ನಾಳೆ ಶಿಯೋಮಿಯ ಹೊಸ ಹೈಪರ್ ಓಎಸ್ ಲಾಂಚ್!..ಯಾವೆಲ್ಲಾ ಫೋನ್‌ಗಳಿಗೆ ಇದು ಲಭ್ಯ!
ಶಿಯೋಮಿ ಸಂಸ್ಥೆಯು ಭಾರತದಲ್ಲಿ ತನ್ನ ಇತ್ತೀಚಿನ ಬಳಕೆದಾರ ಇಂಟರ್ಫೇಸ್, ಹೈಪರ್ ಓಎಸ್ (HyperOS) ಅನ್ನು ಅನಾವರಣಗೊಳಿಸಲು ಸಕಲ ತಯಾರಿ ನಡೆಸಿದೆ. ಈ ಯೂಸರ್ ಇಂಟರ್ಫೇಸ್ (UI) ಅನ್ನು ಸಂಸ್ಥೆಯು ಕಳೆದ ವರ್ಷ ಚೀನಾದಲ್ಲಿ ಪರಿಚಯಿಸಿದೆ. ಇದೀಗ ಇದೇ ಫೆಬ್ರವರಿ 29 ರಂದು ಭಾರತದಲ್ಲಿ ಹೈಪರ್ ಓಎಸ್ ಅನ್ನು ಅನಾವರಣ ಮಾಡಲಿದೆ.
ಹೌದು, ಶಿಯೋಮಿ ಸಂಸ್ಥೆಯು ನಾಳೆ ನೂತನ ಯೂಸರ್ ಇಂಟರ್ಫೇಸ್ ಹೈಪರ್ ಓಎಸ್ ಅನ್ನು ದೇಶದಲ್ಲಿ ಪರಿಚಯಿಸಲಿದೆ. ಕಳೆದ ವರ್ಷ ಚೀನಾದಲ್ಲಿ ಶಿಯೋಮಿ 14ಸರಣಿಯ ಫೋನ್‌ಗಳಲ್ಲಿ ಈ ಯುಐ (ಯೂಸರ್ ಇಂಟರ್ಫೇಸ್) ಅನ್ನು ಘೋಷಿಸಿತ್ತು. ಬಾರ್ಸಿಲೋನಾದಲ್ಲಿನ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2024 ಕಾರ್ಯಕ್ರಮದಲ್ಲಿ ಸಂಸ್ಥೆಯು ಹೊಸ UI ಅಪ್‌ಡೇಟ್ ಪಡೆಯುವ ಫೋನ್‌ಗಳ ಲಿಸ್ಟ್ ತಿಳಿಸಿದೆ.

ಶಿಯೋಮಿಯು ಬಿಡುಗಡೆ ಮಾಡಲಿರುವ ನೂತನ ಯೂಸರ್ ಇಂಟರ್ಫೇಸ್ ಹೈಪರ್ ಓಎಸ್ ಹಲವು ಹೊಸ ಅಪ್‌ಡೇಟ್ ಆಯ್ಕೆಗಳನ್ನು ಒಳಗೊಂಡಿರಲಿದೆ. ಹಾಗೆಯೇ ಇತ್ತೀಚಿನ ಕೆಲವು ಶಿಯೋಮಿಯ ಫೋನ್‌ಗಳು ಹೈಪರ್ ಓಎಸ್ ಪಡೆದುಕೊಳ್ಳಲಿವೆ. ಅಂದಹಾಗೆ ಇದೇ ಮಾರ್ಚ್ 7 ರಂದು ಹೊಸ ಯುಐ ಜೊತೆಗೆ ಶಿಯೋಮಿ 14 ಫೋನ್ ದೇಶಿಯ ಮಾರುಕಟ್ಟೆಗೆ ಲಾಂಚ್ ಆಗಲಿದೆ. ಹಾಗಾದರೇ ಶಿಯೋಮಿಯ ಹೈಪರ್ ಓಎಸ್ ಪಡೆಯಲಿರುವ ಫೋನ್‌ಗಳ ಲಿಸ್ಟ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಹೈಪರ್ ಓಎಸ್ ಸ್ವೀಕರಿಸುವ ಫೋನ್‌ಗಳ ಲಿಸ್ಟ್
ಶಿಯೋಮಿ 13 ಸ್ಮಾರ್ಟ್‌ಫೋನ್
ಶಿಯೋಮಿ 13 ಪ್ರೊ ಸ್ಮಾರ್ಟ್‌ಫೋನ್
ಶಿಯೋಮಿ 13 ಅಲ್ಟ್ರಾ ಸ್ಮಾರ್ಟ್‌ಫೋನ್
ಶಿಯೋಮಿ 13T ಸ್ಮಾರ್ಟ್‌ಫೋನ್
ಶಿಯೋಮಿ 13T ಪ್ರೊ ಸ್ಮಾರ್ಟ್‌ಫೋನ್
ಶಿಯೋಮಿ 12 ಸ್ಮಾರ್ಟ್‌ಫೋನ್
ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್
