Home
ಸುದ್ದಿಜಾಲ

ಇನ್ನು ಕೆಲವೇ ದಿನಗಳಲ್ಲಿ ಶಿಯೋಮಿ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡುವುದು ಪಕ್ಕಾ!

ಮೊಬೈಲ್‌ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಥಾನ ಪಡೆದಿರುವ ಬ್ರ್ಯಾಂಡ್‌ಗಳಲ್ಲಿ ಒಂದಾದ ಶಿಯೋಮಿ (Xiaomi) ಹೊಸದಾಗಿ ಶಿಯೋಮಿ 13 ಸರಣಿಯನ್ನು ಪರಿಚಯಿಸಲಿದೆ. ಇದರೊಂದಿಗೆ ಶಿಯೋಮಿ ಕಂಪನಿಯು ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಭಾರತದಲ್ಲಿ ಇತ್ತೀಚಿನ MIUI 14 ಅನ್ನು ಪರಿಚಯಿಸಲು ಸಿದ್ಧವಾಗಿದೆ.

ಹೌದು, ಶಿಯೋಮಿ ಸಂಸ್ಥೆಯು MIUI 14 ಅಪ್‌ಡೇಟ್‌ ಅನ್ನು ಇದೇ ಫೆಬ್ರವರಿ 27 ರಂದು ಭಾರತದಲ್ಲಿ ಹಾಗೂ ಜಾಗತಿಕವಾಗಿ ಅಧಿಕೃತವಾಗಿ ಪರಿಚಯಿಸಲಿದೆ. ಈ ಅಪ್‌ಡೇಟ್‌ ನೊಂದಿಗೆ, ಶಿಯೋಮಿ ಮತ್ತು ರೆಡ್ಮಿ ಸ್ಮಾರ್ಟ್‌ ಫೋನ್ ಬಳಕೆದಾರರಿಗೆ ಹಲವಾರು ಕೆಲವು ಹೊಸ ಫೀಚರ್ಸ್‌ಗಳು ಸೇರ್ಪಡೆ ಆಗಲಿವೆ.

ಇನ್ನು ಕೆಲವೇ ದಿನಗಳಲ್ಲಿ ಶಿಯೋಮಿ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡುವುದು ಪಕ್ಕಾ

ನೂತನ MIUI 14 ಅಪ್‌ಡೇಟ್‌ ಅಧಿಕ ಸರಳವಾದ ಸ್ಕೀನ್‌ ಓಎಸ್‌ ಆಗಿದೆ. ಈ ಸ್ಕೀನ್‌ ಓಎಸ್‌ ಹೆಚ್ಚು ಸ್ಟೋರೇಜ್‌ ಕಬಳಿಸುವುದಿಲ್ಲ. ಇದು ಕಡಿಮೆ ಸಿಸ್ಟಂ ಆಕ್ಯುಪೆನ್ಸಿಯನ್ನು ಹೊಂದಿದ್ದು, MIUI 13 ಗಿಂತ ಸುಮಾರು 1.5GB ಸ್ಟೋರೇಜ್‌ ಸ್ಥಳಾವಕಾಶ ಅನ್ನು ಹೊಂದಿದೆ. ಕಡಿಮೆ ಪ್ರೀ ಇನ್‌ಸ್ಟಾಲ್‌ ಅಪ್ಲಿಕೇಶನ್‌ಗಳು (ಕೇವಲ 8 ಅನ್‌ಇನ್‌ಸ್ಟಾಲ್ ಮಾಡಬಹುದಾದವುಗಳು) ಮತ್ತು ಥರ್ಡ್‌ ಪಾರ್ಟಿ ಆಪ್‌ಗಳಿಗೆ ಆಪ್ಟಿಮೈಸೇಶನ್‌ಗಳು ಕಡಿಮೆ ಪವರ್‌ ಅನ್ನು ಬಳಕೆ ಮಾಡಲಿದೆ.

ಇನ್ನು ಕೆಲವೇ ದಿನಗಳಲ್ಲಿ ಶಿಯೋಮಿ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡುವುದು ಪಕ್ಕಾ

