Xiaomi: ಈ ಡಿವೈಸ್‌ಗಳಿಗೆ ಈಗಿನಿಂದಲೇ ಹೈಪರ್‌ಓಎಸ್ ರೋಲ್‌ಔಟ್! ನಿಮ್ಮ ಫೋನ್‌ಗೂ ಲಭ್ಯವೇ ಪರಿಶೀಲಿಸಿ
ಭಾರತದಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳು (Xiaomi smartphone) ಕಡಿಮೆ ದರದಲ್ಲಿ ಅತ್ಯುತ್ತಮ ಫೀಚರ್ಸ್ ಅನ್ನು ನೀಡಲಿದ್ದು, ಈ ಮೂಲಕ ಜನರು ಇವುಗಳನ್ನು ಭಾರೀ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಅದರಂತೆ ಈಗ ಯಾರೆಲ್ಲಾ ಶಿಯೋಮಿ ಫೋನ್‌ಗಳನ್ನು ಬಳಕೆ ಮಾಡುತ್ತಿದ್ದಾರೋ ಅವರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಹೌದು, ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಇನ್ಮುಂದೆ ಹೊಸ ರೂಪ ಪಡೆದುಕೊಳ್ಳಲಿವೆ. ಅಂದರೆ ಬಳಕೆದಾರರಿಗೆ ವಿಶೇಷವಾದ ಅನುಭವ ನೀಡಲಿವೆ. ಅಲ್ಲದೆ ಹೈಪರ್‌ಓಎಸ್‌ನೊಂದಿಗೆ (HyperOS) ಕಾರ್ಯಕ್ಷಮತೆ ಮತ್ತು ಸ್ಟೋರೇಜ್ ಅನ್ನು ಹೆಚ್ಚಿಸುವ ಗುರಿಯನ್ನು ಶಿಯೋಮಿ ಹೊಂದಿದ್ದು, ಡಿವೈಸ್‌ಗಳಾದ್ಯಂತ ಏಕೀಕೃತ ಇಂಟರ್ಫೇಸ್, ಉತ್ತಮ ಬಹುಕಾರ್ಯದ ಪ್ರಯೋಜನ ನೀಡಲಿದೆ. ಹಾಗಿದ್ರೆ, ಬನ್ನಿ ಈ ನವೀಕರಣ ಯಾವೆಲ್ಲಾ ಡಿವೈಸ್‌ಗಳಿಗೆ ಲಭ್ಯ, ಹೊಸ ಫೀಚರ್ಸ್ ಯಾವುವು ಅನ್ನೋ ಮಾಹಿತಿಯನ್ನು ತಿಳಿಯೋಣ.

ಶಿಯೋಮಿ ಹೈಪರ್‌ಓಎಸ್: ಭಾರತದಲ್ಲಿನ ಹೈಪರ್‌ಓಎಸ್ ಅಪ್‌ಡೇಟ್ ಪಡೆಯುವ ಡಿವೈಸ್‌ಗಳಲ್ಲಿ ಪ್ರಮುಖವಾಗಿ ಶಿಯೋಮಿ 11 ಅಲ್ಟ್ರಾ , ಶಿಯೋಮಿ 11T ಪ್ರೊ , ಮಿ 11X (Xiaomi 11 Ultra, Xiaomi 11T Pro, Mi 11X) ಸೇರಿದಂತೆ ಅನೇಕ ಫೋನ್‌ಗಳು ಇವೆ. ಇನ್ನು ಶಿಯೋಮಿ ಕಳೆದ ವರ್ಷ ತನ್ನ ಹೈಪರ್‌ಓಎಸ್ ಯುಐ ಅಪ್‌ಗ್ರೇಡ್ ಅನ್ನು ಅನಾವರಣಗೊಳಿಸಿದ್ದು, ಬಳಕೆದಾರರು ವರ್ಷಗಳಿಂದ ಒಗ್ಗಿಕೊಂಡಿದ್ದ MIUI ಇಂಟರ್ಫೇಸ್ ಅನ್ನು ಬದಲಾವಣೆ ಮಾಡುವ ಕೆಲಸ ಮಾಡುತ್ತಿದೆ.
