ಪವರ್‌ಫುಲ್‌ ಫೋನ್‌ ತಯಾರಿಕೆಯಲ್ಲಿ 'ಶಿಯೋಮಿ' ಬ್ಯುಸಿ!..ಶೀಘ್ರದಲ್ಲೇ ಲಾಂಚ್!

|

ಜನಪ್ರಿಯ ಶಿಯೋಮಿ ಕಂಪನಿಯು ಮುಖ್ಯವಾಗಿ ಭಾರತೀಯ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಅದಕ್ಕಾಗಿ ಕಡಿಮೆ ಪ್ರೈಸ್‌ಟ್ಯಾಗ್‌ನಲ್ಲಿ ಹಲವು ಉತ್ಪನ್ನಗಳನ್ನು ಇಲ್ಲಿಯೇ ಬಿಡುಗಡೆ ಮಾಡಿದೆ. ಈಗಾಗಲೇ ಹಲವು ಅತ್ಯುತ್ತಮ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್‌ ಪರಿಚಯಿಸಿ ಗ್ರಾಹಕರ ಮನಗೆದ್ದಿರುವ ಕಂಪನಿಯು ಈಗ ಗೇಮ್ಸ್‌ ಪ್ರಿಯರಿಗೆ ಒಂದೊಳ್ಳೆ ಪವರ್‌ಫುಲ್ ಗಿಫ್ಟ್ ಕೊಡಲು ಸಜ್ಜಾಗುತ್ತಿದೆ.

ಪವರ್‌ಫುಲ್‌ ಫೋನ್‌ ತಯಾರಿಕೆಯಲ್ಲಿ 'ಶಿಯೋಮಿ' ಬ್ಯುಸಿ!..ಶೀಘ್ರದಲ್ಲೇ ಲಾಂಚ್!

ಹೌದು, ಚೀನಾ ಮೂಲದ ಶಿಯೋಮಿ ಕಂಪನಿಯು ದೇಶಿಯ ಮಾರುಕಟ್ಟೆಗೆ ಪವರ್‌ಫುಲ್‌ ಗೇಮಿಂಗ್ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಈ ಫೋನ್‌ ಶೀಘ್ರದಲ್ಲೇ ಲಾಂಚ್‌ ಆಗಲಿರುವ ಹೊಸ ಗೇಮಿಂಗ್ ಸ್ಮಾರ್ಟ್‌ಫೋನ್ ಲೆಟೆಸ್ಟ್‌ 'ಮೀಡಿಯಾ ಟೆಕ್ ಹಿಲಿಯೊ G90T SoC' ಪ್ರೊಸೆಸರ್‌ ಶಕ್ತಿಯನ್ನು ಒಳಗೊಂಡಿರಲಿದ್ದು, ಗೇಮಿಂಗ್ ಅನುಭವವನ್ನು ಮತ್ತಷ್ಟು ರೋಚಕಗೊಳಿಸಲಿದೆ.

ಪವರ್‌ಫುಲ್‌ ಫೋನ್‌ ತಯಾರಿಕೆಯಲ್ಲಿ 'ಶಿಯೋಮಿ' ಬ್ಯುಸಿ!..ಶೀಘ್ರದಲ್ಲೇ ಲಾಂಚ್!

ಶಿಯೋಮಿಯ ಮುಂಬುರುವ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G90T SoC ಪ್ರೊಸೆಸರ್‌ ಇರಲಿದ್ದು, ಫೋನ್‌ ಕಾರ್ಯವೈಖರಿ ಹೆಚ್ಚು ವೇಗವಾಗಿರಲಿದೆ. ಅಲ್ಟಿಮೇಟ್ ಗೇಮಿಂಗ್ ಅನಿಸುವಂತೆ ಮಾಡಲಿದೆ. ಎಂದು ಭಾರತೀಯ ಶಿಯೋಮಿಯ ಮ್ಯಾನೇಜಿಂಗ್ ಡೈರೆಕ್ಟರ್ ಮನು ಕುಮಾರ ಜೈನ್‌ ಟ್ವಿಟ್‌ ಮೂಲಕ ಹೇಳಿದ್ದಾರೆ. ಹಾಗೆಯೇ ಪ್ರಸ್ತುತ ಗೇಮಿಂಗ್ ಕುರಿತಾದ ಅಂಕಿ ಅಂಶಗಳ ಬಗ್ಗೆಯೂ ಹೇಳಿದ್ದಾರೆ.

