ಶಿಯೋಮಿಯ ಈ ಏಳು ಜನಪ್ರಿಯ ಸ್ಮಾರ್ಟ್‌ ಟಿವಿಗಳ ಬೆಲೆಯಲ್ಲಿ ಏರಿಕೆ!

|

ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಟಿವಿ ಸರಣಿಗಳನ್ನು ಪರಿಚಯಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಶಿಯೋಮಿ ಕಂಪೆನ ನೂತನ ಸ್ಮಾರ್ಟ್‌ ಟಿವಿ ಮಾಡೆಲ್‌ಗಳು ಹೆಚ್ಚು ಆಕರ್ಷಕ ಲುಕ ಪಡೆದಿವೆ. ಆದರೆ ಸಂಸ್ಥೆಯು ಇದೀಗ ಕೆಲವು ಜನಪ್ರಿಯ ಸ್ಮಾರ್ಟ್‌ ಟಿವಿ ಮಾಡೆಲ್‌ಗಳ ಪ್ರೈಸ್‌ಟ್ಯಾಗ್‌ನಲ್ಲಿ ಹೆಚ್ಚಳ ಮಾಡಿದ್ದು, ಗ್ರಾಹಕರಿಗೆ ಶಾಕ್ ಅನಿಸಿದೆ.

ಸಂಸ್ಥೆಯ

ಹೌದು, ಶಿಯೋಮಿ ಸಂಸ್ಥೆಯ ತನ್ನ ಏಳು ಜನಪ್ರಿಯ ಸ್ಮಾರ್ಟ್‌ ಟಿವಿ ಮಾಡೆಲ್‌ಗಳ ಬೆಲೆಯಲ್ಲಿ ಈಗ 3,000ರೂ. ವರೆಗೂ ಏರಿಕೆ ಮಾಡಿದೆ. ಆ ಪೈಕಿ ಇತ್ತೀಚಿಗಷ್ಟೆ ಲಾಂಚ್ ಮಾಡಿರುವ ಶಿಯೋಮಿಯ Horizon ಎಡಿಷನ್‌ ಸೇರಿದಂತೆ, ಮಿ ಟಿವಿ 4A ಪ್ರೊ ಮತ್ತು ಮಿ ಟಿವಿ 4X ಸರಣಿಯ ಸ್ಮಾರ್ಟ್‌ ಟಿವಿಗಳು ಬೆಲೆ ಏರಿಕೆ ಕಂಡ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿವೆ. ಈ ಬಗ್ಗೆ ಶಿಯೋಮಿ ಅಧಿಕೃತ ಹೇಳಿಗೆ ನೀಡಿಲ್ಲ. ಆದರೆ ಪ್ರಮುಖ ಇ-ಕಾಮರ್ಸ್ ತಾಣಗಳು ಬೆಲೆಯಲ್ಲಿ ಬದಲಾವಣೆ ಮಾಡಿವೆ.

32 ಇಂಚಿನ ಮಾಡೆಲ್‌ ಫೀಚರ್ಸ್‌

32 ಇಂಚಿನ ಮಾಡೆಲ್‌ ಫೀಚರ್ಸ್‌

ಮಿ ಟಿವಿ 4A ಹರೈಸನ್ ಆವೃತ್ತಿಯ 32 ಇಂಚಿನ ಸ್ಮಾರ್ಟ್‌ಟಿವಿ 1,368x768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಎಚ್‌ಡಿ ರೆಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಟಿವಿ 20D ಸ್ಟಿರಿಯೊ ಸ್ಪೀಕರ್‌ಗಳನ್ನ ಹೊಂದಿದ್ದು, ಡಿಟಿಎಸ್-ಎಚ್‌ಡಿ ಸರೌಂಡ್ ಸೌಂಡ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಕ್ವಾಡ್‌-ಕೋರ್‌ ಪ್ರೊಸೆಸರ್‌ ಅನ್ನು ಹೊಂದಿದ್ದು, ಇದು ಪ್ಯಾಚ್‌ವಾಲ್ ಇಂಟರ್‌ಪೇಸ್‌ ಜೊತೆಗೆ ಆಂಡ್ರಾಯ್ಡ್ ಟಿವಿ 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಮಾಲಿ -450 GPU ಮತ್ತು 1GB RAM ಅನ್ನು ಹೊಂದಿದ್ದು, ಇದು 8GB ಆನ್‌ಬೋರ್ಡ್ ಸ್ಟೋರೇಜ್‌ ಅನ್ನು ಹೊಂದಿದೆ. ಸದ್ಯ ಈ ಮಾಡೆಲ್‌ನ ಆರಂಭಿಕ ಬೆಲೆ 15,999ರೂ. ಆಗಿದೆ.

