HyperOS: ಶಿಯೋಮಿಯಿಂದ ಹೊಸ ಹೈಪರ್‌ಓಎಸ್ಓ ! ಏನಿದರ ವಿಶೇಷತೆ? ಯಾವೆಲ್ಲಾ ಡಿವೈಸ್‌ಗಳಲ್ಲಿ ಲಭ್ಯ?
ಸ್ಮಾರ್ಟ್‌ಫೋನ್‌ಗಳಲ್ಲಿ ಓಎಸ್ (OS) ಪ್ರಮುಖ ಪಾತ್ರ ವಹಿಸುತ್ತದೆ. ಅದರಂತೆ ಈಗ ಶಿಯೋಮಿ (Xiaomi) ತನ್ನದೇ ಆದ ಹೊಸ ಓಎಸ್ ಬಗ್ಗೆ ಘೋಷಣೆ ಮಾಡಿದೆ. ಇದಕ್ಕೆ ಹೈಪರ್‌ಓಎಸ್ (HyperOS) ಎಂದು ಹೆಸರಿಸಲಾಗಿದ್ದು, ಇದು ಈ ಹಿಂದೆ ಶಿಯೋಮಿ ಫೋನ್‌ಗಳಲ್ಲಿ ಬಳಕೆ ಮಾಡಲಾಗುತ್ತಿದ್ದ ಓಎಸ್‌ಗಿಂತ ಭಿನ್ನವಾಗಿದೆ.
ಹೌದು, ಶಿಯೋಮಿ ಇದೀಗ ಹೊಸ ಹೈಪರ್‌ಓಎಸ್ ಅನ್ನು ಪರಿಚಯಿಸಿದ್ದು, ಈ ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಶಿಯೋಮಿ 14 ಸ್ಮಾರ್ಟ್‌ಫೋನ್ (Xiaomi 14 Smartphone) ಸರಣಿಯೊಂದಿಗೆ ಬಿಡುಗಡೆ ಮಾಡಿದೆ. ಸದ್ಯಕ್ಕೆ ಈ ಸ್ಮಾರ್ಟ್‌ಫೋನ್‌ಗಳು ಚೀನಾದಲ್ಲಿ ಮಾತ್ರ ಲಾಂಚ್ ಆಗಿವೆ. ಹಾಗಿದ್ರೆ, ಈ ಹೊಸ ಓಎಸ್‌ನ ವಿಶೇಷತೆ ಏನು?, ಭಾರತಕ್ಕೂ ಈ ವಿಶೇಷ ಓಎಸ್ ಪರಿಚಯವಾಗಲಿದೆಯಾ ಎಂಬ ಮಾಹಿತಿ ಇಲ್ಲಿದೆ ನೋಡಿ.

ಹೈಪರ್ಓಎಸ್ ಎಲ್ಲಾ ಶಿಯೋಮಿ ಡಿವೈಸ್‌ಗಳನ್ನು ಕಡಿಮೆ-ಮಟ್ಟದ ರಿಫ್ಯಾಕ್ಟರಿಂಗ್, ವೇಗದ ಸಂಪರ್ಕ, ಸಕ್ರಿಯ ಬುದ್ಧಿವಂತಿಕೆ ಮತ್ತು ಎಂಡ್‌ಟು ಎಂಡ್ ಫೀಚರ್ಸ್ ಸೇರಿದಂತೆ ಅನೇಕ ಸೌಲಭ್ಯ ಪಡೆದುಕೊಂಡಿದೆ. ಇನ್ನು ಈ ಹೊಸ ಓಎಸ್ ಈಗ ಅಸ್ತಿತ್ವದಲ್ಲಿರುವ MIUI ಗಿಂತ ಹಗುರ ಮತ್ತು ವೇಗವಾಗಿದೆ ಎಂದು ತಿಳಿದುಬಂದಿದೆ. ಅಂದರೆ ಇದರ ಫರ್ಮ್‌ವೇರ್ ಗಾತ್ರ 8.75GB ಆದರೆ MIUI ನ ಫರ್ಮ್‌ವೇರ್ ಗಾತ್ರ 13.09GB ಯಾಗಿದೆ.
