Home
ಸುದ್ದಿಜಾಲ

Xiaomi: ಇನ್ಮುಂದೆ ಹಿಡನ್ ಕ್ಯಾಮೆರಾ ಪತ್ತೆ ಮಾಡೋದು ಬಹಳ ಸುಲಭ! ಶಿಯೋಮಿಯಿಂದ ಹೊಸ ಡಿವೈಸ್‌?

ಹಿಡನ್ ಕ್ಯಾಮೆರಾಗಳು (Hidden camera) ಇಂದು ಏನೆಲ್ಲಾ ಮಾಡುತ್ತಿವೆ ಅನ್ನೋದು ನಿಮಗೆ ತಿಳಿದ ವಿಚಾರವೇ ಹೌದು. ಅದರಲ್ಲೂ ಅದೆಷ್ಟೋ ರಾಜಕಾರಣಿಗಳು ರಾಜೀನಾಮೆ ಕೊಡುವಂತೆ ಮಾಡಿವೆ. ಇನ್ನೂ ಕೆಲವೆಡೆ ಉತ್ತಮರು ತಲೆ ಎತ್ತಿಕೊಂಡು ಹೋಗದಂತೆ ಮಾಡಿದೆ. ಈ ಮೂಲಕ ಒಳ್ಳೆಯದು ಕೆಟ್ಟದ್ದೂ ಎರಡೂ ಸಹ ಇದರಿಂದ ಆಗುತ್ತಿದೆ. ಆದರೆ ಇನ್ಮುಂದೆ ಈ ಹಿಡನ್ ಕ್ಯಾಮೆರಾಗಳ ಆಟ ನಡೆಯೋದಿಲ್ಲ ಅನಿಸುತ್ತೆ.

ಹೌದು, ಹಿಡನ್ ಕ್ಯಾಮೆರಾ ಅನ್ನೋ ವಿಷಯವೇ ಬಹುಪಾಲು ಜನರಿಗೆ ಇನ್ನಿಲ್ಲದಂತೆ ಕಾಡುವ ಸಮಸ್ಯೆ ಆಗಿದೆ. ಕೆಲವರು ಇದನ್ನು ಒಳ್ಳೆಯ ವಿಷಯಕ್ಕೆ ಬಳಕೆ ಮಾಡಿಕೊಂಡು ಸಮಾಜಕ್ಕೆ ತೆರೆದಿಟ್ಟರೆ ಇನ್ನೂ ಹಲವರು ಇದನ್ನು ದುರುಪಯೋಗ ಮಾಡಿಕೊಂಡು ಬಲಿಪಶುಗಳಿಂದ ಹಣವನ್ನು ಪಡೆಯುವ ಕೆಲಸ ಮಾಡುತ್ತಾರೆ. ಆದರೆ, ಇನ್ಮುಂದೆ ಯಾರೇ ಆದರೂ ಈ ಹಿಡನ್ ಕ್ಯಾಮೆರಾಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ. ಇದಕ್ಕಾಗಿಯೇ ಶಿಯೋಮಿ (Xiaomi) ಹೊಸ ಡಿವೈಸ್‌ ಅನ್ನು ಅನಾವರಣ ಮಾಡಲಿದೆ. ಹಾಗಿದ್ರೆ ಯಾವುದು ಈ ಡಿವೈಸ್‌?, ಇದು ಹೇಗೆ ಕೆಲಸ ಮಾಡಲಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಇನ್ಮುಂದೆ ಹಿಡನ್ ಕ್ಯಾಮೆರಾ ಪತ್ತೆ ಮಾಡೋದು ಬಹಳ ಸುಲಭ! ಶಿಯೋಮಿಯಿಂದ ಹೊಸ ಡಿವೈಸ್‌?

