ಶ್ಯೋಮಿಯ ಮೇಲಿನ ನಿರ್ಬಂಧವನ್ನು ಹಿಂಪಡೆದ ನ್ಯಾಯಾಲಯ

By Shwetha
|

ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿ ಶ್ಯೋಮಿಗೆ ದೆಹಲಿಯ ಹೈಕೋರ್ಟ್ ತಾತ್ಕಾಲಿಕ ತಡೆಯನ್ನು ವಿಧಿಸಿದೆ. ದೇಶದಲ್ಲಿ ಶ್ಯೋಮಿ ಫೋನ್‌ಗಳನ್ನು ಮಾರಾಟ ಮತ್ತು ಆಮದು ಮಾಡುವುದಕ್ಕಾಗಿ ಕೋರ್ಟ್ ನಿಷೇಧವನ್ನು ಹೇರಿದ ಬೆನ್ನಲ್ಲೇ ನ್ಯಾಯಾಲಯ ತಾತ್ಕಾಲಿಕ ತಡೆಯನ್ನು ವಿಧಿಸಿದೆ.

ಇದನ್ನೂ ಓದಿ: ಖರೀದಿಗೆ ಅರ್ಹವಾಗಿರುವ ಅತ್ಯುತ್ತಮ ಆಂಡ್ರಾಯ್ಡ್ ಫೋನ್ಸ್

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಪ್ರಕಾರ, ಕ್ವಾಲ್‌ಕಾಮ್ ಚಿಪ್‌ಸೆಟ್ ಉಳ್ಳ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಜನವರಿ 8 ರವರೆಗೆ ಕಂಪೆನಿ ಮಾರಾಟ ಮಾಡಬಹುದಾಗಿದೆ. ನಿಷೇಧಕ್ಕಿಂತ ಮುಂಚೆ ಕಂಪೆನಿ ದೇಶದಲ್ಲಿ ಬರೇ ಎರಡು ಫೋನ್‌ಗಳನ್ನು ಮಾರಾಟ ಮಾಡುತ್ತಿತ್ತು ಅವುಗಳು ರೆಡ್ಮೀ 1ಎಸ್ ಮತ್ತು ರೆಡ್ಮೀ ನೋಟ್. ಕ್ವಾಲ್‌ಕಾಮ್ ಚಿಪ್‌ಸೆಟ್ ಇದರಲ್ಲಿ ಚಾಲನೆಯಾಗುತ್ತಿತ್ತು ನಂತರ ಮೀಡಿಯಾ ಟೆಕ್ ಪ್ರೊಸೆಸರ್ ಅನ್ನು ಫೋನ್‌ನಲ್ಲಿ ಅಳವಡಿಸಲಾಗಿತ್ತು.

ಶ್ಯೋಮಿಯ ಮೇಲಿನ ನಿರ್ಬಂಧವನ್ನು ಹಿಂಪಡೆದ ನ್ಯಾಯಾಲಯ

ಹೆಚ್ಚುವರಿಯಾಗಿ ಶ್ಯೋಮಿ ಈ ಮುಂಚೆ ರೆಡ್ಮೀ ನೋಟ್ 4ಜಿಯನ್ನು ಲಾಂಚ್ ಮಾಡುವ ಯೋಜನೆಯಲ್ಲಿತ್ತು. ಇದರಲ್ಲೂ ಕ್ವಾಲ್‌ಕಾಮ್ ಪ್ರೊಸೆಸರ್ ಚಾಲನೆಯಾಗುತ್ತಿತ್ತು. ಇದರರ್ಥ ಕಂಪೆನಿ ಕನಿಷ್ಟ ಪಕ್ಷ ರೆಡ್ಮೀ 1ಎಸ್ ಮತ್ತು ರೆಡ್ಮೀ ನೋಟ್ 4ಜಿಯನ್ನು ಭಾರತದಲ್ಲಿ ಮಾರಾಟ ಮಾಡಬಹುದಾಗಿದೆ.

ತನ್ನ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪವರ್‌ನ ಎಮ್‌ಐ 4 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಲಿದೆಯೇ ಎಂಬುದು ಇನ್ನೂ ತಿಳಿದು ಬಂದಿಲ್ಲ. ನ್ಯಾಯಾಲಯ ಇಂತಹುದೇ ಇನ್ನೊಂದು ನಿರ್ಧಾರವನ್ನು ಜಾರಿಗೆ ತರುವವರೆಗೆ ಜನವರಿ 9 ರಿಂದ ಶ್ಯೋಮಿ ಫೋನ್ ಪುನಃ ನಿರ್ಬಂಧನೆಗೆ ಒಳಪಡಲಿದೆ.

Best Mobiles in India

English summary
This article tells about Chinese smartphone maker Xiaomi has been reportedly granted some reprieve by Delhi high court, which last week banned the company from selling and importing its phones in the country.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X