Home
ಸುದ್ದಿಜಾಲ

Xiaomi: ಗ್ರಾಹಕರಿಗೆ ಗುಡ್‌ನ್ಯೂಸ್‌ ಕೊಟ್ಟ ಶಿಯೋಮಿ! ಈ ಎಲ್ಲಾ ಫೋನ್‌ಗಳಿಗೆ ಹೈಪರ್‌ಓಎಸ್‌

ಶಿಯೋಮಿ ಸ್ಮಾರ್ಟ್‌ಫೋನ್‌ಗಳು (Xiaomi smartphone) ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ ಹಾಗೂ ಪ್ರೊಸೆಸರ್ ಮೂಲಕ ಬಹಳಷ್ಟು ಸದ್ದು ಮಾಡುತ್ತವೆ. ಅದರಂತೆ ಈಗಾಗಲೇ ಸಾಕಷ್ಟು ಹೊಸ ಫೋನ್‌ಗಳು ಸುಧಾರಿತ ಫೀಚರ್ಸ್‌ನೊಂದಿಗೆ ಕಾಣಿಸಿಕೊಂಡಿದ್ದು, ಭಾರತದಲ್ಲಂತೂ ಈ ಫೋನ್‌ಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ನಡುವೆ ಈ ಎಲ್ಲಾ ಶಿಯೋಮಿ ಬಳಕೆದಾರರಿಗೆ ಗುಡ್ ನ್ಯೂಸ್‌ ನೀಡಿದೆ.

ಹೌದು, ಶಿಯೋಮಿ ಇದೀಗ ತನ್ನ ವಿವಿಧ ಸರಣಿಯ ಫೋನ್‌ಗಳಿಗೆ ಹೈಪರ್‌ ಓಎಸ್‌ (HyperOS) ವಿಸ್ತರಣೆ ಮಾಡಲು ಮುಂದಾಗಿದೆ. ಈ ವಿಭಾಗದಲ್ಲಿ ಶಿಯೋಮಿ 12, ಶಿಯೋಮಿ 12S ಮತ್ತು ರೆಡ್ಮಿ K50 (Xiaomi 12, Xiaomi 12S and Redmi K50) ಸರಣಿ ಫೋನ್‌ಗಳು ಸೇರಿವೆ. ಇನ್ನು ಹೈಪರ್‌ಓಎಸ್‌ ಶಿಯೋಮಿಯ ಹೊಸ ಓಎಸ್‌ (OS) ಆಗಿದ್ದು, ಬಳಕೆದಾರರಿಗೆ ಭಿನ್ನ ಸೌಲಭ್ಯಗಳನ್ನು ನೀಡಲಿದೆ. ಹಾಗಿದ್ರೆ, ಯಾವೆಲ್ಲಾ ಫೋನ್‌ಗಳಲ್ಲಿ ಇದು ಲಭ್ಯ ಇದೆ?, ಈ ಓಎಸ್‌ನ ವಿಶೇಷತೆ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಗ್ರಾಹಕರಿಗೆ ಗುಡ್‌ನ್ಯೂಸ್‌ ಕೊಟ್ಟ ಶಿಯೋಮಿ! ಈ ಎಲ್ಲಾ ಫೋನ್‌ಗಳಿಗೆ ಹೈಪರ್‌ಓಎಸ್‌