ಶಿಯೋಮಿ 12T ಸ್ಮಾರ್ಟ್‌ಫೋನ್
ಶಿಯೋಮಿ 12T ಪ್ರೊ ಸ್ಮಾರ್ಟ್‌ಫೋನ್
ರೆಡ್ಮಿ ನೋಟ್ 13 5G ಸ್ಮಾರ್ಟ್‌ಫೋನ್
ರೆಡ್ಮಿ ನೋಟ್ 13 ಪ್ರೊ 5G ಸ್ಮಾರ್ಟ್‌ಫೋನ್
ರೆಡ್ಮಿ ನೋಟ್ 13 ಪ್ರೊ+ 5G ಸ್ಮಾರ್ಟ್‌ಫೋನ್
ರೆಡ್ಮಿ ನೋಟ್ 12 5G ಸ್ಮಾರ್ಟ್‌ಫೋನ್
ರೆಡ್ಮಿ ನೋಟ್ 12 ಪ್ರೊ 5G ಸ್ಮಾರ್ಟ್‌ಫೋನ್
ರೆಡ್ಮಿ ನೋಟ್ 12 ಪ್ರೊ+ 5G ಸ್ಮಾರ್ಟ್‌ಫೋನ್
ಹೈಪರ್ ಓಎಸ್ ಕೆಲವು ಫೀಚರ್ಸ್ ಹೀಗಿರಲಿವೆ
ಪರಿಷ್ಕರಿಸಿದ UI ಆಯ್ಕೆ - ಹೈಪರ್ ಓಎಸ್ ಐಒಎಸ್‌ನಿಂದ ಕೆಲವು ಪರಿಚಿತ ವಿನ್ಯಾಸ ಆಯ್ಕೆಗಳನ್ನು ಅಳವಡಿಸಿಕೊಂಡಿದ್ದು, ಡೈನಾಮಿಕ್ ಐಲ್ಯಾಂಡ್‌ಗೆ ಹೋಲುವ ರೀತಿಯ ಲಾಕ್ ಸ್ಕ್ರೀನ್ ನೋಟಿಫಿಕೇಶನ್ ಇಂಟರ್ಫೇಸ್ ಇರಲಿದೆ. ಅಲ್ಲದೇ ಹೆಚ್ಚುವರಿಯಾಗಿ, ಬಳಕೆದಾರರು ತಮ್ಮ ಆದ್ಯತೆಗಳಿಗೆ ಸರಿಹೊಂದುವಂತೆ ಕ್ವಿಕ್ ಸೆಟ್ಟಿಂಗ್‌ಗಳು ಮತ್ತು ವಿಜೆಟ್‌ಗಳನ್ನು ಕಸ್ಟಮೈಸ್ ಮಾಡುವ ಆಯ್ಕೆ ಲಭ್ಯ ಇರಲಿದೆ.
ಕಾರ್ಯಕ್ಷಮತೆಯ ಬೂಸ್ಟ್ ಆಯ್ಕೆ - ಯುಸರ್ ಇಂಟರ್ಫೇಸ್ ಸ್ಪೀಡ್ ಆದ ಬೂಟ್ ಸಮಯಗಳು, ವರ್ಧಿತ ಮೆಮೊರಿ ನಿರ್ವಹಣೆಯ ಮೂಲಕ ಸುಧಾರಿತ ಆಪ್ ಕಾರ್ಯ ಕ್ಷಮತೆ ಹಾಗೂ ಸುಗಮವಾದ ಅನಿಮೇಷನ್‌ಗಳನ್ನು ಒದಗಿಸಲಿದೆ ಎಂದು ಹೇಳಲಾಗಿದೆ.
ತಡೆರಹಿತ ಕನೆಕ್ಟಿವಿಟಿ ಆಯ್ಕೆ - ಹೈಪರ್ ಓಎಸ್ ಫೋನಿನ ಏಕೀಕರಣವನ್ನು ಸಹ ಸುಗಮಗೊಳಿಸುತ್ತದೆ, ಸುಲಭವಾದ ಅಪ್ಲಿಕೇಶನ್ ವರ್ಗಾವಣೆಗಳನ್ನು ಸಕ್ರಿಯಗೊಳಿಸುತ್ತದೆ, ಪರದೆಯ ಪ್ರತಿಬಿಂಬಿಸುವಿಕೆ ಮತ್ತು ಕ್ಲಿಪ್‌ಬೋರ್ಡ್ ವಿಷಯವನ್ನು ಹಂಚಿಕೊಳ್ಳುತ್ತದೆ.
AI ಏಕೀಕರಣ: HyperOS ಅತ್ಯಾಧುನಿಕ AI ಸಾಮರ್ಥ್ಯಗಳನ್ನು ನಿಯಂತ್ರಿಸುತ್ತದೆ, ಟೆಕ್ಸ್ಟ್ ಮತ್ತು ಇಮೇಜ್ ಜೆನರೇಷನ್, ಇಮೇಜ್ ಸರ್ಚ್ ಮತ್ತು ಫೋಟೋಗಳಿಂದ ಟೆಕ್ಸ್ಟ್ ಅನ್ನು ಬೇರ್ಪಡಿಸುವ ಫೀಚರ್ಸ್ ಅನ್ನು ಸಂಭಾವ್ಯವಾಗಿ ನೀಡುತ್ತದೆ ಎನ್ನಲಾಗಿದೆ.


Click it and Unblock the Notifications