43 ಇಂಚಿನ ಆವೃತ್ತಿಯ ಮಾಡೆಲ್‌ ಫೀಚರ್ಸ್‌

43 ಇಂಚಿನ ಆವೃತ್ತಿಯ ಮಾಡೆಲ್‌ ಫೀಚರ್ಸ್‌

ಮಿ ಟಿವಿ 4A ಹರೈಸನ್ ಆವೃತ್ತಿಯ 43 ಇಂಚಿನ ಮಾದರಿಯು 1,920x1,080 ಪಿಕ್ಸೆಲ್‌ಗಳ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿರುವ ಫುಲ್-ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ 43-ಇಂಚಿನ ಆಯ್ಕೆಯು 32-ಇಂಚಿನ ಆವೃತ್ತಿಯ ಫಿಚರ್ಸ್ಗಳನ್ನೇ ಹೊಂದಿದೆ. 43 ಇಂಚಿನ ಮಿ ಟಿವಿ 4A ಹರೈಸನ್ ಆವೃತ್ತಿಯಲ್ಲಿ ಒಂದೇ, ಕ್ವಾಡ್-ಕೋರ್ ಪ್ರೊಸೆಸರ್, 1GB RAM ಮತ್ತು 8GB ಸ್ಟೋರೇಜ್‌ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಕೂಡ ಆಂಡ್ರಾಯ್ಡ್ ಟಿವಿ 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸ್ಟ್ಯಾಂಡರ್ಡ್ ವೈ-ಫೈ, ಬ್ಲೂಟೂತ್, ಎಚ್‌ಡಿಎಂಐ, ಯುಎಸ್‌ಬಿ, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಈ ಆವೃತ್ತಿಯ ಬೆಲೆಯು 24,999ರೂ. ಆಗಿದೆ.

ಬ್ಲೂಟೂತ್

ಶಿಯೋಮಿಯ ಕಂಪನಿಯ ಎಲ್ಲ ಸ್ಮಾರ್ಟ್ ಟಿವಿಗಳು ಸಾಕಷ್ಟು ಸಾಮಾನ್ಯವಾಗಿದೆ. ಇವೆಲ್ಲವೂ ಸಂಪರ್ಕ ತಂತ್ರಜ್ಞಾನಗಳಾದ ವೈ-ಫೈ, ಬ್ಲೂಟೂತ್, ಕ್ರೋಮ್‌ಕಾಸ್ಟ್ ಮತ್ತು ಹೆಚ್ಚಿನದನ್ನು ಬೆಂಬಲಿಸಬಹುದು. ಇವೆಲ್ಲವುಗಳ ನಡುವೆ 4 ಎ ಹರೈಸನ್ ಆವೃತ್ತಿಯು ಮಾರುಕಟ್ಟೆಗೆ ಇತ್ತೀಚಿನ ಪ್ರವೇಶವಾಗಿದ್ದು, ಬಳಕೆದಾರರಿಗೆ 178 ಡಿಗ್ರಿ ವೀಕ್ಷಣಾ ಕೋನವನ್ನು ನೀಡುತ್ತದೆ ಮತ್ತು ವಿವಿದ್ ಪಿಕ್ಚರ್ ಎಂಜಿನ್‌ನೊಂದಿಗೆ ಬರುತ್ತದೆ.

Best Mobiles in India

English summary
Xiaomi has increased the prices of seven Smart TVs in India in the Mi TV Horizon Edition, Mi TV 4A Pro and Mi TV 4X series.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X