ಪೊಕೊ X6 ಪ್ರೊ(Poco X6 Pro) ನಂತಹ ಕೆಲವು ಡಿವೈಸ್‌ಗಳು ಈಗಾಗಲೇ ಈ ಓಎಸ್ ಅನ್ನು ಪಡೆದುಕೊಂಡಿವೆ. ಇದರ ಜೊತೆಗೆ ಶಿಯೋಮಿ 13 ಪ್ರೊ ಮತ್ತು ಶಿಯೋಮಿ ಪ್ಯಾಡ್ 6(Xiaomi 13 Pro and Xiaomi Pad 6) ನಂತಹ ಇತರ ಡಿವೈಸ್‌ಗಳು ಮೊದಲ ಹಂತದ ನವೀಕರಣವನ್ನು ಪಡೆದುಕೊಂಡಿವೆ. ಇಷ್ಟೇ ಅಲ್ಲದೆ ಜನವರಿ, ಮಾರ್ಚ್‌ನಲ್ಲಿ ಎರಡನೇ ಹಂತದ ರೋಲ್‌ಔಟ್ ಆರಂಭ ಆಗಿದ್ದು, ಅದರಲ್ಲಿ ರೆಡ್ಮಿ ನೋಟ್ 13 ಮತ್ತು ರೆಡ್ಮಿ ನೋಟ್ 12 ಸರಣಿಯಂತಹ (Redmi Note 13 and Redmi Note 12 series) ಡಿವೈಸ್‌ಗಳಿಗೆ ಈ ಸೌಲಭ್ಯ ನೀಡಲಾಗಿತ್ತು.

ಈ ನಡುವೆ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಹೈಪರ್‌ಓಎಸ್ ನವೀಕರಣವನ್ನು ಪಡೆಯುವ ಡಿವೈಸ್‌ಗಳ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ಈ ಲಿಸ್ಟ್‌ನಲ್ಲಿ ಕೆಲವು ಹಳೆಯ ಫೋನ್‌ಗಳನ್ನೂ ಸಹ ಕಾಣಬಹುದಾಗಿದೆ. ಅಂದರೆ ರೆಡ್ಮಿ 13C ಮತ್ತು ಶಿಯೋಮಿ ಪ್ಯಾಡ್ 5 (Redmi 13C, Xiaomi Pad 5) ಡಿವೈಸ್‌ಗಳಿವೆ. ಹಾಗಿದ್ರೆ, ಬನ್ನಿ ಭಾರತದಲ್ಲಿ ಯಾವೆಲ್ಲಾ ಡಿವೈಸ್‌ಗಳಿಗೆ ಈ ರೋಲ್‌ಔಟ್ ಲಭ್ಯ ಇರಲಿದೆ ಅನ್ನೋದನ್ನು ಗಮನಿಸೋಣ.
ಶಿಯೋಮಿ 11 ಅಲ್ಟ್ರಾ, ಶಿಯೋಮಿ 11T ಪ್ರೊ, ಮಿ 11X, ಶಿಯೋಮಿ 11I ಹೈಪರ್ಚಾರ್ಜ್, ಶಿಯೋಮಿ 11 ಲೈಟ್, ಶಿಯೋಮಿ 11i, ಮಿ 10, ಶಿಯೋಮಿ ಪ್ಯಾಡ್ 5, ರೆಡ್ಮಿ K50i, ರೆಡ್ಮಿ 13C ಸರಣಿ, ರೆಡ್ಮಿ 12, ರೆಡ್ಮಿ 11 ಪ್ರೈಮ್ 5G ಮತ್ತು ರೆಡ್ಮಿ ನೋಟ್ 11 ಸರಣಿ ಫೋನ್‌ಗಳು ಮುಂದಿನ ದಿನಗಳಲ್ಲಿ ಅಪ್‌ಡೇಟ್ ಪಡೆಯಲಿವೆ.
