Home
ಸುದ್ದಿಜಾಲ

speaker: ಶಿಯೋಮಿಯಿಂದ ವಿಶೇಷವಾದ ಕಂಪ್ಯೂಟರ್ ಸ್ಪೀಕರ್ ಲಾಂಚ್‌! ಅದ್ಭುತ ಫೀಚರ್ಸ್‌, ಬೆಲೆ ಎಷ್ಟು?

ಶಿಯೋಮಿ ಸ್ಮಾರ್ಟ್‌ ಗ್ಯಾಜೆಟ್‌(Xiaomi smart gadget) ಮಾರುಕಟ್ಟೆಯಲ್ಲಿ ಆಗಾಗ್ಗೆ ಭರ್ಜರಿಯಾಗಿ ಸದ್ದು ಮಾಡುತ್ತಲೇ ಇರುತ್ತದೆ. ಈ ನಡುವೆ ವಿಶೇಷ ಸ್ಪೀಕರ್ ಅನ್ನು ಲಾಂಚ್‌ ಮಾಡಿದ್ದು, ಈ ಮೂಲಕ ಶಿಯೋಮಿ ಇನ್ನಷ್ಟು ಸದ್ದು ಮಾಡಲಿದೆ. ಈ ಡಿವೈಸ್‌ ಆರ್‌ಜಿಬಿ ಲೈಟ್ ಆಯ್ಕೆ ಪಡೆದಿದ್ದು, ಬಳಕೆದಾರರಿಗೆ ಭಿನ್ನ ಅನುಭವ ನೀಡಲಿದೆ.

ಹೌದು, ಶಿಯೋಮಿ ಇದೀಗ ಹೊಸ ತಂತ್ರಜ್ಞಾನದೊಂದಿಗೆ ವಿಭಿನ್ನ ರೀತಿಯ ರೆಡ್ಮಿ ಸ್ಪೀಕರ್ (Xiaomi Redmi computer speaker) ಅನ್ನು ಲಾಂಚ್‌ ಮಾಡಿದೆ. ಈ ಡಿವೈಸ್‌ ಕಂಪ್ಯೂಟರ್ ಗೆ ಬೆಂಬಲ ನೀಡಲಿದ್ದು, ಇದು ನಾಲ್ಕು-ಘಟಕ ಅಕೌಸ್ಟಿಕ್ ಕಾನ್ಫಿಗರೇಶನ್‌ನೊಂದಿಗೆ ಲಭ್ಯ ಇದೆ. ಹಾಗಿದ್ರೆ, ಇದರ ಇನ್ನಿತರೆ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಶಿಯೋಮಿಯಿಂದ ವಿಶೇಷವಾದ ಕಂಪ್ಯೂಟರ್ ಸ್ಪೀಕರ್ ಲಾಂಚ್‌! ಅದ್ಭುತ ಫೀಚರ್ಸ್‌..

ಶಿಯೋಮಿ ರೆಡ್ಮಿ ಕಂಪ್ಯೂಟರ್ ಸ್ಪೀಕರ್: ಈ ವಿಶೇಷ ಕಂಪ್ಯೂಟರ್ ಸ್ಪೀಕರ್ ಆರ್‌ಜಿಬಿ ಲೈಟಿಂಗ್ ಫೀಚರ್ಸ್‌ (RGB lighting features) ಅನ್ನು ಹೊಂದಿದ್ದು, ಸಿಲಿಂಡರಾಕಾರದ ವಿನ್ಯಾಸವನ್ನು ಪಡೆದುಕೊಂಡಿದೆ. ಗಮನಾರ್ಹವಾಗಿ, ಇದು ಅತ್ಯಂತ ತಲ್ಲೀನಗೊಳಿಸುವ ಆಡಿಯೊ ಅನುಭವವನ್ನು ನೀಡಲಿದ್ದು, ಇದಕ್ಕಾಗಿ ಗೋಲ್ಡನ್ ಇಯರ್ಸ್ ಪ್ಲಾಟ್‌ಫಾರ್ಮ್‌ನಿಂದ ಗುರುತಿಸಲ್ಪಟ್ಟಿದೆ. ಇದರೊಂದಿಗೆ ಮೆಶ್ ಫ್ಯಾಬ್ರಿಕ್ ಕವರ್‌ನೊಂದಿಗೆ ಪ್ಯಾಕ್‌ ಆಗಿದ್ದು, ಈ ಮೂಲಕ ದೀರ್ಘ ಕಾಲಿಕ ಬಾಳಿಕೆಯನ್ನು ನಿರೀಕ್ಷೆ ಮಾಡಬಹುದಾಗಿದೆ.