ಶಿಯೋಮಿ ಹೈಪರ್‌ ಓಎಸ್‌: ಶಿಯೋಮಿ ತನ್ನ ಹೊಸ ಆಪರೇಟಿಂಗ್ ಸಿಸ್ಟಮ್ ಹೈಪರ್‌ ಓಎಸ್‌ ಅನ್ನು ಕಳೆದ ತಿಂಗಳು ಲಾಂಚ್‌ ಮಾಡಿತ್ತು. ಈ ಮೂಲಕ MIUI ಸಿಸ್ಟಮ್ ಅನ್ನು ಬದಲಾಯಿಸಿತ್ತು. ಅಲ್ಲದೆ ಎಲ್ಲಾ ಶಿಯೋಮಿ ಡಿವೈಸ್‌ಗಳನ್ನ ಒಂದೇ ಇಂಟಿಗ್ರೇಟೆಡ್ ಸಿಸ್ಟಮ್‌ಗೆ ಏಕೀಕರಿಸುವ ಉದ್ದೇಶವನ್ನು ಈ ಮೂಲಕ ಹೊಂದಿದ್ದು, ಅದರಂತೆ ಈ ಹೊಸ ಓಎಸ್‌ ಅನ್ನು ಶಿಯೋಮಿ 14 ಸರಣಿಯಲ್ಲಿ (Xiaomi 14 series) ಮೊದಲೇ ಸ್ಥಾಪಿಸಲಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ವಿಶಾಲ ಶ್ರೇಣಿಯ ಡಿವೈಸ್‌ಗಳಿಗೆ ಈ ಓಎಸ್‌ ಅನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಶಿಯೋಮಿ ಹೇಳಿಕೊಂಡಿತ್ತು. ಅದರಂತೆ ಇತ್ತೀಚಿನ ಬೆಳವಣಿಗೆಯಲ್ಲಿ, ಶಿಯೋಮಿ ಮುಂದಿನ ತಿಂಗಳು ಪ್ರಾರಂಭವಾಗುವ ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ವ್ಯಾಪಕ ಆಯ್ಕೆಗಳಿಗೆ ಈ ಹೊಸ ಓಎಸ್‌ ಅನ್ನು ನೀಡಲಾಗುತ್ತಿದೆ. ಅದರಲ್ಲಿ ಶಿಯೋಮಿ 12S ಸರಣಿ, ಶಿಯೋಮಿ 12 ಸರಣಿ, ರೆಡ್ಮಿ K50 ಸರಣಿ ಮತ್ತು ಶಿಯೋಮಿ ಪ್ಯಾಡ್‌ 5 ಪ್ರೊ (Xiaomi 12S series, Xiaomi 12 series, Redmi K50 series and Xiaomi Pad 5 Pro) ಸ್ಮಾರ್ಟ್‌ಫೋನ್‌ಗಳಿವೆ. ಈ ಸರಣಿಯಲ್ಲಿ ಒಟ್ಟಾರೆ 11 ಡಿವೈಸ್‌ಗಳಿವೆ.

ಗ್ರಾಹಕರಿಗೆ ಗುಡ್‌ನ್ಯೂಸ್‌ ಕೊಟ್ಟ ಶಿಯೋಮಿ! ಈ ಎಲ್ಲಾ ಫೋನ್‌ಗಳಿಗೆ ಹೈಪರ್‌ಓಎಸ್‌

ಯಾವೆಲ್ಲಾ ಫೋನ್‌ಗಳಲ್ಲಿ ಹೊಸ ಓಸ್ ಲಭ್ಯ?: ಈ ಹೊಸ ಓಎಸ್‌ ಅನ್ನು ಶಿಯೋಮಿ 12S ಅಲ್ಟ್ರಾ, ಶಿಯೋಮಿ 12S ಪ್ರೊ, ಶಿಯೋಮಿ 12S, ಶಿಯೋಮಿ12 ಪ್ರೊ, ಶಿಯೋಮಿ 12 ಪ್ರೊ ಡೈಮೆನ್ಸಿಟಿ ಆವೃತ್ತಿ, ಶಿಯೋಮಿ 12, ಶಿಯೋಮಿ ಪ್ಯಾಡ್ 5 ಪ್ರೊ 12.4, ರೆಡ್ಮಿ K50 ಅಲ್ಟ್ರಾ, ರೆಡ್ಮಿ K50 ಗೇಮಿಂಗ್ ಆವೃತ್ತಿ, ರೆಡ್ಮಿ K50 ಪ್ರೊ, ರೆಡ್ಮಿ K50 ಫೋನ್‌ಗಳು ಪಡೆಯಲಿವೆ ಅದಾಗ್ಯೂ ಶಿಯೋಮಿ ನಿಗದಿಪಡಿಸಲಾದ ಡಿವೈಸ್‌ಗಳ ಪಟ್ಟಿಯಿಂದ ಶಿಯೋಮಿ ಪ್ಯಾಡ್ 6 ಇರುವುದಿಲ್ಲ ಎಂದೂ ಸಹ ಹೆಳಲಾಗಿದೆ. ಆದರೆ ಪ್ಯಾಡ್ 5 ನಲ್ಲಿ ಈ ಸೌಲಭ್ಯ ಸಿಗಲಿದೆ ಎನ್ನಲಾಗಿದೆ.

