Home
ಸುದ್ದಿಜಾಲ

ಹೊಸ Redmi A4 5G ಘೋಷಣೆ; ಈ 5G ಫೋನ್‌ ಅತೀ ಕಡಿಮೆ ಬೆಲೆ ಸಿಗಲಿದೆ!

ದೇಶಿಯ ಮೊಬೈಲ್‌ ಮಾರುಕಟ್ಟೆಯಲ್ಲಿ ಶಿಯೋಮಿ (Xiaomi) ಭಿನ್ನ ಮೊಬೈಲ್‌ಗಳ ಮೂಲಕ ತನ್ನದೇ ಸ್ಥಾನ ಪಡೆದಿದೆ. ಸಂಸ್ಥೆಯು ಭಾರತೀಯ ಮೊಬೈಲ್ ಕಾಂಗ್ರೆಸ್‌ನಲ್ಲಿ ಅಗ್ಗದ ಬೆಲೆಯಲ್ಲಿ ನೂತನ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡುವುದಾಗಿ ಪ್ರಕಟಿಸಿದ್ದು, ಅದುವೇ ರೆಡ್ಮಿ A4 5G (Redmi A4 5G) ಮೊಬೈಲ್. ಈ ಫೋನ್‌ ಸ್ನ್ಯಾಪ್‌ಡ್ರಾಗನ್‌ 4s (Snapdragon 4s) ಪ್ರೊಸೆಸರ್‌ ಸೌಲಭ್ಯ ಪಡೆದಿರುವುದಾಗಿ ಖಚಿತಪಡಿಸಿದೆ.

ಹೌದು, ಶಿಯೋಮಿ ಮೊಬೈಲ್‌ ಸಂಸ್ಥೆಯು ರೆಡ್ಮಿ A4 5G (Redmi A4 5G) ಮೊಬೈಲ್‌ ಅನ್ನು ಘೋಷಿಸಿದೆ. ಹೊಸದಾಗಿ ಮಾರುಕಟ್ಟೆಗೆ ಬರಲಿರುವ ಈ ಫೋನ್‌ ಸುಮಾರು 10000ರೂ. ಗಳ ಒಳಗೆ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದ್ದು, ಈ ಮೂಲಕ ಶಿಯೋಮಿ ಸಂಸ್ಥೆಯು 5G ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಮಾಡಿದೆ.

ಹೊಸ Redmi A4 5G ಘೋಷಣೆ; ಈ 5G ಫೋನ್‌ ಅತೀ ಕಡಿಮೆ ಬೆಲೆ ಸಿಗಲಿದೆ!

ರೆಡ್ಮಿ A4 5G (Redmi A4 5G) 50 ಮೆಗಾ ಪಿಕ್ಸಲ್‌ ಸಾಮರ್ಥ್ಯದ ಪ್ರಾಥಮಿಕ ಕ್ಯಾಮೆರಾ ರಚನೆ ಅನ್ನು ಒಳಗೊಂಡಿರಲಿದೆ. ಹಾಗೆಯೇ 8 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಅನ್ನು ಪಡೆದಿರಲಿದೆ. ಹಾಗಾದರೇ ಸದ್ಯದಲ್ಲೇ ಎಂಟ್ರಿ ಕೊಡಲಿರುವ ರೆಡ್ಮಿ A4 5G ಫೋನಿನ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ನೋಡೋಣ. ಮುಂದೆ ಓದಿರಿ.

ರೆಡ್ಮಿ A4 5G ನಿರೀಕ್ಷಿತ ಫೀಚರ್ಸ್‌

ರೆಡ್ಮಿ A4 5G ಫೋನ್‌ 6.52 ಇಂಚಿನ HD+ ಡಿಸ್‌ಪ್ಲೇ ಜೊತೆಗೆ ಉತ್ತಮ ಪಿಕ್ಸಲ್‌ ರೆಸಲ್ಯೂಶನ್‌ ಪಡೆದಿರಲಿದೆ. ಹಾಗೆಯೇ ಈ ಡಿಸ್‌ಪ್ಲೇಯು 90Hz ರಿಫ್ರೆಶ್ ರೇಟ್‌ ಸೌಲಭ್ಯವನ್ನು ಸಪೋರ್ಟ್‌ ಮಾಡಲಿದೆ. ಇದು ಗೇಮಿಂಗ್ ಮತ್ತು ವೀಡಿಯೊ ಪ್ಲೇಬ್ಯಾಕ್ಗಾಗಿ ಸುಗಮ ದೃಶ್ಯಗಳನ್ನು ಒದಗಿಸುತ್ತದೆ.

ರೆಡ್ಮಿ A4 5G ಫೋನ್‌ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 4s Gen 2 (Snapdragon 4s Gen 2) ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಇರಲಿದೆ. ಹಾಗೆಯೇ ಇದು 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಒಳಗೊಂಡಿರಲಿದೆ.

ರೆಡ್ಮಿ A4 5G ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿ ಇರಲಿದ್ದು, ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದಿರಲಿದೆ. ಇದರ ಜೊತೆಗೆ ಮುಂಭಾಗದಲ್ಲಿ ಸೆಲ್ಫಿಗಾಗಿ ಹಾಗೂ ವಿಡಿಯೋ ಕರೆಗಾಗಿ 8 8 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಕ್ಯಾಮೆರಾ ಒದಗಿಸಲಾಗುತ್ತದೆ.

ರೆಡ್ಮಿ A4 5G ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿರಲಿದ್ದು, ಇದಕ್ಕೆ ಅನುಗುಣವಾಗಿ 18W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಕೂಡಾ ಪಡೆದುಕೊಂಡಿದೆ. ಇನ್ನುಳಿದಂತೆ ಈ ಫೋನ್‌ ಬ್ಲೂಟೂತ್‌, ವೈ ಫೈ, NAVIC, 3.5mm ಆಡಿಯೋ ಜ್ಯಾಕ್‌,

ಹಾಗೆಯೇ ಸಂಸ್ಥೆಯು ರೆಡ್ಮಿ A3 ಮೊಬೈಲ್‌ 6.71 ಇಂಚಿನ ಹೆಚ್‌ಡಿ ಪ್ಲಸ್‌ ಐಪಿಎಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ 1650 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದೆ. ಮೀಡಿಯಾ ಟೆಕ್ ಹಿಲಿಯೊ G36 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದು ಆಂಡ್ರಾಯ್ಡ್ 13 (ಗೋ ಆವೃತ್ತಿ) ಬೆಂಬಲ ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ ಇದು 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುವುದು.

Best Mobiles in India

English summary
Xiaomi has announced the Redmi A4 5G Smartphone. Check What to expect, Price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+