ವಿವರವಾಗಿ ಹೇಳುವುದಾದರೆ ಸ್ಪೀಕರ್ ಸ್ಲಿಮ್ ಆರ್‌ಜಿಬಿ ಫ್ರಂಟ್ ಲೈಟಿಂಗ್ ಸ್ಟ್ರಿಪ್‌ನೊಂದಿಗೆ ಕಾಣಿಸಿಕೊಂಡಿದ್ದು, ಇದು ಕಸ್ಟಮೈಸ್ ಮಾಡುವ ಆಯ್ಕೆಯೊಂದಿಗೆ ಬಂದಿದೆ. ಅಂದರೆ ನಿಮ್ಮ ಆಯ್ಕೆಯ ಬಣ್ಣವನ್ನು ಹೊಂದಿಸಲು ಈ ಸ್ಪೀಕರ್ ನಿಮಗೆ ಅನುಮತಿಸುತ್ತದೆ. ಇದರೊಂದಿಗೆ ಮಿಡ್‌ರೇಂಜ್ ಮತ್ತು ಹೈ-ಫ್ರೀಕ್ವೆನ್ಸಿ ಸೌಂಡ್ ಔಟ್‌ಪುಟ್ ಗುಣಮಟ್ಟವನ್ನು ನೀಡಲಿದ್ದು, ನೈಜ-ಸಮಯದ ಸೌಂಡ್‌ ಆಯ್ಕೆ ಮತ್ತು ಆರ್‌ಜಿಬಿ ಬಣ್ಣ ಬದಲಾಯಿಸುವ ಸಿಂಕ್‌ ತಂತ್ರಜ್ಞಾನ ಮಾತ್ರ ನಿಮ್ಮನ್ನು ಬೆರಗುಗೊಳಿಸದೇ ಇರದು.

ಶಿಯೋಮಿಯಿಂದ ವಿಶೇಷವಾದ ಕಂಪ್ಯೂಟರ್ ಸ್ಪೀಕರ್ ಲಾಂಚ್‌! ಅದ್ಭುತ ಫೀಚರ್ಸ್‌..

ಈ ಸ್ಪೀಕರ್ ಕಡಿಮೆ ಆವರ್ತನ ಕಾರ್ಯಕ್ಷಮತೆಗಾಗಿ ಡ್ಯುಯಲ್ ಪ್ಯಾಸಿವ್ ರೇಡಿಯೇಟರ್‌ ಫೀಚರ್ಸ್ (dual passive radiators) ಪಡೆದಿದ್ದು, ನಿಮ್ಮ ಕಂಪ್ಯೂಟರ್‌ನಲ್ಲಿ ಪ್ಲೇ ಆಗುವ ದೃಶ್ಯಗಳು ಮತ್ತು ಆಡಿಯೋಗೆ ಹೊಂದಿಕೆಯಾಗುವ ನೈಜ ಸಮಯದ ಧ್ವನಿ ಪಿಕ್ ಮತ್ತು ಬಣ್ಣ ಬದಲಾಯಿಸುವ ಸಿಂಕ್ ಅನ್ನು ಇದು ಬೆಂಬಲಿಸುತ್ತದೆ. ಈ ವಿಷಯಕ್ಕೇ ಇದು ಇತರೆ ಸ್ಪೀಕರ್‌ಗಳಿಗಿಂತ ಭಿನ್ನ ಎನಿಸಿಕೊಂಡಿದೆ.