ಹೈಪರ್ಓಎಸ್ ಎಂದರೇನು?: ಹೈಪರ್ಓಎಸ್ ತನ್ನ ಪ್ರಸ್ತುತ MIUI ವ್ಯವಸ್ಥೆಯನ್ನು ಬದಲಿಸಲು ಶಿಯೋಮಿ ಅಭಿವೃದ್ಧಿಪಡಿಸಿದ ಹೊಸ ಆಪರೇಟಿಂಗ್ ಸಿಸ್ಟಮ್ (Operating system) ಆಗಿದೆ. ಬಹು ಡಿವೈಸ್‌ ಆಪರೇಟಿಂಗ್ ಸಿಸ್ಟಂಗಳನ್ನು ನಿರ್ವಹಿಸುವ ಸವಾಲುಗಳನ್ನು ಪರಿಹರಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಹೈಪರ್ಓಎಸ್ ಕಡಿಮೆ ಮಟ್ಟದ ರಿಫ್ಯಾಕ್ಟರಿಂಗ್, ಇಂಟೆಲಿಜೆಂಟ್‌ ಸಂಪರ್ಕ, ಪೂರ್ವಭಾವಿ ಇಂಟೆಲಿಜೆನ್ಸ್ ಮತ್ತು ಅಂತ್ಯದಿಂದ ಅಂತ್ಯದ ಭದ್ರತೆಯ ಮೇಲೆ ಇದು ಕೆಲಸ ಮಾಡುತ್ತದೆ.

ಗ್ರಾಹಕರಿಗೆ ಗುಡ್‌ನ್ಯೂಸ್‌ ಕೊಟ್ಟ ಶಿಯೋಮಿ! ಈ ಎಲ್ಲಾ ಫೋನ್‌ಗಳಿಗೆ ಹೈಪರ್‌ಓಎಸ್‌

ಅದರಲ್ಲೂ ಈ ಹೈಪರ್ಓಎಸ್ ಅನ್ನು ಮಾನವ-ಕೇಂದ್ರಿತ ಓಎಸ್ ಆಗಿ ವಿನ್ಯಾಸಗೊಳಿಸಲಾಗಿದ್ದು, ಆಧುನಿಕ ವಿನ್ಯಾಸ ಭಾಷೆ ಮತ್ತು ಉಪಯುಕ್ತತೆಯನ್ನು ಹೆಚ್ಚಿಸಲು ನವೀನ ಫೀಚರ್ಸ್‌ ಆಯ್ಕೆಯನ್ನು ಈ ಫೋನ್‌ ಹೊಂದಿದೆ. ಇದು ತಡೆರಹಿತ ಡಿವೈಸ್‌ನ ಸ್ವಿಚಿಂಗ್, ಡೇಟಾ ಮತ್ತು ಆಪ್‌ಗಳಿಗೆ ರಿಮೋಟ್ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ ಮತ್ತು ಸ್ಪೀಚ್‌ ಉತ್ಪಾದನೆ, ಇಮೇಜ್ ಸರ್ಚ್‌ ಮತ್ತು ಕಲಾಕೃತಿ ರಚನೆಗಾಗಿ ಎಐ ಅನ್ನು ನಿಯಂತ್ರಣ ಮಾಡುವ ಕೆಲಸ ಮಾಡುತ್ತದೆ.

Best Mobiles in India

English summary
Now Xiaomi is ready to extend HyperOS to its various series of phones. This category includes Xiaomi 12, Xiaomi 12S and Redmi K50 series phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+