ್ ಆರೋಗ್ಯ ತಪಾಸಣೆ ಮತ್ತು ಬ್ಯಾಟರಿ ಬದಲಿ ಹಾಗೂ ಸಾಫ್ಟ್‌ವೇರ್ ನವೀಕರಣ ಸಿಗಲಿದ್ದು, ಕಾರ್ಮಿಕ ಶುಲ್ಕದಲ್ಲಿಯೂ ಸಹ ಶೇಕಡಾ 100% ರಿಯಾಯಿತಿ ಸೇರಿದಂತೆ ಹಲವಾರು ಪ್ರಯೋಜನ ಇದರಿಂದ ಲಭ್ಯವಾಗಲಿದೆ. ಹಾಗಿದ್ರೆ ಈ ಬೇಸಿಗೆ ಸೇವಾ ಶಿಬಿರದಲ್ಲಿ ಲಭ್ಯವಿರುವ ಎಲ್ಲಾ ಸೇವೆಗಳ ಪಟ್ಟಿಯನ್ನು ಗಮನಿಸೋಣ ಬನ್ನಿ.

ನಿಮ್ಮ ಫೋನ್‌ನ ಡಿಸ್‌ಪ್ಲೇ, ಬ್ಯಾಟರಿ ಹಾಳಾಗಿದೆಯೇ? ಉಚಿತ ಸರ್ವಿಸ್‌ ಲಭ್ಯ !

ಉಚಿತ ಫೋನ್ ಆರೋಗ್ಯ ತಪಾಸಣೆ: ಶಿಯೋಮಿ ಸಂಪೂರ್ಣ ಮತ್ತು ಸಮಗ್ರ ಸ್ಮಾರ್ಟ್‌ಫೋನ್ ತಪಾಸಣೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತದೆ. ಈ ಸೇವೆಯ ಅಡಿಯಲ್ಲಿ, ಬಳಕೆದಾರರು ತಮ್ಮ ಫೋನ್ ಅನ್ನು ಪರಿಶೀಲಿಸಬಹುದು ಮತ್ತು ಕಾರ್ಯಕ್ಷಮತೆ ಯಾವಮಟ್ಟಿಗೆ ಇದೆ ಎಂದು ಕಂಡುಕೊಳ್ಳಬಹುದು. ಇನ್ನು ಈ ತಪಾಸಣೆಯು ಫೋನ್‌ನ ಅತ್ಯುತ್ತಮ ಸ್ಥಿತಿಯನ್ನು ಖಾತರಿಪಡಿಸಲು ಬಳಕೆದಾರರ ಡಿವೈಸ್‌ನ ಕಾರ್ಯಚಟುವಟಿಕೆಗಳ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದಂತೆ.

ಕಾರ್ಮಿಕ ಶುಲ್ಕದ ಮೇಲೆ ಶೇಕಡಾ 100 % ರಿಯಾಯಿತಿ: ಈ ಶಿಯೋಮಿ ಸೇವಾ ಶಿಬಿರದ ಸಮಯದಲ್ಲಿ, ಎಲ್ಲಾ ಕಾರ್ಮಿಕ ಶುಲ್ಕಗಳನ್ನು ಸಹ ಮನ್ನಾ ಮಾಡಲಾಗುತ್ತಿದೆ. ಬಳಕೆದಾರರು ತಮ್ಮ ಡಿವೈಸ್ ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸರಿಪಡಿಸಲು ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ನಿಮ್ಮ ಜೇಬಿನಲ್ಲಿ ಒಂದು ರೂ.ಗಳು ಸಹ ಇಲ್ಲದೇ ಇದ್ದರೂ ಯಾವುದೇ ಸಮಸ್ಯೆ ಇಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ಅನ್ನು ರಿಪೇರಿ ಮಾಡಿ ಕೊಡಲಾಗುತ್ತದೆ.

ಉಚಿತ ಸಾಫ್ಟ್‌ವೇರ್ ಅಪ್‌ಡೇಟ್ ಸೇವೆ: ಕಂಪನಿಯು ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಸಾಫ್ಟ್‌ವೇರ್ ನವೀಕರಣಗಳ ಉಚಿತ ಇನ್‌ಸ್ಟಾಲ್‌ ಸೇವೆಯನ್ನೂ ಸಹ ನೀಡುತ್ತಿದೆ. ಯಾವುದೇ ಶುಲ್ಕಗಳಿಲ್ಲದೆ ಇತ್ತೀಚಿನ ಫೀಚರ್ಸ್‌ಗಳು ಮತ್ತು ಸುಧಾರಣೆಗಳಿಂದ ಬಳಕೆದಾರರು ಎಲ್ಲಾ ಪ್ರಯೋಜನಗಳನ್ನು ಪಡೆಯುವುದನ್ನು ಇದು ಖಚಿತಪಡಿಸಲಿದ್ದು, ಈ ಸೇವೆಯನ್ನು ಬಳಸುವ ಮೂಲಕ ಬಳಕೆದಾರರು ತಮ್ಮ ಡಿವೈಸ್‌ನಲ್ಲಿ ಹೊಸ ಅನುಭವ ಪಡೆದುಕೊಳ್ಳಬಹುದು.

ನಿಮ್ಮ ಫೋನ್‌ನ ಡಿಸ್‌ಪ್ಲೇ, ಬ್ಯಾಟರಿ ಹಾಳಾಗಿದೆಯೇ? ಉಚಿತ ಸರ್ವಿಸ್‌ ಲಭ್ಯ !

ಬ್ಯಾಟರಿ ರಿಪ್ಲೇಸ್‌ಮೆಂಟ್‌ನಲ್ಲಿ ಶೇಕಡಾ 50 % ರಿಯಾಯಿತಿ: ಇನ್ನು ಬ್ಯಾಟರಿ ಸಮಸ್ಯೆಗಳನ್ನು ಎದುರಿಸುತ್ತಿರುವ ಶಿಯೋಮಿ ಬಳಕೆದಾರರು 50 ಪ್ರತಿಶತದವರೆಗೆ ರಿಯಾಯಿತಿ ದರದಲ್ಲಿ ಬ್ಯಾಟರಿ ಬದಲಾವಣೆಯನ್ನು ಮಾಡಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಬಳಕೆದಾರರು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಮತ್ಯಾಕೆ ತಡ ನಿಮ್ಮ ಸಮೀಪದ ಶಿಯೋಮಿ ಸೇವಾ ಕೇಂದ್ರಕ್ಕೆ ಇಂದೇ ತೆರಳಿ ನಿಮ್ಮ ಫೋನ್ ನ ಆರೋಗ್ಯ ಪರೀಕ್ಷೆ ನಡೆಸಿ.

Best Mobiles in India

English summary
Xiaomi has increased the warranty of some smartphones to make its users happy. Now from June 1, Xiaomi has announced its Summer Service Camp, where Xiaomi and Redmi users can get their smartphone health checked for free.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+