ಹಿಡನ್ ಕ್ಯಾಮೆರಾ ಪತ್ತೆ ಮಾಡುವ ಶಿಯೋಮಿ ಡಿವೈಸ್‌: ನಿಮ್ಮ ಸುತ್ತಲೂ ಯಾವುದಾದರೂ ಹಿಡನ್ ಕ್ಯಾಮೆರಾ ಇದೆಯೇ ಅನ್ನೋದನ್ನು ಸುಲಭವಾಗಿ ಪತ್ತೆ ಮಾಡಲು ಶಿಯೋಮಿ ಇನ್ನೇನು ಕೆಲವೇ ದಿನಗಳಲ್ಲಿ ಧರಿಸಬಹುದಾದ ಡಿವೈಸ್‌ ಅನ್ನು ಅನಾವರಣ ಮಾಡಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಶಿಯೋಮಿ ಈ ಧರಿಸಬಹುದಾದ ಡಿವೈಸ್‌ಗಾಗಿ ಪೇಟೆಂಟ್ ಸಹ ಪಡೆದುಕೊಂಡಿದೆ ಎಂದು ವರದಿಯಾಗಿದೆ,

ಇನ್ನು ಈ ವಿಶೇಷ ಡಿವೈಸ್‌ ನಿಮ್ಮ ಸುತ್ತಲಿನ ರಹಸ್ಯ ಕ್ಯಾಮೆರಾಗಳ ಬಗ್ಗೆ ನಿಮಗೆ ಮಾಹಿತಿ ನೀಡುವ ಕೆಲಸ ಮಾಡುತ್ತದೆ. ಚೈನೀಸ್ ಟೆಕ್ ಪ್ಲೇಯರ್‌ನ ಈ ಸ್ಮಾರ್ಟ್ ಡಿವೈಸ್‌ ಆಂಟಿ-ಪೀಪ್ ವಿಧಾನದಲ್ಲಿ ಕೆಲಸ ಮಾಡುತ್ತದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಈ ತಂತ್ರಜ್ಞಾನವು ನಿಮ್ಮ ಸುತ್ತಲಿನ ಯಾವುದೇ ಎಲೆಕ್ಟ್ರಾನಿಕ್ ಟೂಲ್ಸ್‌ ಮತ್ತು ಸ್ಟೋರೇಜ್‌ ಮೀಡಿಯಾಗಳನ್ನು ಪತ್ತೆ ಮಾಡುವ ಕೆಲಸ ಮಾಡುತ್ತದೆ. ಈ ಸಂಬಂಧ ಗಿಜ್ಮೊಚೀನಾ ನಲ್ಲಿ ಮೊದಲು ವರದಿ ಮಾಡಲಾಗಿದೆ. ಅಲ್ಲಿ ಶಿಯೋಮಿ ಧರಿಸಬಹುದಾದ ಡಿವೈಸ್‌ನಲ್ಲಿ ಕೆಲಸ ಮಾಡುತ್ತಿದೆ ಅನ್ನೋದನ್ನು ಉಲ್ಲೇಖ ಮಾಡಲಾಗಿದೆ.

ಇನ್ಮುಂದೆ ಹಿಡನ್ ಕ್ಯಾಮೆರಾ ಪತ್ತೆ ಮಾಡೋದು ಬಹಳ ಸುಲಭ! ಶಿಯೋಮಿಯಿಂದ ಹೊಸ ಡಿವೈಸ್‌?

ಇದು ಹೇಗೆ ಕೆಲಸ ಮಾಡಲಿದೆ?: ವರದಿಗಳಲ್ಲಿ ಉಲ್ಲೇಖ ಮಾಡಿದಂತೆ ಈ ಡಿವೈಸ್‌ ಕ್ಯಾಮೆರಾದಿಂದ ತೆಗೆದ ಫೋಟೋ ಮತ್ತು ಯಾವುದೇ ಶೂಟಿಂಗ್ ಡಿವೈಸ್‌ನ ಶೂಟಿಂಗ್ ಕೋನದ ಬಗ್ಗೆ ಮಾಹಿತಿಯನ್ನು ಪಡೆಯುವ ಸಾಮರ್ಥ್ಯವನ್ನು ಪಡದಿರುತ್ತದಂತೆ. ಯಾವುದೇ ರಹಸ್ಯ ಕ್ಯಾಮರಾದಿಂದ ಚಿತ್ರವನ್ನು ಸೆರೆಹಿಡಿದ ತಕ್ಷಣವೇ ಈ ಡಿವೈಸ್‌ ಶೂಟಿಂಗ್ ಕೋನ ಮತ್ತು ಶೂಟಿಂಗ್ ಡಿವೈಸ್‌ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುತ್ತದಂತೆ.

