Home
ಸುದ್ದಿಜಾಲ

Xiaomi ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್: ಏನೆಂದು ತಿಳಿಯಿರಿ!

ಭಾರತದಲ್ಲಿ ಶಿಯೋಮಿ (Xiaomi) ಕಂಪೆನಿಯ ಫೋನ್‌ಗಳಿಗೆ ಭಾರೀ ಬೇಡಿಕೆ ಇದೆ. ಈಗಾಗಲೇ ಕಂಪೆನಿಯಿಂದ ಸಾಕಷ್ಟು ಸುಧಾರಿತ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗಿದ್ದು, ಈ ನಡುವೆ ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಶಿಯೋಮಿಯು ಸಂತಸದ ಸುದ್ದಿ ಪ್ರಕಟಿಸಿದೆ.

ಹೌದು, ಶಿಯೋಮಿಯು ಆಯ್ದ ಫೋನ್‌ಗಳಿಗೆ 2 ವರ್ಷಗಳವರೆಗೆ ವಾರಂಟಿ ವಿಸ್ತರಣೆ ಮಾಡಿದೆ. ಈ ಮೂಲಕ ಶಿಯೋಮಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನ ಆಯಸ್ಸನ್ನು ಇನ್ನಷ್ಟು ವರ್ಷಗಳ ವರೆಗೆ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳಿಗೆ ಈ ಹೆಚ್ಚುವರಿ ವಾರಂಟಿ ಲಭ್ಯ?, ಯಾವೆಲ್ಲಾ ಘಟಕಗಳಿಗೆ ಈ ವಾರಂಟಿ ನೀಡಲಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನ ಓದಿರಿ.

Xiaomi ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್: ಏನೆಂದು ತಿಳಿಯಿರಿ!

ಶಿಯೋಮಿಯಿಂದ ಸಂತಸದ ವಿಷಯ: ಶಿಯೋಮಿ ಇಂಡಿಯಾ ಇತ್ತೀಚೆಗೆ ತಮ್ಮ ಫೋನ್ ಅನ್ನು MIUI ನ ಇತ್ತೀಚಿನ ಆವೃತ್ತಿಗೆ ಅಪ್‌ಟೇಟ್‌ ಮಾಡಿದ ನಂತರ ಹಾರ್ಡ್ ಬ್ರಿಕ್ಡ್,ಕ್ಯಾಮೆರಾ ಸಮಸ್ಯೆ, ಮದರ್‌ಬೋರ್ಡ್ ಸಮಸ್ಯೆ, ವೈ-ಫೈ ಸಮಸ್ಯೆಯನ್ನು ಪಡೆಯುವ ಆಯ್ದ ಮಾಡೆಲ್‌ಗಳಿಗೆ ವಾರಂಟಿಯನ್ನು 2 ವರ್ಷಗಳವರೆಗೆ ವಿಸ್ತರಿಸುವುದಾಗಿ ತಿಳಿಸಿದೆ. ಈ ಮೂಲಕ ಭಾರತದ ಉತ್ತಮ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿರುವ ಶಿಯೋಮಿಗೆ ಗ್ರಾಹಕರು ಇನ್ನಷ್ಟು ಹೆಚ್ಚಾಗಲಿದ್ದಾರೆ.