ಪವರ್‌ಫುಲ್‌ ಫೋನ್‌ ತಯಾರಿಕೆಯಲ್ಲಿ 'ಶಿಯೋಮಿ' ಬ್ಯುಸಿ!..ಶೀಘ್ರದಲ್ಲೇ ಲಾಂಚ್!

ಇನ್ನೊಂದು ಟ್ವಿಟ್‌ನಲ್ಲಿ ಮನು ಕುಮಾರ ಅವರು ಭಾರತದಲ್ಲಿ ಹೆಚ್ಚಾಗಿ ಗೇಮ್ಸ್‌ ಆಡುವವರ ಸಂಖ್ಯೆ ಸುಮಾರು 2.2 ಕೋಟಿ ಇದ್ದು, ಇವರಲ್ಲಿ ಬಹುತೇಕರು ಪ್ರತಿದಿನ 42ನಿಮಿಷ ಗೇಮ್‌ ಆಡುವುದಲ್ಲಿ ತಲ್ಲಿನರಾಗಿರುತ್ತಾರೆ ಎಂದಿದ್ದಾರೆ. ಕಳೆದ ಎರಡು ವರ್ಷದಲ್ಲಿ ಸ್ಮಾರ್ಟ್‌ಫೋನ್ ಗೇಮಿಂಗ್ ವಲಯ ಸಾಕಷ್ಟು ಲಾಭದತ್ತ ನಡೆದಿದೆ. ಈ ನಿಟ್ಟಿನಲ್ಲಿ ಶಿಯೋಮಿಯು ಗೇಮಿಂಗ್ ಸ್ಮಾರ್ಟ್‌ಫೋನ್ ಪರಿಚಯಿಸಲು ಸಜ್ಜಾಗುತ್ತಿದೆ.

ಓದಿರಿ : ಸೋನಿಯ A9G ಬ್ರಾವಿಯಾ 4K OLED ಆಂಡ್ರಾಯ್ಡ್‌ ಟಿವಿ ಲಾಂಚ್‌!.ಬೆಲೆ ದುಬಾರಿ! ಓದಿರಿ : ಸೋನಿಯ A9G ಬ್ರಾವಿಯಾ 4K OLED ಆಂಡ್ರಾಯ್ಡ್‌ ಟಿವಿ ಲಾಂಚ್‌!.ಬೆಲೆ ದುಬಾರಿ!

ಮೀಡಿಯಾ ಟೆಕ್ ಹಿಲಿಯೊ G90T SoC ಪ್ರೊಸೆಸರ್‌ 2.05GHz ಸಾಮರ್ಥ್ಯದಲ್ಲಿ ARM ಕಾರ್ಟೆಕ್ಸ್-A76 ಪವರ್‌ಕೋರ್ ಮತ್ತು ಕಾರ್ಟೆಕ್ಸ್-A55 ದಕ್ಷತೆಯ ಕೋರ್ ಹೊಂದಿರಲಿದೆ. ಇದರೊಂದಿಗೆ ಗ್ರಾಫಿಕ್ಸ್‌ಗಾಗಿ 800MHz ವೇಗದಲ್ಲಿ Mali G76 GPU ಇರಲಿದ್ದು, ಸುಮಾರು 10GB LPDDR4 ಸಾಮರ್ಥ್ಯದ RAM ಹೊಂದಿರಲಿದೆ. 21:9 ಅನುಪಾತದಲ್ಲಿ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಇರಲಿದ್ದು, ಪ್ರಾಥಮಿಕ ಕ್ಯಾಮೆರಾ 64ಎಂಪಿ ಸೆನ್ಸಾರ್‌ನಲ್ಲಿರಲಿದೆ.

ಓದಿರಿ : ಆಂಡ್ರಾಯ್ಡ್‌ ಫೋನಿನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ ಗೊತ್ತಾ?ಓದಿರಿ : ಆಂಡ್ರಾಯ್ಡ್‌ ಫೋನಿನಲ್ಲಿ ಜಾಹಿರಾತುಗಳನ್ನು ಬ್ಲಾಕ್ ಮಾಡುವುದು ಹೇಗೆ ಗೊತ್ತಾ?

Best Mobiles in India

English summary
The smartphone maker revealed that its upcoming gaming smartphone will be powered by the latest Helio G90T. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X