ಶಿಯೋಮಿಯ ಹೊಸ ಸೇವೆ!..ಮರು ದಿನವೇ ನಿಮ್ಮ ಕೈ ಸೇರಲಿವೆ ಉತ್ಪನ್ನಗಳು!

|

ಶಿಯೋಮಿ ತನ್ನ ಅಧಿಕೃತ ವೆಬ್‌ತಾಣದಿಂದ (Mi.com e-commerce ) ಗ್ರಾಹಕರು ಉತ್ಪನ್ನಗಳನ್ನು ಆನ್‌ಲೈನ್‌ ಆರ್ಡರ್‌ ಮಾಡಿದರೇ ಮರುದಿನವೇ ಡೆಲಿವರಿ ನೀಡುವ ತನ್ನ 'ಗ್ಯಾರೆಂಟೆಡ್‌ ನೆಕ್ಸ್ಟ್‌ ಡೇ ಡೆಲಿವರಿ' (guaranteed next-day delivery) ಎಕ್ಸ್‌ಪ್ರೆಸ್‌ ಸೇವೆಯನ್ನು, ಇದೀಗ ಭಾರತದ ಸುಮಾರು 150 ನಗರಗಳಿಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ಶಿಯೋಮಿ ಮುಖ್ಯಸ್ಥ ಮನು ಕುಮಾರ ಜೈನ್‌ ತಿಳಿಸಿದ್ದಾರೆ.

ಶಿಯೋಮಿಯ ಹೊಸ ಸೇವೆ!..ಮರು ದಿನವೇ ನಿಮ್ಮ ಕೈ ಸೇರಲಿವೆ ಉತ್ಪನ್ನಗಳು!

ಹೌದು, ಇನ್ಮುಂದೆ ಶಿಯೋಮಿಯ ಉತ್ಪನ್ನಗಳಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದರೇ ಹೆಚ್ಚಿನ ದಿನ ಕಾಯಬೇಕಿಲ್ಲ. ಏಕೆಂದರೇ ಮರುದಿನವೇ ಆರ್ಡರ್‌ ಮಾಡಿದ ವಸ್ತುವು ಕೈ ಸೇರಲಿದೆ. ಆದರೆ ಕಂಪನಿಯ ಅಧಿಕೃತ ತಾಣದಲ್ಲಿ ಆನ್‌ಲೈನ್‌ ಆರ್ಡರ್‌ ಮಾಡುವಾಗ ಎಕ್ಸ್‌ಪ್ರೆಸ್‌ ಡೆಲಿವರಿ ಆಯ್ಕೆಯನ್ನು ಸೆಲೆಕ್ಟ್‌ ಮಾಡಿಕೊಳ್ಳಬೇಕು. ಮತ್ತು ಅದಕ್ಕಾಗಿ ಗ್ರಾಹಕರು ಹೆಚ್ಚುವರಿ 49ರೂ.ಗಳನ್ನು ನೀಡಬೇಕಿದೆ.

<strong>ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!</strong>ಓದಿರಿ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!

ಶಿಯೋಮಿಯ ಹೊಸ ಸೇವೆ!..ಮರು ದಿನವೇ ನಿಮ್ಮ ಕೈ ಸೇರಲಿವೆ ಉತ್ಪನ್ನಗಳು!

ಗ್ರಾಹಕರಿಗೆ ವೇಗವಾಗಿ ಅವರು ಆರ್ಡರ್ ಮಾಡಿರುವ ಉತ್ಪನ್ನಗಳನ್ನು ತಲುಪಿಸಲು ಕಂಪನಿಯು ಎಕ್ಸ್‌ಪ್ರೆಸ್‌ ಡೆಲಿವರಿ ಸೇವೆಯನ್ನು ಆರಂಭಿಸಿತ್ತು ಅದನ್ನಿಗ ವಿಸ್ರಿಸಿದ್ದು, ಈ ಮೂಲಕ ಇ ಕಾಮರ್ಸ್‌ ಮಾರುಕಟ್ಟೆಯಲ್ಲಿ ಮುನ್ನೆಲೆಗೆ ಬರುವ ಸೂಚನೆಗಳನ್ನು ಹೊರಹಾಕಿದೆ. ಹಾಗಾದರೇ ಶಿಯೋಮಿಯು ವಿಸ್ತರಿಸಿರುವ ತನ್ನ ಎಕ್ಸ್‌ಪ್ರೆಸ್‌ ಡೆಲಿವರಿ ಸೇವೆಯ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಬಿಡುಗಡೆಗೆ ಸಿದ್ಧವಾದ ಮೊಟೊರೊಲಾ 'ಒನ್‌ ವಿಷನ್'!..48ಎಂಪಿ ಕ್ಯಾಮೆರಾ!ಓದಿರಿ : ಬಿಡುಗಡೆಗೆ ಸಿದ್ಧವಾದ ಮೊಟೊರೊಲಾ 'ಒನ್‌ ವಿಷನ್'!..48ಎಂಪಿ ಕ್ಯಾಮೆರಾ!

