ಶಿಯೋಮಿ ಫೋನ್‌ ಬಳಕೆದಾರರಿಗೆ ಮೂರು ಹೊಸ ಫೀಚರ್‌ ಲಭ್ಯ!

|

ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರಿಗೆ ಚಿರಪರಿಚಿತವಾಗಿರುವ 'ಶಿಯೋಮಿ' ಸಂಸ್ಥೆಯು ಇದೀಗ ತನ್ನ ಸ್ಮಾರ್ಟ್‌ಫೋನ್‌ಗಳಿಗೆ ಹೊಸತನದ ಟಚ್‌ ನೀಡಿದೆ. ಸಂಸ್ಥೆಯು ಹೊಸ MIUI 11 ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡಿದ್ದು, ಇದು ಕೆಲವು ಆಯ್ದ ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ನೂತನ ಫೀಚರ್ಸ್‌ಗಳು ಮತ್ತು ಆಪರೇಟಿಂಗ್‌ನಲ್ಲಿ ಹೊಸತನ ಸೇರಿದೆ. ಹಾಗೆಯೇ ಗ್ರಾಹಕರಿಗೆ ಅನುಕೂಲಕರ ಸೌಲಭ್ಯಗಳು ಸೇರಿವೆ.

ಶಿಯೋಮಿ ಸ್ಮಾರ್ಟ್‌ಫೋನ್

ಹೌದು, ಚೀನಾ ಮೂಲಕದ ಶಿಯೋಮಿ ಸ್ಮಾರ್ಟ್‌ಫೋನ್ ಕಂಪನಿಯು ಇದೀಗ ತನ್ನ MIUI 11 ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಿದೆ. ಈ ಸಾಫ್ಟ್‌ವೇರ್ ಅಪ್‌ಡೇಟ್‌ ಫೋಕಸ್‌ ಮೋಡ್(Focus mode), ಕರಿಕ್ಯೂಲಮ್‌ ಮೋಡ್(Curriculum Mode) ಮತ್ತು ಕಸ್ಟಮೈಸೆಬಲ್‌ ಲಾಕ್‌ಸ್ಕ್ರೀನ್‌(customisable lockscreens) ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗಾದರೇ ಶಿಯೋಮಿಯ MIUI 11 ಸಾಫ್ಟ್‌ವೇರ್ ಅಪ್‌ಡೇಟ್‌ನಲ್ಲಿ ಸೇರಿದ ಮೂರು ಹೊಸ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಫೋಕಸ್‌ ಮೋಡ್(Focus mode)

ಫೋಕಸ್‌ ಮೋಡ್(Focus mode)

ಶಿಯೋಮಿ ಸಾಫ್ಟ್‌ವೇರ್ ಅಪ್‌ಡೇಟ್‌ನಲ್ಲಿ ಫೋಕಸ್‌ ಮೋಡ್‌ ಹೊಸದಾಗಿ ಸೇರಿದ್ದು, ಇದು ಬಳಕೆದಾರರಿಗೆ ಸ್ಮಾರ್ಟ್‌ಫೋನ್ ಟೈಮ್‌ ಸೆಟ್ಟಿಂಗ್ ಮಾಡಲು ಅನುಕೂಲವಾಗಲಿದೆ. ಹಾಗೆಯೇ ಎಮರ್ಜೆನ್ಸಿ ಕರೆ, ಕ್ಯಾಮೆರಾ ಫೀಚರ್ಸ್‌ ಹೊರತುಪಡಿಸಿ ಬಳಕೆದಾರರು ಫೋನ್‌ ನಿಯಂತ್ರಿಸಬಹುದಾಗಿದೆ. ಫೋಕಸ್‌ ಮೋಡ್‌ ಫೀಚರ್‌ ಅನ್ನು ಸ್ಮಾರ್ಟ್‌ಫೋನಿನ ಸೆಟ್ಟಿಂಗ್ ಮತ್ತು ಸ್ಕ್ರೀನ್‌ಟೈಮ್‌ ಮ್ಯಾನೇಜಮೆಂಟ್‌ ಆಯ್ಕೆಯಲ್ಲಿ ಸಕ್ರಿಯ ಮಾಡಿಕೊಳ್ಳಬಹುದು.