ಈಗಾಗಲೇ ನವೀಕರಣವನ್ನು ಪಡೆದಿರುವ ಸ್ಮಾರ್ಟ್‌ಫೋನ್‌ಗಳಿವು: ಶಿಯೋಮಿ 13 ಪ್ರೊ, ಶಿಯೋಮಿ ಪ್ಯಾಡ್ 6, ರೆಡ್ಮಿ 12 5G, ರೆಡ್ಮಿ 12 ಸಿ, ರೆಡ್ಮಿ 11 ಪ್ರೈಮ್, ರೆಡ್ಮಿ ಪ್ಯಾಡ್, ಶಿಯೋಮಿ 12 ಪ್ರೊ, ರೆಡ್ಮಿ ನೋಟ್ 12 5G, ರೆಡ್ಮಿ ನೋಟ್ 12 Pro 5G, ರೆಡ್ಮಿ ನೋಟ್ 12 Pro+ 5G, ರೆಡ್ಮಿ ನೋಟ್ 13 5G, ರೆಡ್ಮಿ ನೋಟ್ 13 ಪ್ರೊ 5G ಮತ್ತು ರೆಡ್ಮಿ ನೋಟ್ 13 ಪ್ರೊ+ 5G.
ಹೈಪರ್‌ಓಎಸ್ ಎಂದರೇನು?: ಸಾಕಷ್ಟು ಜನರಿಗೆ ಇದರ ಬಗ್ಗೆ ತಿಳಿದಿರುತ್ತದೆ. ತಿಳಿದಿಲ್ಲದವರಿಗೆ, ಹೈಪರ್‌ಓಎಸ್ ಕಂಪನಿಯ ಸ್ಮಾರ್ಟ್ ಡಿವೈಸ್‌ಗಳ ವ್ಯಾಪ್ತಿಯಾದ್ಯಂತ ಬಳಸಬಹುದಾದ ಏಕೀಕೃತ ಇಂಟರ್ಫೇಸ್ ಅನ್ನು ರಚಿಸಲು ಶಿಯೋಮಿ ಮಾಡಿದ ಉತ್ತಮ ಪ್ರಯತ್ನವಾಗಿದೆ. ಈ ಹೈಪರ್‌ಓಎಸ್ ಅದರ ಹಿಂದಿನದಕ್ಕಿಂತ ಹೆಚ್ಚು ಉತ್ತಮವಾಗಿದೆ ಎಂದು ಶಿಯೋಮಿ ಹೇಳಿಕೊಂಡಿದೆ. ಅಲ್ಲದೆ ಬಳಕೆದಾರರು ತಮಗೆ ಲಭ್ಯವಿರುವ ಸ್ಟೋರೇಜ್ ಪ್ಲೇಸ್ ಅನ್ನು ಈ ಮೂಲಕ ಹೆಚ್ಚಳ ಮಾಡಿಕೊಳ್ಳಬಹುದಾಗಿದೆ.

ಇದಿಷ್ಟೇ ಅಲ್ಲದೆ ಹೈಪರ್ಓಎಸ್ ಕಾರ್ಯಕ್ಷಮತೆ, ಸುಧಾರಿತ ಅನಿಮೇಶನ್‌ಗಳು ಮತ್ತು ಉತ್ತಮ ಬಹು-ಕಾರ್ಯನಿರ್ವಹಣೆಯ ಕಾರ್ಯಕ್ಷಮತೆಯ ಹೆಚ್ಚಳಕ್ಕೆ ಇದು ಸಹಾಯ ಮಾಡಲಿದೆ ಎಂದು ಶಿಯೋಮಿ ಮಾಹಿತಿ ನೀಡಿದ್ದು, ಸ್ಮಾರ್ಟ್‌ಫೋನ್ ವಲಯದಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ. ಇದರಿಂದ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಳ್ಳುವ ತಂತ್ರವನ್ನು ಶಿಯೋಮಿ ರೂಪಿಸುತ್ತಿದೆ.


Click it and Unblock the Notifications