ಬೆಂಗಳೂರಿನಲ್ಲಿ ಕಳೆದ ವರ್ಷವೇ ಆರಂಭ

ಬೆಂಗಳೂರಿನಲ್ಲಿ ಕಳೆದ ವರ್ಷವೇ ಆರಂಭ

ಶಿಯೋಮಿಯು ಕಂಪನಿಯು ಕಳೆದ ವರ್ಷ ಬೆಂಗಳೂರಿನಲ್ಲಿ 'ಎಕ್ಸ್‌ಪ್ರೆಸ್‌ ಡೆಲಿವರಿ ಸೇವೆ'ಯನ್ನು ಮೊದಲ ಬಾರಿಗೆ ಆರಂಭಿಸಿದ್ದು, ಆನ್‌ಲೈನ್‌ನಲ್ಲಿ ಕಂಪನಿಯ ಆಯ್ದ ಉತ್ಪನ್ನವನ್ನು ಆರ್ಡರ್‌ ಮಾಡಿದರೇ, ಮರು ದಿನವೇ ಡೆಲಿವರಿ ಪಡೆಯಬಹುದಾಗಿದೆ. ಇದೀಗ ಈ ಸೇವೆಯನ್ನು ಕಂಪನಿಯು ದೇಶದ ಇತರೆ 150 ಪ್ರಮುಖ ನಗರಗಳಿಗೆ ವಿಸ್ತರಿಸಿದ್ದು, ಮುಂದೆ ಇನ್ನಷ್ಟು ನಗರಗಳಿಗೆ ಈ ಸೇವೆಯನ್ನು ತಲುಪಿಸುವ ಯೋಜನೆಗಳಿವೆ ಎನ್ನಲಾಗಿದೆ.

90 ಉತ್ಪನ್ನಗಳು ಲಭ್ಯ

90 ಉತ್ಪನ್ನಗಳು ಲಭ್ಯ

ಭಾರತೀಯ ಮಾರುಕಟ್ಟೆಯಲ್ಲಿ ಮಿಂಚಿನ ಓಟದಲ್ಲಿ ಬೆಳೆಯುತ್ತಿರುವ ಶಿಯೋಮಿ ಇ ಕಾಮರ್ಸ್‌ ತಾಣವು ತನ್ನದೇ ಹಲವು ಉತ್ಪನ್ನಗಳನ್ನು ಹೊಂದಿದ್ದು, ಅವುಗಳಲ್ಲಿ ಆಯ್ದ 90 ಉತ್ಪನ್ನಗಳಿಗೆ 'ಗ್ಯಾರೆಂಟೆಡ್ ನೆಕ್ಸ್ಟ್ ಡೇ ಡೆಲಿವರಿ' ಸೇವೆಯು ಲಭ್ಯವಿರಲಿದೆ. ಈ 90 ಉತ್ಪನ್ನಗಳು ಗ್ರಾಹಕರಿಗೆ ಅಗತ್ಯವಾಗಿರುವ ವಸ್ತುಗಳಾಗಿದ್ದು, ಆನ್‌ಲೈನ್‌ ಆರ್ಡರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಇದೆ.

ಓದಿರಿ : 'ಸ್ಯಾಮ್‌ಸಂಗ್‌'ನ ವಿಶ್ವದ ಮೊದಲ 'QLED 8K' ಟಿವಿ ಲಾಂಚ್!..ಹೇಗಿದೆ ಗೊತ್ತಾ? ಓದಿರಿ : 'ಸ್ಯಾಮ್‌ಸಂಗ್‌'ನ ವಿಶ್ವದ ಮೊದಲ 'QLED 8K' ಟಿವಿ ಲಾಂಚ್!..ಹೇಗಿದೆ ಗೊತ್ತಾ?