ಇಲ್ಲಿದೆ ಹೊಸ ಓಎಸ್‌ನ ಪ್ರಮುಖ ವಿಶೇಷತೆ:
ಬಳಕೆದಾರ ಸ್ನೇಹಿ ಇಂಟರ್ಫೇಸ್: ಶಿಯೋಮಿ ಮಾರುಕಟ್ಟೆಯು ಕಳೆದ 13 ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಾ ಬಂದಿದೆ. ಈ ಕಾರಣಕ್ಕೆ 1 ಶತಕೋಟಿಗಿಂತ ಹೆಚ್ಚು ಜನರು ಜಾಗತಿಕವಾಗಿ ಕಂಪನಿಯೊಂದಿಗೆ ಸಂಬಂಧ ಹೊಂದಿರುವುದು ವಿಶೇಷ. ಅದರಲ್ಲೂ ಕಂಪನಿಯು 200 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರು ಮಾಡಿ ಪರಿಚಯಿಸಲಾಗಿದೆ. ಈ ನಡುವೆ ಪ್ರತಿ ಉತ್ಪನ್ನಕ್ಕೂ ಓಎಸ್ ಅನ್ನು ನಿರ್ವಹಿಸುವುದು ಕಂಪನಿಗೆ ಕಷ್ಟವಾಗಿತ್ತು.

ಇದನ್ನು ಗಮನದಲ್ಲಿಟ್ಟುಕೊಂಡು ಶಿಯೋಮಿ 2017 ರಲ್ಲಿ ಹೈಪರ್ ಓಎಸ್‌ನಲ್ಲಿ ಕೆಲಸ ಮಾಡಲು ಆರಂಭಿಸಿತ್ತು. ಕೊನೆಗೂ ಈಗ ಈ ಓಎಸ್ ಕಾರ್ಯಾರಂಭ ಮಾಡಿದೆ. ಇನ್ನು ಕಂಪನಿಯು ಹೊಸ ಓಎಸ್ ಅನ್ನು ಮಾನವ ಕೇಂದ್ರಿತ ಎಂದು ಬಣ್ಣಿಸಿದ್ದು, ಇದರಲ್ಲಿ ಕಂಪನಿಯು ನವೀನ ಫೀಚರ್ಸ್ ಆಯ್ಕೆಯನ್ನು ನೀಡಿದೆ. ಇದರ ಮೂಲಕ, ನೀವು ಸುಲಭವಾಗಿ ಡಿವೈಸ್‌ಗಳನ್ನು ಬದಲಾಯಿಸಲು, ರಿಮೋಟ್ ಪ್ರವೇಶ ಆಪ್‌ಗಳನ್ನು ಮತ್ತು ಎಐ ಫೀಚರ್ಸ್‌ಗಳನ್ನು ಈ ಮೂಲಕ ಬಳಕೆ ಮಾಡಬಹುದಾಗಿದೆ.
ಹೈಪರ್ಓಎಸ್ ಎಂಬುದು ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರಾಜೆಕ್ಟ್ (AOSP) ಆಧಾರಿತ ಹಗುರವಾದ ಮತ್ತು ಪರಿಣಾಮಕಾರಿ ಆಪರೇಟಿಂಗ್ ಸಿಸ್ಟಮ್ ಆಗಿದೆ. ವಿಷಯ ಏನೆಂದರೆ ಇದು ಗೂಗಲ್ ನ ಆಂಡ್ರಾಯ್ಡ್ ಸೇವೆಗಳ ಮೇಲೆ ಅವಲಂಬಿತವಾಗಿಲ್ಲ. ಈ ಮೂಲಕ ಕಂಪನಿಯು ತನ್ನದೇ ಆದ ಪ್ರಕಾರ ಅದನ್ನು ವಿನ್ಯಾಸಗೊಳಿಸಿದೆ. ಜೊತೆಗೆ ಈ ಓಎಸ್ ಅನ್ನು ಅಗ್ಗದ ಸ್ಮಾರ್ಟ್‌ಫೋನ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಬಳಕೆದಾರರು ಇದರಲ್ಲಿ ವಿಶೇಷ ಅನುಭವ ಪಡೆಯಬಹುದಾಗಿದೆ.