ಕರಿಕ್ಯೂಲಮ್‌ ಮೋಡ್(Curriculum Mode)

ಕರಿಕ್ಯೂಲಮ್‌ ಮೋಡ್(Curriculum Mode)

MIUI 11 ಸಾಫ್ಟ್‌ವೇರ್ ಅಪ್‌ಡೇಟ್‌ನಲ್ಲಿ 'ಕರಿಕ್ಯೂಲಮ್‌ ಮೋಡ್' ಆಯ್ಕೆಯು ಬಳಕೆದಾರರಿಗೆ ಪರಿಚಿತವಾಗಿದೆ. ಈ ಫೀಚರ್‌ ವಿದ್ಯಾರ್ಥಿಗಳಿಗೆ ಉಪಯುಕ್ತ ಕ್ಯಾಲೆಂಡರ ಸೌಲಭ್ಯ ಒದಗಿಸಲಿದೆ. ಈ ಕರಿಕ್ಯೂಲಮ್‌ ಮೋಡ್‌ ಆಯ್ಕೆಯಲ್ಲಿ ವಿದ್ಯಾರ್ಥಿಗಳು ತಮ್ಮ ದೈನಂದಿನ ದಿನಚರಿಯ ಮಾಹಿತಿಗಳನ್ನು ಬರೆಯಲು ಅವಕಾಶ ಇರಲಿದೆ.

ಕಸ್ಟಮೈಸೆಬಲ್‌ ಲಾಕ್‌ಸ್ಕ್ರೀನ್‌(customisable lockscreens)

ಕಸ್ಟಮೈಸೆಬಲ್‌ ಲಾಕ್‌ಸ್ಕ್ರೀನ್‌(customisable lockscreens)

ಶಿಯೋಮಿಯ ಸಾಫ್ಟ್‌ವೇರ್ ಅಪ್‌ಡೇಟ್‌ನಲ್ಲಿ ಕಾಣಿಸಿಕೊಂಡ ಇನ್ನೊಂದು ಫೀಚರ್‌ ಅಂದರೇ ಅದು ಕಸ್ಟಮೈಸೆಬಲ್‌ ಲಾಕ್‌ಸ್ಕ್ರೀನ್‌ ಸೌಲಭ್ಯ. ಸ್ಮಾರ್ಟ್‌ಫೋನ್ ಲಾಕ್‌ಸ್ಕ್ರೀನ್‌ನಲ್ಲಿ ಕಲರ್‌, ಟೆಕ್ಸ್, ಇಮೋಜಿ, ಕಂಟೆಂಟ್‌ಗಳನ್ನು ಸೆಟ್‌ ಮಾಡಲು ಅನುವು ಮಾಡಿಕೊಡಲಿದೆ. ಬಳಕೆದಾರರು ಅವರಿಗೆ ಇಷ್ಟವಾದ ಕಲರ್‌, ಇಮೋಜಿಗಳನ್ನು, ಫೋಟೊಗಳನ್ನು ಮತ್ತು ಕ್ಯಾಪ್ಶನ್‌ಗಳನ್ನು ಸಹ ಸೇರಿಸಿಕೊಳ್ಳಬಹುದಾಗಿದೆ.

ಅಪ್‌ಡೇಟ್‌ ಕಂಡ ಫೋನ್‌ಗಳು

ಅಪ್‌ಡೇಟ್‌ ಕಂಡ ಫೋನ್‌ಗಳು

ಶಿಯೋಮಿಯ ಕಂಪನಿಯು ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಗೆ MIUI 11 ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡಿದೆ. ಅವುಗಳಲ್ಲಿ ಕಂಪನಿಯು ರೆಡ್ಮಿ ಕೆ20, ಪೊಕೊ ಎಫ್‌ 1, ರೆಡ್ಮಿ ನೋಟ್ 7 ಪ್ರೊ, ರೆಡ್ಮಿ ನೋಟ್ 7, ರೆಡ್ಮಿ Y3, ರೆಡ್ಮಿ 7 ಮತ್ತು ರೆಡ್ಮಿ ನೋಟ್‌ 7S ಸ್ಮಾರ್ಟ್‌ಫೋನ್‌ಗಳು ಸಾಫ್ಟ್‌ವೇರ್ ಅಪ್‌ಡೇಟ್‌ ಕಂಡಿವೆ.

Best Mobiles in India

English summary
Xiaomi’s MIUI 11 will be available to all the latest and last generation smartphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X