ನೇರ ಸ್ಪರ್ಧೆಗೆ ಇಳಿದ ಶಿಯೋಮಿ

ನೇರ ಸ್ಪರ್ಧೆಗೆ ಇಳಿದ ಶಿಯೋಮಿ

ಇ ಕಾಮರ್ಸ್ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಇದ್ದು, ಈಗಾಗಲೇ ಇ ಕಾಮರ್ಸ್ ದೈತ್ಯ ಎನಿಸಿಕೊಂಡಿರುವ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಎಕ್ಸ್‌ಪ್ರೆಸ್‌ ಡೆಲಿವರಿಯನ್ನು ಆರಂಭಿಸಿವೆ. ಇದೀಗ ಶಿಯೋಮಿ ಈ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದು, ಅದಕ್ಕಾಗಿ ಹೆಚ್ಚಿನ ನಗರಗಳಿಗೆ 'ಗ್ಯಾರೆಂಟೆಡ್‌ ನೆಕ್ಸ್ಟ್‌ ಡೇ ಡೆಲಿವರಿ' ಸೇವೆಯನ್ನು ವಿಸ್ತಿರಿಸಿದೆ.

ಎಕ್ಸ್‌ಪ್ರೆಸ್‌ ಸೇವೆಗೆ ಹೆಚ್ಚುವರಿ ಶುಲ್ಕ

ಎಕ್ಸ್‌ಪ್ರೆಸ್‌ ಸೇವೆಗೆ ಹೆಚ್ಚುವರಿ ಶುಲ್ಕ

ನೀವು ಶಿಯೋಮಿ ಕಂಪನಿಯ ಇ ಕಾಮರ್ಸ್‌ ತಾಣದಲ್ಲಿ ಆರ್ಡರ್‌ ಮಾಡಿರುವ ಉತ್ಪನ್ನವು ಮರು ದಿನವೇ ನಿಮ್ಮ ಕೈ ಸೇರಬೇಕಿದ್ದರೇ ನೀವು ಹೆಚ್ಚುವರಿಯಾಗಿ 49ರೂ.ಗಳನ್ನು ನೀಡಬೇಕು. ಆರ್ಡರ್‌ ಮಾಡುವ ಸಮಯದಲ್ಲಿ ಎಕ್ಸ್‌ಪ್ರೆಸ್‌ ಡೆಲಿವರಿ ಆಯ್ಕೆಯು ನಿಮ್ಮ ನಗರದಲ್ಲಿ ಲಭ್ಯವಿದೆಯೇ ಚೆಕ್‌ ಮಾಡಿ, ಲಭ್ಯವಿದ್ದರೇ ಆರ್ಡರ್‌ ಮಾಡಬಹುದು.

ಯಾವ ಟೈಮ್‌ನಲ್ಲಿ ಬುಕ್‌ ಮಾಡಬೇಕು

ಯಾವ ಟೈಮ್‌ನಲ್ಲಿ ಬುಕ್‌ ಮಾಡಬೇಕು

ಶಿಯೋಮಿಯು ಜಾರಿ ಮಾಡಿರುವ ಹೊಸ ಎಕ್ಸ್‌ಪ್ರೆಸ್‌ ಡೆಲಿವರಿ ಸೇವೆಯನ್ನು ಪಡೆಯಲು ಬೆಂಗಳೂರು ಮೂಲದ ಗ್ರಾಹಕರು ಬೆಳಿಗ್ಗೆ 9 ರಿಂದ ಸಂಜೆ 4.30ಗಂಟೆಯ ಒಳಗೆ ಉತ್ಪನ್ನಗಳನ್ನು ಆರ್ಡರ್ ಮಾಡಬೇಕಿದೆ. ಕಂಪನಿಯು ನಿಗದಿ ಮಾಡಿರುವ ಈ ಸಮಯದಲ್ಲಿ ಆನ್‌ಲೈನ್‌ ಆರ್ಡರ್‌ ಮಾಡಿದರೇ ಮರುದಿನವೇ ನೀವು ಆರ್ಡರ್‌ ಮಾಡಿರುವ ಉತ್ಪನ್ನ ನಿಮ್ಮ ಕೈ ಸೇರಲಿದೆ.

ಓದಿರಿ : ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ? ಓದಿರಿ : ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ?

Best Mobiles in India

English summary
Now you can expect faster delivery times when you order smartphones or accessories from Mi.com. Xiaomi has introduced Express Delivery option with guaranteed next day delivery. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X