MIUI ಗೆ ಹೋಲಿಸಿದರೆ ಹೈಪರ್‌ಓಎಸ್ ಉತ್ತಮ ಸಂಪರ್ಕ, ಭದ್ರತೆ ಮತ್ತು ಹೊಸ ಫೀಚರ್ಸ್ ಅನ್ನು ನೀಡುತ್ತದೆ. ಇದು ವೇಗವಾಗಿ ಆಪ್‌ಗಳನ್ನ ಲೋಡ್ ಮಾಡುತ್ತದೆ, ಉತ್ತಮ ಬ್ಯಾಗ್ರೌಂಡ್ ಮೆಮೊರಿ ಧಾರಣ, ಕಡಿಮೆ ಡಿಸ್ಕ್ ಲೇಟೆನ್ಸಿ ಮತ್ತು ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೃದುವಾದ ಅನಿಮೇಷನ್ ಅನ್ನು ಈ ಓಎಸ್ ಹೊಂದಿದ್ದು, ಹೆಚ್ಚುವರಿಯಾಗಿ, ಇದು ಎಐ-ರಚಿತ ಪಠ್ಯ, ಫೋಟೋ-ಟು-ಟೆಕ್ಸ್ಟ್ ಕ್ಯಾಪ್ಚರ್, ಡೂಡಲ್-ಟು-ಪೇಂಟಿಂಗ್ ಪರಿವರ್ತನೆ, ಮತ್ತು ನೈಸರ್ಗಿಕ ಭಾಷೆಯ ಇಮೇಜ್ ಸರ್ಚ್ ಸೇರಿದಂತೆ ಮುಂತಾದ ಎಐ ಫೀಚರ್ಸ್ ಮೂಲಕ ಈ ಓಎಸ್ ಕೆಲಸ ಮಾಡಲಿದೆ.
ಯಾವೆಲ್ಲಾ ಡಿವೈಸ್‌ಗಳಲ್ಲಿ ಈ ಓಎಸ್ ಲಭ್ಯ?: ಈ ಹೊಸ ಓಎಸ್ ಟ್ಯಾಬ್ಲೆಟ್‌ಗಳು, ಸ್ಮಾರ್ಟ್ ಹೋಮ್ ಉತ್ಪನ್ನಗಳು ಮತ್ತು ಕಾರುಗಳಲ್ಲಿ ಬಳಕೆ ಆಗಲಿದೆ. ಕಂಪನಿಯು ಅಕ್ಟೋಬರ್ 26 ರಿಂದ ಚೀನಾದಲ್ಲಿ ಹೊಸ ಓಎಸ್‌ಗಾಗಿ ನೋಂದಣಿಯನ್ನು ಪ್ರಾರಂಭಿಸಿದ್ದು, ಡಿಸೆಂಬರ್‌ನಲ್ಲಿ ಅಧಿಕೃತವಾಗಿ ಇದು ಲಾಂಚ್ ಆಗಲಿದೆ. ಈ ಮೂಲಕ ಶಿಯೋಮಿ 14 ಮತ್ತು ಶಿಯೋಮಿ 14 ಪ್ರೊ ಫೋನ್‌ಗಳು, ರೆಡ್ಮಿ K60 ಅಲ್ಟ್ರಾ ಫೋನ್‌ಗಳು ಮತ್ತು ಶಿಯೋಮಿ ವಾಚ್ S3, ಶಿಯೋಮಿ ಪ್ಯಾಡ್ 6 ಮ್ಯಾಕ್ಸ್ 14, ಶಿಯೋಮಿ ಟಿವಿ S ಪ್ರೊ 65, ಶಿಯೋಮಿ ಟಿವಿ S ಪ್ರೊ 65, ಶಿಯೋಮಿ ಟಿವಿ S ಪ್ರೊ ಸೇರಿದಂತೆ ಇನ್ನೂ ಹತ್ತಾರು ಡಿವೈಸ್‌ಗಳಲ್ಲಿ ಈ ಓಎಸ್ ಲಭ್ಯ ಇರಲಿದೆ.

ಭಾರತದಲ್ಲಿ ಯಾವಾಗ ಲಭ್ಯ?
ಹೈಪರ್‌ಓಎಸ್ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಆದರೆ ಇದು ಆರಂಭದಲ್ಲಿ ಚೀನಾದಲ್ಲಿ ಶಿಯೋಮಿ 14 ಮತ್ತು ಶಿಯೋಮಿ 14 ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ (Xiaomi 14 and Xiaomi 14 Pro smartphones) ಲಭ್ಯ ಇದ್ದು, ಇನ್ನು ಮುಂದಿನ ದಿನಗಳಲ್ಲಿ ಮೇಲೆ ತಿಳಿಸಿದ ಡಿವೈಸ್‌ಗಳಲ್ಲಿ ಈ ಓಎಸ್ ಭಾರತದಲ್ಲೂ ಲಭ್ಯ ಆಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಮೂಲಕ ಶಿಯೋಮಿ ಸ್ಮಾರ್ಟ್‌ಫೋನ್ ವಲಯದಲ್ಲಿ ವಿಶೇಷವಾದ ಗುರುತಿಸಿಕೊಳ್ಳಲಿದೆ.


Click it and Unblock the Notifications