ಹಾಗೆಯೇ ಮತ್ತೊಂದು ಆಪ್‌-ಕೇಂದ್ರಿತ ಫೀಚರ್‌ ಏಂದರೆ, ಮೇಲಿಂದ ಮೇಲೆ ಬಳಸದ ಆಪ್‌ಗಳ ಸ್ವಯಂಚಾಲಿತ ಸ್ಲೀಪ್‌ ಮೋಡ್. ಇದು ಸಿಸ್ಟಂ ನಿರರ್ಗಳತೆಯನ್ನು 60% ರಷ್ಟು ಸುಧಾರಿಸುತ್ತದೆ. ಇದರೊಂದಿಗೆ ಕೆಲವು ದೃಶ್ಯ ಬದಲಾವಣೆಗಳನ್ನೂ ಸಹ ಕಾಣಬಹುದಾಗಿದೆ ಎನ್ನಲಾಗಿದೆ. ಹೊಸ ವಿಜೆಟ್‌ಗಳು, ಐಕಾನ್ ವಿನ್ಯಾಸಗಳು, ಗ್ರಾಹಕೀಯಗೊಳಿಸಬಹುದಾದ ಫೋಲ್ಡರ್‌ಗಳು ಸೇರಿದಂತೆ ಇತರೆ ಕೆಲವು ನೂತನ ಆಯ್ಕೆಗಳು ಸೇರ್ಪಡೆ ಆಗಲಿವೆ.

ಇತರ ಫೀಚರ್ಸ್‌ಗಳಲ್ಲಿ ಹೊಸ XiaoAi AI ಅಸಿಸ್ಟಂಟ್‌ 6.0, ಹಲವಾರು ಹೊಸ ಗೌಪ್ಯತೆ ಮತ್ತು ಭದ್ರತಾ ಫೀಚರ್ಸ್‌ಗಳು, ಹೆಲ್ತ್ ಶೇರಿಂಗ್ (ಬಹುತೇಕ iOS 15 ನಲ್ಲಿರುವಂತೆ) ಮತ್ತು ಇನ್ನೂ ಇತರೆ ಆಯ್ಕೆಗಳು ಸೇರಿವೆ. ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡುವ ವೇಳೆ ನೂತನ MIUI 14 ಸ್ಕೀನ್‌ ಓಎಸ್‌ ಸಹ ಪರಿಚಯಿಸಲಾಗುವುದು ಎಂದು ಹೇಳಲಾಗಿದೆ. ಹಾಗೆಯೇ ಶಿಯೋಮಿ ತನ್ನ ಬಹುನಿರೀಕ್ಷಿತ ಶಿಯೋಮಿ 13 ಸರಣಿ ಸಹ ಅನಾವರಣ ಮಾಡಲಿದೆ.

ಇನ್ನು ಕೆಲವೇ ದಿನಗಳಲ್ಲಿ ಶಿಯೋಮಿ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡುವುದು ಪಕ್ಕಾ

ಶಿಯೋಮಿ 13 ಲೈಟ್‌ ಫೀಚರ್ಸ್‌

ಶಿಯೋಮಿ 13 ಲೈಟ್‌ ಸ್ಮಾರ್ಟ್‌ಫೋನ್‌ 6.55 ಇಂಚಿನ AMOLED ಡಿಸ್‌ಪ್ಲೇಯನ್ನು ಒಳಗೊಂಡಿರಲಿದ್ದು, 1080 × 2400 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರಲಿದೆ.ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಒಳಗೊಂಡಿರಲಿದೆ.

ಇನ್ನು ಕೆಲವೇ ದಿನಗಳಲ್ಲಿ ಶಿಯೋಮಿ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡುವುದು ಪಕ್ಕಾ

50 ಮೆಗಾ ಪಿಕ್ಸಲ್‌ ಕ್ಯಾಮೆರಾ

ಹಾಗೆಯೇ ಈ ಫೋನ್ ಕ್ಯಾಮೆರಾ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಇನ್ನೆರಡು ಕ್ಯಾಮೆರಾಗಳು ಕ್ರಮವಾಗಿ 8 ಮೆಗಾ ಪಿಕ್ಸಲ್‌ ಹಾಗೂ 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಅನ್ನು ಹೊಂದಿರಲಿವೆ. ಹಾಗೆಯೇ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್‌ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ.

ಸ್ಮಾರ್ಟ್‌ಫೋನ್‌ 4500mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 67W ಫಾಸ್ಟ್‌ ಚಾರ್ಜಿಂಗ್ ಹೊಂದಿರಲಿದೆ. ಇದಲ್ಲದೇ Qi ವೈರ್‌ಲೆಸ್‌ ಚಾರ್ಜಿಂಗ್‌ ಸೌಲಭ್ಯವನ್ನು ಸಹ ಒಳಗೊಂಡಿರುವ ನಿರೀಕ್ಷೆಗಳಿವೆ. ಶಿಯೋಮಿ 13 ಲೈಟ್‌ ಸ್ಮಾರ್ಟ್‌ಫೋನಿನ 8GB + 128GB ವೇರಿಯಂಟ್‌ ಬೆಲೆ ಯುರೋಪ್‌ನಲ್ಲಿ € 499.90 ಆಗಿರಲಿದೆ. ಭಾರತದಲ್ಲಿ ಬೆಲೆ ಸುಮಾರು 44,100ರೂ. ಆಗಿರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Xiaomi introduce the latest MIUI 14 in India, which will happen the next day, that is, February 27. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+