ಅಂದರೆ ನಿಮ್ಮ ಕಂಪ್ಯೂಟರ್‌ನಲ್ಲಿ ಪ್ಲೇ ಆಗುವ ವಿಡಿಯೋ ಮತ್ತು ಆಡಿಯೋಗೆ ಪರಿಪೂರ್ಣವಾದ 16 ಕಲರ್‌ನ ಆರ್‌ಜಿಬಿ ಸ್ಟ್ರಿಪ್ ನೊಂದಿಗೆ ಇದು ಬಣ್ಣಗಳನ್ನು ಪ್ರತಿಬಿಂಬಿಸುತ್ತದೆ. ಇಷ್ಟೇ ಅಲ್ಲದೆ ಗೇಮಿಂಗ್, ಸಿನಿಮಾ ಸೇರಿದಂತೆ ಯಾವುದೇ ವಿಧದ ವೀಕ್ಷಣೆಯಲ್ಲೂ ಸಹ ಆರ್‌ಜಿಬಿ ಸ್ಟ್ರಿಪ್ ಲೈಟ್‌ ವಿಶೇಷ ಬಣ್ಣದ ಅನುಭವ ನೀಡಲಿದ್ದು, ಅತ್ಯುನ್ನತ ಗುಣಮಟ್ಟದ ಡಿವೈಸ್‌ ಎಂದು ಪ್ರಮಾಣೀಕರಿಸಲ್ಪಟ್ಟಿದೆ.

ಶಿಯೋಮಿಯಿಂದ ವಿಶೇಷವಾದ ಕಂಪ್ಯೂಟರ್ ಸ್ಪೀಕರ್ ಲಾಂಚ್‌! ಅದ್ಭುತ ಫೀಚರ್ಸ್‌..

ಈ ಸ್ಪೀಕರ್‌ ಯುಎಸ್‌ಬಿ-ಸಿ ಮತ್ತು ಯುಎಸ್‌ಬಿ-ಎ ಇಂಟರ್‌ಫೇಸ್‌ಗಳೊಂದಿಗೆ ಯುಎಸ್‌ಬಿ ಒನ್-ಲೈನ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, ಈ ಸ್ಪೀಕರ್‌ನಲ್ಲಿ ಮೈಕ್ ಆಯ್ಕೆ ಸಹ ನೀಡಲಾಗಿದೆ. ಈ ಮೂಲಕ ನೀವು ವಿಡಿಯೋ ಕರೆಯಲ್ಲಿ ತೊಡಗಬಹುದು. ಇದರೊಂದಿಗೆ ಬ್ಲೂಟೂತ್ ಆವೃತ್ತಿ 5.0 ಫೀಚರ್ಸ್ ಪಡೆದಿದ್ದು, 3.5 mm ಆಡಿಯೋ ಜ್ಯಾಕ್ ಸೌಲಭ್ಯದೊಂದಿಗೆ ಪ್ಯಾಕ್ ಆಗಿದೆ.

ಶಿಯೋಮಿ ರೆಡ್ಮಿ ಕಂಪ್ಯೂಟರ್ ಸ್ಪೀಕರ್ ಬೆಲೆ ಹಾಗೂ ಲಭ್ಯತೆ: ಸದ್ಯಕ್ಕೆ ಈ ಡಿವೈಸ್‌ ಚೀನಾದಲ್ಲಿ ಲಭ್ಯ ಇದೆ. ಇದಕ್ಕೆ ಚೀನಾದಲ್ಲಿ 199 ಯುವಾನ್ ನಿಗದಿಪಡಿಸಲಾಗಿದ್ದು, ಅಂದಾಜು ಭಾರತದಲ್ಲಿ 2,300 ರೂ. ಗಳ ಬೆಲೆ ನಿಗದಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಡಿವೈಸ್‌ ಅನ್ನು ಭಾರತದಲ್ಲಿ ಶೀಘ್ರವೇ ಲಾಂಚ್ ಮಾಡಲಾಗುತ್ತದೆ ಎನ್ನುವ ಮಾಹಿತಿ ಸಹ ತಿಳಿದುಬಂದಿದೆ.

Best Mobiles in India

English summary
Xiaomi has now launched a different type of Redmi computer speaker with new technology. This device will support the computer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+