ಇನ್ನು ಶಿಯೋಮಿ ಭಾರತದ ನಂಬರ್ 1 ಬ್ರ್ಯಾಂಡ್ ಆಗಿದ್ದ ಸಂದರ್ಭದಲ್ಲಿ ಬಹುಪಾಲು ಗ್ರಾಹಕರು ಈ ಫೋನ್‌ಗಳ ಬಗ್ಗೆ ಹಿಂದು ಮುಂದು ನೋಡದೆ ಖರೀದಿ ಮಾಡುತ್ತಿದ್ದರು. ಯಾಕೆಂದರೆ ಆಕರ್ಷಕ ಫೀಚರ್ಸ್‌ ಹಾಗೂ ಉತ್ತಮ ಕಾರ್ಯಕ್ಷಮತೆಯ ಭರವಸೆಯೊಂದಿಗೆ ಕಡಿಮೆ ದರ ನಿಗದಿ ಮಾಡಲಾಗಿತ್ತು. ಆದರೆ, ಇದೀಗ ಶಿಯೋಮಿ ಭಾರತದಲ್ಲಿ ನಂ.1 ರಿಂದ ನಂ.3 ಸ್ಥಾನವನ್ನು ಪಡೆದುಕೊಂಡಿದೆ. ಇದಕ್ಕೆ ಕಾರಣ ಮದರ್‌ಬೋರ್ಡ್ ಡೆಡ್ / ಹಾರ್ಡ್ ಬ್ರಿಕ್ / ಕ್ಯಾಮೆರಾ ಡೆಡ್ / ವೈ-ಫೈ ಸಮಸ್ಯೆಗಳು.

ಈ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಗಮನಹರಿಸಿರುವ ಶಿಯೋಮಿ ಇತ್ತೀಚಿನ MIUI ಸಾಫ್ಟ್‌ವೇರ್‌ಗೆ ಫೋನ್‌ಗಳನ್ನು ನವೀಕರಿಸಲು ಅವಕಾಶ ನೀಡಿದೆ. ಈ ಬೆಳವಣಿಗೆ ಶಿಯೋಮಿಯ ಉಪ-ಬ್ರಾಂಡ್‌ ಆಗಿರುವ ಪೊಕೊ X3 ಪ್ರೊ ನೊಂದಿಗೆ ಇದು ಆರಂಭ ಆಗಿದೆ. ಈ ನಡುವೆ ಬಹುಪಾಲು ಶಿಯೋಮಿ ಫೋನ್‌ಗಳು ಕಡಿಮೆ ಅಂತರದಲ್ಲಿ ಡೆಡ್ ಆಗಿವೆ. ಕೆಲವು ರಿಪೇರಿಗೆ ಒಳಪಟ್ಟಿವೆ. ಫೋನ್ ವಾರಂಟಿಯಲ್ಲಿದ್ದರೂ ಸಹ ಸೇವಾ ಕೇಂದ್ರದಲ್ಲಿ ಹಣ ಕೇಳುವುದರಿಂದ ಇನ್ನೂ ಹಲವು ಫೋನ್‌ಗಳನ್ನು ರಿಪೇರಿ ಮಾಡಿಲ್ಲವಂತೆ.

Xiaomi ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್: ಏನೆಂದು ತಿಳಿಯಿರಿ!

ಈ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಮೂಲಕ ಜನರು ಶಿಯೋಮಿಗೆ ಬೆನ್ನು ತೋರಿಸಿ ಇತರೆ ಸ್ಮಾರ್ಟ್‌ಫೋನ್‌ ಕಂಪೆನಿಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಶಿಯೋಮಿ ತನ್ನದೇ ಆದ ರೀತಿಯಲ್ಲಿ ನಷ್ಟಕ್ಕೆ ಒಳಗಾಗುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಈಗ ಆಯ್ದ ಡಿವೈಸ್‌ಗಳಿಗೆ ಹೆಚ್ಚುವರಿ ವರ್ಷದ ಖಾತರಿಯನ್ನು ನೀಡಲು ಮುಂದಾಗಿದೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳಿಗೆ ಈ ಸೌಲಭ್ಯ ಎಂಬುದನ್ನು ತಿಳಿದುಕೊಳ್ಳಿ.

ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಫೋನ್ ಆಗಿ ಗುರುತಿಸಿಕೊಂಡಿರುವ ಫೋನ್‌ಗಳಿಗೆ ಮಾತ್ರ 2 ವರ್ಷಗಳವರೆಗೆ ವಾರಂಟಿ ವಿಸ್ತರಣೆ ಮಾಡಲಾಗಿದೆ. ಅಂದರೆ ರೆಡ್ಮಿ ನೋಟ್ 10, ರೆಡ್ಮಿ ನೋಟ್ 10 ಪ್ರೊ, ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ , ಪೊಕೊ X3 ಪ್ರೊ, ಮಿ 11 ಅಲ್ಟ್ರಾ ಫೋನ್‌ಗಳಿಗೆ ಈ ಸೇವೆ ಲಭ್ಯ ಆಗಲಿದೆ. ಈ ಸಂಬಂಧ ಶಿಯೋಮಿ ಇಂಡಿಯಾ ಹೊಸ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ವಾರಂಟಿ ಕ್ಲೈಮ್ ಮಾಡಲು ಷರತ್ತುಗಳೇನು?: ಶಿಯೋಮಿ ಹೆಚ್ಚುವರಿ ವರ್ಷದ ಖಾತರಿಯನ್ನು ನೇರವಾಗಿ ಪಡೆಯಬಹುದು ಎಂದುಕೊಂಡರೆ ನಿಮ್ಮ ನಂಬಿಕೆ ಹುಸಿಯಾಗುತ್ತದೆ. ಯಾಕೆಂದರೆ ಈ ಫೋನ್‌ಗಳಿಗೆ 1 ವರ್ಷದ ಈ ಹೆಚ್ಚುವರಿ ಖಾತರಿಯನ್ನು ಪಡೆಯಲು ಕೆಲವು ಷರತ್ತುಗಳು ಅನ್ವಯ ಆಗುತ್ತವೆ. ಆ ಷರತ್ತುಗಳೇನು? ಯಾವ ಫೋನ್‌ಗೆ ಯಾವ ಷರತ್ತುಗಳು ಅನ್ವಯ ಆಗುತ್ತವೆ ಎಂಬುದನ್ನು ತಿಳಿದುಕೊಳ್ಳಿ.

Xiaomi ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್: ಏನೆಂದು ತಿಳಿಯಿರಿ!

ನಾವು ಮೇಲೆ ಉಲ್ಲೇಖಿಸಿದ ಎಲ್ಲಾ ಫೋನ್‌ಗಳಿಗೆ ಎಲ್ಲಾ ರೀತಿಯ ವಾರಂಟಿ ಇರುವುದಿಲ್ಲ ಬದಲಾಗಿ ರೆಡ್ಮಿ ನೋಟ್‌ 10 ಸರಣಿ ಫೋನ್‌ಗಳಲ್ಲಿ ಸಿಸ್ಟಮ್ ಯುಐ ಪ್ರತಿಕ್ರಿಯಿಸುತ್ತಿಲ್ಲ ಎಂದರೆ ಮಾತ್ರ ವಾರಂಟಿ ಕ್ಲೈಮ್‌ ಮಾಡಬಹುದು ಹಾಗೂ ಸೆಲ್ಫಿ ಕ್ಯಾಮರಾ ಕೆಲಸ ಮಾಡದಿರುವ ಸಮಸ್ಯೆಗೂ ವಾರಂಟಿ ನೀಡಲಾಗಿದೆ. ಇದರೊಂದಿಗೆ ಪೊಕೊ X3 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ಪವರ್‌ ಆನ್ ಸಮಸ್ಯೆಗೆ ಮತ್ತು ಮಿ 11 ಅಲ್ಟ್ರಾದಲ್ಲಿ ವೈ-ಫೈ ಮತ್ತು ಮದರ್‌ಬೋರ್ಡ್ ಸಮಸ್ಯೆಯನ್ನು ಹೊಂದಿದ್ದರೆ ನೀವು ವಾರಂಟಿ ಕ್ಲೈಮ್ ಮಾಡಬಹುದಾಗಿದೆ.

Best Mobiles in India

English summary
Xiaomi has extended the warranty to 2 years for select phones. These phones include Redmi Note 10 Pro, Redmi Note 10 Pro Max, Poco X3 Pro, Mi 11 Ultra phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+