ಪೇಟೆಂಟ್ ಪ್ರಕಾರ, ಇದು ಆಂಟಿ-ಪೀಪ್ ಕಾರ್ಯದಲ್ಲಿ ಕೆಲಸ ಮಾಡುತ್ತದೆ ಎನ್ನಲಾಗಿದ್ದು, ರಹಸ್ಯ ಕ್ಯಾಮರಾ ಹತ್ತಿರದಲ್ಲಿದ್ದಾಗ ಡಿವೈಸ್‌ ಬಳಕೆದಾರರನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಇನ್ನು ಸ್ಮಾರ್ಟ್ ವಾಚ್‌ಗಳು, ಫಿಟ್‌ನೆಸ್ ಬ್ಯಾಂಡ್‌ಗಳು ಇತ್ಯಾದಿಗಳಂತಹ ಶಿಯೋಮಿಯ ಪ್ರಸ್ತುತ ಧರಿಸಬಹುದಾದ ಡಿವೈಸ್‌ಗಲ್ಲಿ ಯಾವುದೂ ಸಹ ಇನ್‌ಬಿಲ್ಟ್‌ ಕ್ಯಾಮೆರಾವನ್ನು ಹೊಂದಿಲ್ಲ. ಆದರೆ ಮುಂದೆ ರ್ಯಾಬಿಟ್ ಚಿಲ್ಡ್ರನ್ಸ್‌ನಲ್ಲಿ ಆಂಟಿ-ಪೀಪ್ ಸೌಲಭ್ಯ ನೀಡಬಹುದು ಎಂದು ಹೇಳಲಾಗುತ್ತಿದೆ.

ಇನ್ಮುಂದೆ ಹಿಡನ್ ಕ್ಯಾಮೆರಾ ಪತ್ತೆ ಮಾಡೋದು ಬಹಳ ಸುಲಭ! ಶಿಯೋಮಿಯಿಂದ ಹೊಸ ಡಿವೈಸ್‌?

ಇದರ ಹೊರತಾಗಿ, MIJIA ಸ್ಮಾರ್ಟ್ ಗ್ಲಾಸ್ ಇನ್‌ಬಿಲ್ಟ್ ಕ್ಯಾಮೆರಾದೊಂದಿಗೆ ಬರುತ್ತದೆ ಎಂದು ತಿಳಿದುಬಂದಿದೆ. ಅಂದರೆ ಇದು ಆಂಟಿ-ಪೀಪ್ ಪ್ರಾಂಪ್ಟ್ ಕಾರ್ಯವನ್ನು ಬೆಂಬಲಿಸುತ್ತದೆ. ಅಲ್ಲದೆ, ಕಂಪನಿಯು ಇತರ ಅನೇಕ ಧರಿಸಬಹುದಾದ ಡಿವೈಸ್‌ಗಳಲ್ಲಿ ಈ ಸೌಲಭ್ಯ ನೀಡಲು ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದ್ದು, ಈ ಮೂಲಕ ಬಳಕೆದಾರರು ತಮ್ಮ ಖಾಸಗಿತನವನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ.

ಈ ಡಿವೈಸ್ ಎಂದಿನಿಂದ ಲಭ್ಯ? : ಈ ಡಿವೈಸ್‌ ಯಾವಾಗ ಲಾಂಚ್‌ ಆಗಲಿದೆ, ಇದರ ಫೀಚರ್ಸ್‌ ಏನು ಅನ್ನೋ ಹೆಚ್ಚಿನ ಮಾಹಿತಿಯನ್ನು ಶಿಯೋಮಿ ಅಧಿಕೃತವಾಗಿ ಈವರೆಗೂ ನೀಡಿಲ್ಲ. ಅದಾಗ್ಯೂ ಇದು ಈ ವರ್ಷದ ಅಂತ್ಯದಲ್ಲಿ ಲಭ್ಯವಾಗಬಹುದು ಎಂಬ ಮಾಹಿತಿ ತಿಳಿದುಬಂದಿದೆ. ಇದರಿಂದ ಇನ್ಮುಂದೆ ಯಾರೂ ಸಹ ಸಂಕಷ್ಟಕ್ಕೆ ಸಿಲುಕುವುದರಿಂದ ಪಾರಾಗಬಹುದಾಗಿದೆ.

Best Mobiles in India

English summary
Xiaomi will announce a hidden camera detection device in a few days. Xiaomi will work on this device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+